Yuva Brigade Mangalore

Yuva Brigade Mangalore The objective of channelizing youth in the task of national reconstruction by a group who drew their inspiration from EK BHARATH SHRESTH BHARATH by NaMo

05/05/2017

*ಸ್ವಚ್ಛ ರಾಜಮಾರ್ಗ*

ಯುವಾಬ್ರಿಗೇಡ್ ಮಂಗಳೂರು ವತಿಯಿಂದ 'ಸ್ವಚ್ಛ ರಾಜಮಾರ್ಗ ಅಭಿಯಾನ'ದ ಎರಡನೇ ಕಾರ್ಯಕ್ರಮವು ದಿನಾಂಕ 07.05.2017ರ ಭಾನುವಾರದಂದು ಬೆಳಿಗ್ಗೆ ಗಂಟೆ 6.30ಕ್ಕೆ ಸರಿಯಾಗಿ ತಲಪಾಡಿಯ ಟೋಲ್ ಗೇಟ್ ನಿಂದ ಕೆ.ಸಿ.ರೋಡ್, ಕೋಟೆಕಾರ್, ಕೊಲ್ಯ, ಕುಂಪಲ ರಾಜಮಾರ್ಗದ ರಸ್ತೆ ಬದಿಗಳಲ್ಲಿ ಸ್ವಚ್ಛತಾ ಅಭಿಯಾನವನ್ನು ನಡೆಸಲಿದ್ದೇವೆ. ಪರಿಸರದ ಬಂಧುಗಳು, ಸಂಘ ಸಂಸ್ಥೆಗಳು ಈ ಅಭಿಯಾನದಲ್ಲಿ ಭಾಗವಹಿಸಬೇಕಾಗಿ ವಿನಂತಿ ಮಾಡಿಕೊಳ್ಳುತ್ತಿದ್ದೇವೆ.

ಒಂದು ಹೆಜ್ಜೆ ಸ್ವಚ್ಛತೆಯ ಕಡೆಗೆ..

#ಯುವಾಬ್ರಿಗೇಡ್

ಸಂಪರ್ಕಿಸಿ
ವಿನೋದ್
+919740851710
ತಿಲಕ್ ಶಿಶಿಲ
+917090100010

16/11/2015

Share plz urgent. Mahveera hospital Puttur
Blood group: 0 negetive(O-) Urgent required
Contact 9901081604/ 7353511691
Msg strt at 3.00pm on 16.11.2015

04/07/2015

- ಯುವಾ ಬ್ರಿಗೇಡ್ ಯುವಾ ಬ್ರಿಗೇಡ್ ಭಾರತವನ್ನು ವಿಶ್ವಗುರುವನ್ನಾಗಿಸುವ ಕನಸು ಕಟ್ಟಿಕೊಂಡ 18 ರಿಂದ 30 ವಯಸ್ಸಿನ ಯುವಕರ ಪಡೆ. ಯುವ ಶಕ್ತಿಯನ್ನು ದೇಶಪ್ರೇಮದ ನಿಟ್ಟಿನಲ್ಲಿ ತಿರುಗಿಸಿ ಅದನ್ನು ರಾಷ್ಟ್ರನಿರ್ಮಾಣದ ಕಾಯಕಕ್ಕೆ ಹಚ್ಚಿ ಅದರಿಂದ ಬ...

04/07/2015

- ಯುವಾ ಬ್ರಿಗೇಡ್ ಆಕಾಶಾತ್ ವಾಯುಃ ವಾಯೋರಗ್ನಿಃ ಅಸ್ಮೀರಾಶಃ ಅರಭ್ಯಪೃಥಿವೀಂ ಶೃಧಿವ್ಯಾ ಓಷಧಯಃ ಓಷಧಿಭ್ಯೋನ್ನಮ್ ಹಾಗಂತ ವೇದವಾಕ್ಯ ಸೃಷ್ಟಿಯ ಕ್ರಮ ಅದು. ಆಕಾಶದಿಂದ ವಾಯು ಅದರಿಂದ ಅಗ್ನಿ ಆ ಮೂಲಕ ನೀರು ಭೂಮಿ ಸಸ್ಯಗಳು ಅನ್ನ ಮತ್ತು ಕೊನೆಗೆ ಪ...

26/06/2015
08/06/2015

ಏನಿದು ಯುವಾ ಬ್ರಿಗೇಡ್?
ಯುವಾ ಬ್ರಿಗೇಡ್ ಭಾರತವನ್ನು ವಿಶ್ವಗುರುವನ್ನಾಗಿಸುವ ಕನಸು ಕಟ್ಟಿಕೊಂಡ 18 ರಿಂದ 30 ವಯಸ್ಸಿನ ಯುವಕರ ಪಡೆ. ಯುವ ಶಕ್ತಿಯನ್ನು ದೇಶಪ್ರೇಮದ ನಿಟ್ಟಿನಲ್ಲಿ ತಿರುಗಿಸಿ ಅದನ್ನು ರಾಷ್ಟ್ರನಿಮರ್ಾಣದ ಕಾಯಕಕ್ಕೆ ಹಚ್ಚಿ ಅದರಿಂದ ಬಂದ ಫಲಿತಾಂಶವನ್ನು ಭಾರತ ಮಾತೆಯ ಚರಣಗಳಿಗೆ ಅರ್ಪಣೆ ಮಾಡುವ ಅಭಿಲಾಷೆ ಹೊತ್ತ ಯುವಕರ ಸಮೂಹ. ಪ್ರಖರ ರಾಷ್ಟ್ರವಾದಿ ಶ್ರೀ ಚಕ್ರವತರ್ಿ ಸೂಲಿಬೆಲೆಯವರ ನೃತೃತ್ವದಲ್ಲಿ ನಾಡಿನ ಹಿರಿಯ ರಾಷ್ಟ್ರಪ್ರೇಮಿ ಸಾಧಕರ ಮಾರ್ಗದರ್ಶನದಲ್ಲಿ ಕನರ್ಾಟಕದ ಮೂಲೆ ಮೂಲೆಗೂ ತಲುಪುತ್ತಿರುವ ಈ ಸಂಘಟನೆ ಆರಂಭವಾಗಿ ಇನ್ನೂ ವರ್ಷವೂ ಕಳೆದಿಲ್ಲ ಎಂದರೆ ಅಚ್ಚರಿಯಾಗಬಹುದು. 8 ಜೂನ್ 2014 ರಂದು ಆರಂಭವಾದ ಯುವಾ ಬ್ರಿಗೇಡ್ ಇದುವರೆಗೂ ಹತ್ತಾರು ವಿಶಿಷ್ಟ ವೈವಿಧ್ಯಮಯ ಕಾರ್ಯ ಕಲಾಪಗಳ ಮೂಲಕ ವ್ಯಾಪಕವಾಗಿ ಜನಮಾನಸವನ್ನು ತಲುಪಿರುವುದು ಒಂದು ಸಾಧನೆಯೇ ಸರಿ. ಹಾಗಂತ ಇದೇನು ರಾತ್ರೋ ರಾತ್ರಿ ಸಂಭವಿಸಿದ ಘಟನೆಯಲ್ಲ. ಪ್ರಾರಂಭದಲ್ಲಿ ಫೇಸ್ ಬುಕ್ ಮುಂತಾದ ಸಾಮಾಜಿಕ ತಾಣಗಳ ಮೂಲಕ ತಾಯಿ ಭಾರತಿಯನ್ನು ವಿಶ್ವಗುರುವನ್ನಾಗಿಸುವ ಕಲ್ಪನೆಯನ್ನು ಬಿತ್ತರಿಸಿ ಮುಂದಿನ ದಿನಗಳಲ್ಲಿ ಒಂದೊಂದೇ ಯೋಜನೆಗಳ ಮೂಲಕ ಹಳ್ಳಿಗಾಡಿನ ಯುವಕನನ್ನೂ ಸಂಘಟನೆಯೊಂದಿಗೆ ಬೆಸೆದುಕೊಳ್ಳುವಂತೆ ಮಾಡಿದ ಯುವಾ ಬ್ರಿಗೇಡ್ ನ ಕಾರ್ಯಗಳನ್ನು ವೀಕ್ಷಿಸುವುದು ಒಂದು ಚೇತೋಹಾರಿ ಪಯಣವಾಗಿದೆ. ಜೂನ್ ತಿಂಗಳಲ್ಲಿ ಉದ್ಘಾಟನೆಯಾದ ಯುವಾ ಬ್ರಿಗೇಡ್ ತಂಡಕ್ಕೆ ಬಹುತೇಕ ಎಲ್ಲಾ ಜಿಲ್ಲೆಗಳಿಂದ ತರುಣರು ಆಗಮಿಸಿ ರಾಷ್ಟ್ರಕಾರ್ಯದಲ್ಲಿ ಕೈಜೋಡಿಸುವ ಪ್ರತಿಜ್ಞೆಗೈದರು. ಜುಲೈ ತಿಂಗಳಲ್ಲಿ ಕಾಗರ್ಿಲ್ ವಿಜಯೋತ್ಸವ ಆಚರಣೆ ಇಡೀ ರಾಜ್ಯದಲ್ಲಿ ವಿಜೃಂಭಣೆಯಿಂದ ನಡೆಯಿತು. ಅನೇಕ ಜಿಲ್ಲಾ ಕೇಂದ್ರಗಳಲ್ಲಿ ಮಾಜಿ ಸೈನಿಕರನ್ನು ಕರೆದು ಗೌರವಿಸಲಾಯ್ತು. ಕಾಗರ್ಿಲ್ ಯುದ್ಧದಲ್ಲಿ ಭಾರತೀಯ ಸೇನೆಯ ಪರಾಕ್ರಮದ ಕುರಿತು ಸರಣಿ ಉಪನ್ಯಾಸಗಳು ನಡೆದವು. ಅನೇಕ ತರುಣರ ಹೃದಯದಲ್ಲಿ ಸೈನ್ಯ ಸೇರುವ ಆಸೆಯ ಕಿಡಿಯನ್ನು ಹೊತ್ತಿಸಲಾಯ್ತು. ಸಾರ್ವಜನಿಕರಿಗೆ ಸೇನೆಯ ಬಗ್ಗೆ ಕೃತಜ್ಞತಾ ಭಾವನೆ ಮೂಡಿ ಹೆಮ್ಮೆಯಿಂದ ತಲೆ ಎತ್ತಿ ನಿಲ್ಲಬಲ್ಲ ವಾತಾವರಣವನ್ನು ಕಲ್ಪಿಸಲಾಯ್ತು. ಅಗಸ್ಟ್ ತಿಂಗಳಲ್ಲಿ ಯುವಾ ಬ್ರಿಗೇಡ್ ನ ರಾಜ್ಯ ಮಟ್ಟದ ಸಭೆ ನಡೆಯಿತು. ಅದರಲ್ಲಿ ರಾಜ್ಯ, ವಿಭಾಗ ಮತ್ತು ಜಿಲ್ಲೆಗಳಿಗೆ ಸಂಚಾಲಕರನ್ನು ಆರಿಸಲಾಯ್ತು. ತಾಲ್ಲೂಕು ಮಟ್ಟದಲ್ಲಿ ಯುವಾ ಬ್ರಿಗೇಡ್ ಆರಂಭಿಸಲು ತೀಮರ್ಾನ ಕೈಗೊಳ್ಳಲಾಯಿತು. ಸೆಪ್ಟಂಬರ್ ತಿಂಗಳಲ್ಲಿ ವಿವೇಕಾನಂದರು ಚಿಕಾಗೋದಲ್ಲಿ ಮಾಡಿದ ಅವಿಸ್ಮರಣೀಯ ಭಾಷಣದ ನೆನಪಿನಲ್ಲಿ ದಿಗ್ವಿಜಯ ದಿವಸವನ್ನು ಬೆಂಗಳೂರಿನಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಎವರೆಸ್ಟ್ ಶಿಖರ ಏರಿದ ಭಾರತದ ಮೊಟ್ಟಮೊದಲ ಅಂಗವಿಕಲ ಮಹಿಳಾ ಸಾಧಕಿ ಕು. ಅರುಣಿಮಾ ಸಿನ್ಹಾರವರು ತಮ್ಮ ಸಾಧನೆಯ ಕುರಿತಂತೆ ಆಡಿದ ಮಾತುಗಳು ನೆರೆದಿದ್ದ ಜನರ ಮನದಲ್ಲಿ ಸಾಧನೆಯ ಹಸಿವನ್ನು ಹುಟ್ಟಿಸುವಲ್ಲಿ ಸಫಲವಾಯ್ತು. ಅಕ್ಟೋಬರ್ ತಿಂಗಳಲ್ಲಿ ಯುವಾ ಬ್ರಿಗೇಡ್ ನ ವತಿಯಿಂದ ಕನ್ಯಾಕುಮಾರಿಯ ವಿವೇಕಾನಂದ ಬಂಡೆಗೆ ಪ್ರವಾಸವನ್ನು ಆಯೋಜಿಸಲಾಯಿತು. ರಾಜ್ಯದ ಬೇರೆ ಬೇರೆ ಭಾಗಗಳಿಂದ ಬಂದಿದ್ದ ಸುಮಾರು 50 ಜನ ಯುವಕರಿಗೆ ಅದ್ಭುತ ಪ್ರೇರಣೆ ದೊರೆಯಿತು. ತರುಣರೆಲ್ಲರೂ ಕನ್ಯಾಕುಮಾರಿಯ ವಿವೇಕಾನಂದರ ಮೂತರ್ಿಯ ಮುಂದೆ ನಿಂತು ಜೀವನದ ಒಂದು ಭಾಗವನ್ನು ರಾಷ್ಟ್ರಸೇವೆಗೆ ಮುಡಿಪಾಗಿಡುವುದಾಗಿ ಸಂಕಲ್ಪ ಸ್ವೀಕರಿಸಿದ್ದು ವಿಶೇಷವಾಗಿತ್ತು. ನವಂಬರ್ ತಿಂಗಳಲ್ಲಿ ಯುವಾ ಬ್ರಿಗೇಡ್ ನ ಸದಸ್ಯತ್ವ ಅಭಿಯಾನ ಮತ್ತು ಹೋಟೇಲ್ ತಾಜ್ ನಲ್ಲಿ ರಾಷ್ಟ್ರಕ್ಕಾಗಿ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಡಿಸಂಬರ್ ತಿಂಗಳಲ್ಲಿ ವಿವೇಕಾನಂದರು ಕನ್ಯಾಕುಮಾರಿಯಲ್ಲಿ ಬಂಡೆಯ ಮೇಲೆ ಕುಳಿತು ತಪವನ್ನಾಚರಿಸಿ ತಮ್ಮ ಜೀವನದ ಗುರಿಯನ್ನು ಕಂಡುಕೊಂಡ ಸವಿನೆನಪಿಗಾಗಿ ರಾಕ್ ಡೇ ಎಂಬ ವಿನೂತನ ಕಾರ್ಯಕ್ರಮವನ್ನು ನಾಡಿಗೆ ಯುವಾಬ್ರಿಗೇಡ್ ಪರಿಚಯಿಸಿತು. ರಾಜ್ಯಾದ್ಯಂತ ಯುವಕರು ಈ ಕಾರ್ಯಕ್ರಮದ ನೆಪದಲ್ಲಿ ಸ್ವಾಮಿವಿವೇಕಾನಂದರ ಜೀವನ ಗಾಥೆಯನ್ನು ಆಲಿಸಿದರು. ಜನವರಿ ತಿಂಗಳಲ್ಲಿ ಯುವಾ ಬ್ರಿಗೇಡ್ ಒಂದು ಮಹಾ ಸಾಹಸಕಾರ್ಯವನ್ನು ಕೈಗೆತ್ತಿಕೊಂಡಿತು. ಕನರ್ಾಟಕ ರಾಜ್ಯದಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ ಕಾರ್ಯಕ್ರಮವನ್ನು 1000 ಕಡೆಗಳಲ್ಲಿ ಆಚರಿಸಬೇಕೆಂಬುದೇ ಆ ಸಂಕಲ್ಪವಾಗಿತ್ತು. ಅನುಷ್ಠಾನ ಮಾಡುವುದಕ್ಕೆ ಅತ್ಯಂತ ಕಷ್ಟಸಾದ್ಯವಾಗಿದ್ದ 'ಸಾವಿರದ ವಿವೇಕಾನಂದ' ಎಂಬ ಹೆಸರಿನಲ್ಲಿದ್ದ ಈ ಯೋಜನೆಗೆ ನಾಡಿನ ಸಾವಿರ ಸಾವಿರ ಯುವಕ ಯುವತಿಯರು ಕೈಜೋಡಿಸಿದ್ದರ ಪರಿಣಾಮ 2150ಕ್ಕೂ ಹೆಚ್ಚು ಕಡೆಗಳಲ್ಲಿ ವಿವೇಕಾನಂದ ಜಯಂತಿ ಕಾರ್ಯಕ್ರಮಗಳು ನಡೆದವು. ಯುವಾ ಬ್ರಿಗೇಡ್ ವತಿಯಿಂದ ನಡೆದ ಈ ಕಾರ್ಯಕ್ರಮಗಳು ಇಂದಿಗೂ ರಾಜ್ಯದ ಲಕ್ಷಾಂತರ ವಿದ್ಯಾಥರ್ಿಗಳ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದೆ. ಶ್ರೀ ಚಕ್ರವತರ್ಿ ಸೂಲಿಬೆಲೆಯವರು ಈ ಕಾರ್ಯಕ್ರಮದ ಯಶಸ್ಸಿಗಾಗಿ ನಾಡಿನ ಮೂಲೆಮೂಲೆಗೂ ಪ್ರವಾಸ ಮಾಡಿದ್ದು ಯುವಾ ಬ್ರಿಗೇಡ್ ಗೆ ಕಾರ್ಯಕರ್ತರ ಮಹಾಪೂರವೇ ಹರಿದು ಬರುವಂತೆ ಮಾಡಿತ್ತು. ಅದರ ಪರಿಣಾಮ ಅದೇ ಜನವರಿ ತಿಂಗಳಲ್ಲಿ ಸುಭಾಷ್ ಚಂದ್ರ ಬೋಸರ ಜಯಂತಿಯನ್ನು ಪೋಸ್ಟರ್ ಪ್ರದರ್ಶನದ ಮೂಲಕ ಆಜಾದ್ ಹಿಂದ್ ಹೆಸರಿನಲ್ಲಿ ಆಚರಿಸುವಂತೆ ಮಾಡಿತು. ಸುಭಾಷರ ಜೀವನದ ಚಿತ್ರಕಥೆಯನ್ನು ಒಳಗೊಂಡ 16 ಪೋಸ್ಟರ್ ಗಳ ಸೆಟ್ ಅನ್ನು ರಾಜ್ಯದ ಸಾವಿರಾರು ಶಾಲಾ ಕಾಲೇಜುಗಳಲ್ಲಿ ಪ್ರದಶರ್ಿಸಲಾಯಿತು. ಫೆಬ್ರವರಿ ತಿಂಗಳಲ್ಲಿ ನನ್ನ ದೇಶ ನನ್ನ ಪ್ರೀತಿ (ಮೈ ನೇಶನ್ ಮೈ ಲವ್) ಎಂಬ ವಿಶಿಷ್ಟ ರೀತಿಯ ಭಾರತ ಮಾತೆಯ ಪೂಜಾ ಕಾರ್ಯಕ್ರಮವನ್ನು ಯುವಾ ಬ್ರಿಗೇಡ್ ಏರ್ಪಡಿಸಿತು. ಡಿಜಿಟಲ್ ಪೋಸ್ಟರ್ ಡಿಸೈನಿಂಗ್ ಸ್ಪಧರ್ೆಗಳು ನಡೆದವು. ವಿಜೇತರಿಗೆ ಕನ್ಯಾಕುಮಾರಿ ಮತ್ತು ಕೋಲ್ಕತ್ತಾದ ರಾಮಕೃಷ್ಣ ಆಶ್ರಮಕ್ಕೆ ಪ್ರವಾಸ ಕರೆದುಕೊಂಡು ಹೋಗುವ ಬಹುಮಾಣಗಳನ್ನು ಇಡಲಾಗಿತ್ತು. 'ದೇಹ ಪ್ರೇಮವಲ್ಲ ದೇಶಪ್ರೇಮ' ಎಂಬ ಸಂದೇಶವನ್ನು ಹೊತ್ತ ಯುವಾ ಬ್ರಿಗೇಡ್ ನಿಮರ್ಿತ ಕಿರುಚಿತ್ರಗಳು ವಾಟ್ಸಪ್ ಮತ್ತು ಫೇಸ್ ಬುಕ್ ಮುಂತಾದ ಜಾಲತಾಣಗಳಲ್ಲಿ ಬಿರುಗಾಳಿಯನ್ನೆಬ್ಬಿಸಿತು. ಜಾಲತಾಣಗಳಲ್ಲಿ ಮತ್ತು ಮಾಧ್ಯಮಗಳಲ್ಲಿ ಬಿಸಿಬಿಸಿ ಚಚರ್ೆಗಳು ನಡೆದವು. ಒಟ್ಟಿನಲ್ಲಿ ಭಾರತೀಯ ಸಂಸ್ಕೃತಿಯನ್ನು ಮರೆತು ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗುತ್ತಿರುವ ಯುವಜನತೆಯೇ ಈ ಅಭಿಯಾನಕ್ಕೆ ವ್ಯಾಪಕ ಬೆಂಬಲ ನೀಡುವಂತೆ ಮಾಡಿದ್ದು ಯುವಾ ಬ್ರಿಗೇಡ್ ಸಾಧನೆಯಾಗಿತ್ತು. ಮಾಚರ್್ ಒಂದೇ ತಿಂಗಳಲ್ಲಿ ಒಟ್ಟು ಮೂರು ಕಾರ್ಯಕ್ರಮಗಳನ್ನು ನಡೆಸುವ ಯೋಜನೆ ಸಿದ್ಧವಾಯ್ತು. ಭಗವದ್ಗೀತೆಯ ಕುರಿತಾದ "ಸುಡುವುದು ದೇಹ, ಆತ್ಮವಲ್ಲ" ಎಂಬ ಕಿರು ಪುಸ್ತಕದ 25,000 ಪ್ರತಿಗಳನ್ನು ಯುವಾ ಬ್ರಿಗೇಡ್ ಕಾರ್ಯಕರ್ತರು ಮನೆಮನೆಗೆ ಮಾರಾಟ ಮಾಡಿ ಭಗವದ್ಗೀತೆಯ ಸಂದೇಶವನ್ನು ರಾಜ್ಯಾದ್ಯಂತ ತಲುಪಿಸಿ ಅಜ್ಞಾನಿಗಳ ಆರೋಪಕ್ಕೆ ಸೂಕ್ತ ಉತ್ತರ ನೀಡಿತು. ಹುತಾತ್ಮ ಯೋಧ ಮೇಜರ್ ಸಂದೀಪ್ ಉನ್ನಿಕೃಷ್ಣನ್ ರ ಹುಟ್ಟಿದ ಹಬ್ಬವನ್ನು ಯಲಹಂಕದ ಅವರ ಮನೆಯಲ್ಲಿ ಅಕ್ಷರಶಃ ಸಾವಿರ ಯುವಕರೊಂದಿಗೆ ಆಚರಿಸಲಾಯ್ತು. ಭಗತ್ ಸಿಂಗ್ ರಾಜಗುರು ಸುಖದೇವರ ಬಲಿದಾನ ದಿವಸವನ್ನು ಸೈಕಲ್ ರ್ಯಾಲಿಯ ಮೂಲಕ ಇಡೀ ರಾಜ್ಯದಲ್ಲಿ ಆಚರಿಸಲಾಯಿತು. ಇಂಧನ ಉಳಿಸಿ ಪರಿಸರ ರಕ್ಷಣೆ ಮತ್ತು ರಾಷ್ಟ್ರದ ಆಥರ್ಿಕತೆಯ ರಕ್ಷಣೆ ಎರಡೂ ಉದ್ದೇಶಗಳನ್ನು ಒಳಗೊಂಡಿದ್ದ ಈ ಯೋಜನೆಗೆ ರಾಜ್ಯದಾದ್ಯಂತ ಎಲ್ಲ ಭಾಗಗಳಿಂದಲೂ ವ್ಯಾಪಕ ಸ್ಪಂದನೆ ದೊರೆಯಿತು. ಏಪ್ರಿಲ್ ತಿಂಗಳಲ್ಲಿ ಏಪ್ರಿಲ್ ನಮನ್ ಎಂಬ ವಿಶಿಷ್ಟ ಯೋಜನೆಯಡಿಯಲ್ಲಿ ಆ ತಿಂಗಳು ಜನಿಸಿದ ದಾರ್ಶನಿಕರ ಮಹಾಪುರುಷರ ಜನ್ಮದಿನವನ್ನು ಒಟ್ಟಿಗೆ ಆಚರಿಸುವ ತೀಮರ್ಾನ ಕೈಗೊಳ್ಳಲಾಯಿತು. ಯುವಾ ಬ್ರಿಗೇಡ್ ನ ಸದ್ಭಾವನಾ ವಿಭಾಗದ ಆಸರೆಯಲ್ಲಿ ಅಂಬೇಡ್ಕರ್, ಶಂಕರಾಚಾರ್ಯ, ಬುದ್ಧ, ಬಸವಣ್ಣ, ರಾಮಾನುಜಾಚಾರ್ಯ, ಮಹಾವೀರರ ಜಯಂತಿಯನ್ನು ಒಂದೇ ದಿನ ಆಚರಿಸಿ ಮಹಾಪುರುಷರ ಉಪದೇಶಗಳಲ್ಲಿದ್ದ ಏಕತೆಯ ಮಂತ್ರವನ್ನು ಪಠಿಸಲಾಯ್ತು. ಇದೆಲ್ಲವನ್ನೂ ಮುಗಿಸಿ ಜೂನ್ ತಿಂಗಳಲ್ಲಿ ಆರಂಭವಾಗಿದ್ದೇ ಈ ಕಲ್ಯಾಣಿ ಪುನರುಜ್ಜೀವನ ಯೋಜನೆ. ಬಹುತೇಕ ಕಣ್ಮರೆಯಾಗಿದ್ದಂತಹಾ ಸುಮಾರು 36 ಕಲ್ಯಾಣಿಗಳನ್ನು ಇದುವರೆಗೂ ಯುವಾ ಬ್ರಿಗೇಡ್ ಕಾರ್ಯಕರ್ತರು ಪುನರುಜ್ಜೀವನಗೊಳಿಸಿದ್ದಾರೆ. ಅತ್ಯಂತ ಶ್ರಮದಾಯಕವಾದ ಈ ಕಾರ್ಯದಲ್ಲಿ ಯುವಾ ಬ್ರಿಗೇಡ್ ನ ಕಾರ್ಯಕರ್ತರು ಅದ್ಭುತ ಅನುಭವವನ್ನು ಪಡೆದಿದ್ದಾರೆ. ಮಳೆ ಬಂದು ಕಲ್ಯಾಣಿ ತುಂಬಿದರೆ ದೀಪೋತ್ಸವ ಕಾರ್ಯಕ್ರಮವನ್ನು ಆಯೋಜಿಸಿ ಕಲ್ಯಾಣಿಗಳ ಕುರಿತಂತೆ ಅಂತರ್ಜಲದ ಕುರಿತಂತೆ ಜನಶಿಕ್ಷಣ ನೀಡುವ ಆಕಾಂಕ್ಷೆಯನ್ನೂ ಹೊತ್ತಿದ್ದಾರೆ. ಇಷ್ಟೆಲ್ಲಾ ಕೆಲಸಗಳನ್ನೂ ಕೇವಲ ಒಂದೇ ವರ್ಷದಲ್ಲಿ ಮಾಡಿದ್ದರ ಹಿಂದಿನ ರಹಸ್ಯವೇನೆಂದು ಕೇಳಿದರೆ ಒಂದೇ ಉತ್ತರ ಅದು ತಾಯಿ ಭಾರತಾಂಬೆಯ ಮೇಲಿನ ಭಕ್ತಿ ಮತ್ತು ಸ್ವಾಮಿವಿವೇಕಾನಂದರ ಮಾತಿನ ಮೇಲಿನ ನಂಬಿಕೆ. ಸ್ವಾಮಿ ವಿವೇಕಾನಂದರು ಯುವಕರ ಮೇಲಿಟ್ಟಿದ್ದ ಅಪಾರ ನಂಬಿಕೆಯನ್ನು ಸತ್ಯಮಾಡುವ ಹೆಬ್ಬಯಕೆಯೊಂದಿಗೆ ಪ್ರತಿ ದಿನವನ್ನೂ ರಾಷ್ಟ್ರ ನಿಮರ್ಾಣ ಚಿಂತನೆಯಲ್ಲಿ ಕಳೆಯುತ್ತಿರುವ ಶ್ರೀ ಚಕ್ರವತರ್ಿ ಸೂಲಿಬೆಲೆಯವರು ತಮ್ಮ ದೇಶ ಭಕ್ತ ಮಿತ್ರರನ್ನು ಒಂದುಗೂಡಿಸಿ ಅವರಿಗೆ ನಿರಂತರ ರಾಷ್ಟ್ರಸೇವೆಯ ಆದರ್ಶವನ್ನು ನೀಡಿದ್ದರಿಂದಾಗಿ ಇಂತಹಾ ಬದಲಾವಣೆ ಸಾಧ್ಯವಾಗಿದೆ. ಇನ್ನು ಮುಂದೆಯೂ ಇದೇ ವೇಗದಲ್ಲಿ ಈ ತಂಡ ಮುಂದುವರೆದರೆ ಬಹುಶಃ ನಾಡಿನ ಯುವಕರಿಗೆ ರಾಷ್ಟ್ರಸೇವೆಗೆ ಒಂದು ಉತ್ತಮ ಮೇಲ್ಪಂಕ್ತಿ ಹಾಕಿಕೊಡುವ ದಿನಗಳು ದೂರವಿಲ್ಲ ಎನ್ನಬಹುದು. ಇದೀಗ ಜೂನ್ ತಿಂಗಳು ಆರಂಭವಾಗಿದೆ. ಯುವಾ ಬ್ರಿಗೇಡ್ ಮತ್ತೊಂದು ಹೊಸ ಯೋಜನೆಯೊಂದಿಗೆ ಸಮಾಜದ ಮುಂದೆ ನಿಂತಿದೆ. ವಿಶ್ವ ಪರಿಸರ ದಿನ ಮತ್ತು ವಿಶ್ವ ಯೋಗ ದಿನ ಎರಡೂ ವಿಷೇಷ ದಿನಗಳ ಸಮಸ್ವಯವಾಗಿ ಪೃಥ್ವಿಯೋಗ ಎಂಬ ಹೆಸರಿನಲ್ಲಿ ಪೃಥ್ವಿಗೆ ಶ್ವಾಸಕೋಶಗಳಂತಿರುವ ಸಸ್ಯ ಸಂಪತ್ತನ್ನು ಬೆಳೆಸುವ ಕಾರ್ಯವನ್ನು ಕೈಗೊಳ್ಳಲು ಯುವಾ ಬ್ರಿಗೇಡ್ ನಿಶ್ಚಯಿಸಿದೆ. ಈ ಮಹಾಕಾರ್ಯದ ಯಶಸ್ಸಿಗೆ ನಿಮ್ಮ ಸಹಕಾರವನ್ನು ಬ್ರಿಗೇಡ್ ನಿರೀಕ್ಷಿಸುತ್ತಿದೆ.

04/06/2015
Please comment " yes" if your attending this event !!
17/04/2015

Please comment " yes" if your attending this event !!

Please contribute  your tribute by attending this event at Mangalore
12/04/2015

Please contribute your tribute by attending this event at Mangalore

"Let our talents and academic achievements be useful to this nation and society," said Ashwini Angadi, the visually impa...
25/03/2015

"Let our talents and academic achievements be useful to this nation and society," said Ashwini Angadi, the visually impaired national facilitator with 'Young Voices' and recepient of UN Special Envoy for Gordon Brown Youth Achiever’s Award.

She was addressing a motivational interactive programme with students organized by Yuva Brigade at TV Ramana Pai hall here on Saturday March 14.

Recalling the words of Swami Vivekananda, Angadi said, "Sacrifice and service to society can make one happy forever."

25-year-old girl Ashwini Angadi, who was born visually impaired, recalling her past said, "I was born in a joint family at Chellagurki village in Ballari. Though my family was disappointed about my visual impairment, I was later admitted to Ramana Maharishi School for the Blind during our days of poverty."

Explaining her plight when she was severely ill during SSLC examination, she said she wrote the exams with the help of her friend Nayana. "Later I studied PUC at NMKRV College for Women where I had to travel 50 km from home without anyone's assistance. I completed BA at the Maharani’s College of Arts and Commerce," she said.

"I gave up HR job after doing some introspection and because I felt the need to serve the society. I am now leading Young Voices, a project by the UK-based Leonard Cheshire Disability in India. I have travelled to Ranchi, Delhi and Mumbai without taking assistance from anyone," she said.

She also said that she shared the dais at the UN with child rights activist Malala Yousafzai, former UK Prime Minister Gordon Brown and UN secretary general Ban Ki-Moon. "I felt overwhelmed when Malala said it should be called 'Ashwini Day' instead of 'Malala Day'," she said.

She further added, "Ban Ki-Moon greeted with a Namaste but we being Indians hesitate to do so."

M N Rajendra Kumar, president of SCDCC Bank said, "This is a special and important programme for the youth. An individual should live for others instead of for self. People in the country are not working hard enough, which is hindering the progress of the country. Youth should have an aim, with right aim and confidence one can achieve success."

Later, interacting with students and answering their questions, she said, "My country taught me how to face challenges, which has in turn brought me recognition globally." She also stressed that women should give importance to dressing in Indian attires.

Chakravarthi Sulibele presented a short introductory note about Ashwini Angadi.

Address

Navbharath Circle, Kodailbail
Mangalore
575003

Website

Alerts

Be the first to know and let us send you an email when Yuva Brigade Mangalore posts news and promotions. Your email address will not be used for any other purpose, and you can unsubscribe at any time.

Share

Share on Facebook Share on Twitter Share on LinkedIn
Share on Pinterest Share on Reddit Share via Email
Share on WhatsApp Share on Instagram Share on Telegram