28/02/2020
18 ರಿಂದ 25 ವರ್ಷದೊಳಗಿನ ನನ್ನ ಯುವ ಮಿತ್ರರೆ ನಿಮಗೆ ಈ ನಿಶಾಚರ ವ್ಯಕ್ತಿಯ ಸಂದೇಶ.ನಿರುದ್ಯೋಗದಿಂದ ಬಳಲಿ ಬೆಂಡಾಗಿ ಅಡ್ಡದಾರಿ ಹಿಡಿತೀನಿ ಅಂದ್ರೆ ಆ ಅಡ್ಡದಾರಿಯ ಹಿಂದಿನ ರಹದಾರಿ ತಿಳಿದುಕೊಳ್ನಿ ದಾವೂದ್ ಇಬ್ರಾಹಿಂ ಮತ್ತು ಬಿನ್ ಲಾಡನ್ ಮತ್ತು ವಿರಪ್ಪನ್ ಮತ್ತು ಬನ್ಸಂಜೆ ರಾಜ ಇವರ ಹಣೆ ಬರಹವನ್ನು ಪಂಚಬೂತಗಳೆ ಬರೆದವು ಮತ್ತು ಆಕಸ್ಮಿಕ ಟರ್ನಿಂಗ್ ಪಾಯಿಂಟ್ ಗಳು ಅವರ ಜೀವನ ದಲ್ಲಿ ಬಂದು ಅವರನ್ನು ಆ ಮೃತ್ಯು ಕೂಪಕ್ಕೆ ತಳ್ಳಿದವು ಹಾಗಗಿ ಅವರು ಡಾನ್ ಗಳದರು ಮತ್ತು ಈ ಜೀವನ ಪಂಚಬೂತಗಳೆ ಕೊಟ್ಟವು.ಆದರೆ ಇದನ್ನು ಅವರೆ ಆರಿಸಿಕೊಂಡಿಲ್ಲ ಇದು ಪೂರ್ವ ಜನ್ಮದ ಪಾಪಕರ್ಮದ ಪಲವಾಗಿ ಪಂಚಬೂತಗಳು ಕೊಟ್ಟವು .ಮತ್ತು ಆರಿಸಿಕೊಂಡ ಜೀವನ ಮದರ್ ತೆರೆಸಾ ಮಹಾತ್ಮಗಾಂದಿ ಅಂಬೆಡ್ಕರ್ ಮತ್ತು ನಿತ್ಯಾನಂದ ಸ್ವಾಮಿಜಿ. ಈ ರೀತಿ ನೋಡಿದಾಗ ನಿನಾಗೆ ನೀನು ಆರಿಸಿಕೊಂಡ ಈ ರೌಡಿಸಂ ಮತ್ತು ಡಾನ್ ಎಂಬುವ ಕುಪ್ರಸಿದ್ದ ಪದವಿಗೆ ಅನಾರ್ಹ ನಾಗಿರುವೆ ಮತ್ತು ನಿನ್ನ ಕುಟುಂಬಕ್ಕೆ ಒಂದು ಮಾಟದ ಗೊಂಬೆಯಾಗುವೆ.ಇದು ನಿನಗೆ ಬೇಡ ನೀನು ಲೋಕ ಕಂಟಕನಾಗಿ ಅಡ್ಡ ದಾರಿಯಿಡಿದಾಗಲೆ ಆಕಾಶ ತತ್ವ ವಿಕಾರ ವಾಗುತ್ತೆ ಕಾರಣ ನಿನ್ನನ್ನು ತುಣಿಯಲು ಸಿದ್ದವಾಗಿರುವ ವಿಕಾರಗಳು ಇವಾಗಿವೆ.ಆಗ ಪೋಲಿಸರು ನಿನ್ನ ಮನೆ ಬಾಗಿಲು ಬಡಿತಾರೆ ಮತ್ತು ಒಂದು ಪಿಟ್ಟಿ ಕೇಸ್ ಹಾಕಿ ಕಳಿಸ್ತಾರೆ.ಅಲ್ಲಿಗೂ ನೀನು ಬುದ್ದಿ ಕಲೀಲೀಲ್ಲ ಅಂದಾಗ ವಾಯು ವಿಕಾರವಾಗುತ್ತೆ ಆಗ ನಿನ್ನ ಸುತ್ತ ಮುತ್ತದ ಜನ ಥೂ..ಥೂ.ಅಂತಾರೆ ಮತ್ತು.ಆಮೇಲೆ ಜಲ ವಿಕಾರ ವಾಗಿ ನಿನ್ನ ಕುಟುಂಬದಲ್ಲಿ ಕಣ್ಣೀರು ತುಂಬತ್ತೆ.ಆಗ ಪೋಲಿಸರ ಕೋಲು ಮತ್ತು ಕಾಲಿನಿಂದ ನೀನು ಬುದ್ದಿ ಕಲಿಯಲಿಲ್ಲ ಅಂದಾಗ ನೀನ್ನ ತಂದೇ ತಾಯಿಯರನ್ನು ಕರೆಯಿಸಿ ಅವಾಚ್ಯ ಶಬ್ದಗಳಿಂದ ನಿಂದಿಸ್ತಾರೆ.ಮತ್ತು ನಿನ್ನಂತ ಪವಿತ್ರ ಪಾಪಿಗೆ ಜನ್ಮ ಕೊಟ್ಟ ತಪ್ಪಿಗೆ ಏಕವಚನದ ಮಾತು ನಿನ್ನ ತಂದೆ ಕೇಳಿದರೆ ನಿನ್ನ ತಾಯಿಯು ಕೂಡ ಅಶ್ಲೀಲ ಮಾತು ಕೇಳ್ತಾಳೆ .ಆಗ ಇಂತ ಮಗ ಹುಟ್ಟದಿದ್ರೂ ಆಗ್ತಇತ್ತು ಅಂದ್ ಕೋಳ್ತಾಳೆ ಅಲ್ಲಿಗೆ ಅಗ್ನಿ ತತ್ವ ವಿಕಾರ ವಾಗಿ ಹೋಯ್ತು ಮತ್ತು ಪಂಚಬೂತಗಳು ಕೊಟ್ಟಿರುವ ತನ್ನ ದೇಹ ವಾಪಸ್ ಪಡೆಯಲು ತೀರ್ಪು ಕೂಡ ಸಿಕ್ಕಿರುತ್ತೆ.ಆ ನಂತರ ನಿನಗೆ ಸಿಗೋದೇ ಸಾವಿನ ಚುಂಬನ.ಆಕ್ಷಿಡೆಂಟ್ ಆಗಬಹುದು ಅಥವಾ ರೋಗಗ್ರಸ್ಥ ಸಾವು ಅಥವ ಪೋಲಿಸರ ಎನ್ ಕೌಂಟರ್ ಇದೆಲ್ಲ ಬೇಡ ನೋಡು ಬದುಕೊದಕ್ಕೆ ಬಹಳ ದಾರಿ ಇವೆ ಒಳ್ಳೆಯ ಮಾರ್ಗದಲ್ಲಿ ಬಾಬ ರಾಮದೇವ್ ಆಕಸ್ಮಿಕವಾಗಿ ಆರಿಸಿಕೊಂಡ ದಾರಿ ಲೋಕ ಪ್ರಸಿದ್ದ ಮಾಡಿತು ಹೀಗೆ ನೀನು ಬದುಕ ಬೇಕೆಂದರೆ ಒಳ್ಳೆಯದಾರಿ ಅನೇಕ ಇವೆ ಈ ದಾರಿಯಲ್ಲಿ ಹೋಗು ನಿನಗೆ ಒಳ್ಳೆಯ ಬವಿಷ್ಯವಿರುತ್ತೆ.ಯಾವುದಾದರು ಅಸ್ಪತ್ರೆಯ ಬಳಿ ಹೋಗಿ ರೋಗಿಗಳಿಗೆ ನಿನ್ನ ಕೈಲಾದ ಸಹಾಯ ಮಾಡು ನಿನ್ನ ಸೇವೆ ಮೆಚ್ಚಿ ಪಂಚಬೂತಗಳು ಮುಂದೊಂದು ದಿನ ನಿನ್ನನ್ನೂ ಉತ್ತುಂಗ ಶಿಖರ ವೇರುವಂತೆ ಮಾಡ್ತಾವೆ .ಉದಾಹರಣೆ ಸಾಲು ಮರದ ತಿಮ್ಮಕ್ಕನಿಗೆ ಮೋದಲೆ ಕನಸು ಬಿದ್ದಿರಲಿಲ್ಲ ನನಗೆ ವೃಕ್ಷ ಮಾತೆಯ ಬಿರುದು ಸಿಗುತ್ತೆ ಅಂತ ಆದರೆ ಅವರು ಲೋಕಕ್ಕೆ ನೆರಳಾಗಿರಲಿ ಅಂತ ಗಿಡಕ್ಕೆ ನೀರು ಹಾಕಿದರು ಕ್ರಮೇಣ ಮರವಾಗಿ ಬೇಳೆದು ಪಂಚಬೂತಗಳು ಒಪ್ಪಿ ಪೃತಿಷ್ಟೆ ಗೌರವ ತಂದು ಕೊಟ್ಚವು ಹಾಗಗಿ ನೀನು ಕೂಡ ಇಂದು ಮಾಡಿದ ಲೋಕಕಲ್ಯಾಣ ನಿನ್ನ ಕೈ ಬಿಡಲ್ಲ ಮುಂದೋಂದು ದಿನ ಉತ್ತಮ ಪ್ರತಿಪಲ ಸಿಕ್ಕೆ ಸಿಗುತ್ತೆ.ಹಾಗಗಿ ತಾತ್ಕಾಲಿಕ ಸುಖಕ್ಕಾಗಿ ಅಡ್ಡದಾರಿ ಹಿಡಿದು ಆರೋಪಿಯಾಗಿ ಸಾಯಬೇಡ ಬಾಂದವ ಯೋಚಿಸು .ಸತ್ತವರನ್ನು ನೋಡಿ ಅಳೋಣ ಆದರೆ ಅಳೋರನ್ನ ನೋಡಿ ಸಾಯೋದು ಬೇಡ.