Karnataka India

Karnataka India ನಮ್ಮ ಕರ್ನಾಟಕ ನಮ್ಮ ಹೆಮ್ಮೆ - Its just all about Karnataka, K

09/03/2026

ಲವಂಗದ ಉಪಯೋಗ benefits #ಲವಂಗ

17/02/2026

#ಲವಂಗ

ಹಾವಿನ ಬಳ್ಳಿಯಂತಿರುವ ಈ ತರಕಾರಿ ಏನು ಗೊತ್ತಾ ? ಕಾಮೆಂಟ್ ಮಾಡಿ
16/02/2026

ಹಾವಿನ ಬಳ್ಳಿಯಂತಿರುವ ಈ ತರಕಾರಿ ಏನು ಗೊತ್ತಾ ? ಕಾಮೆಂಟ್ ಮಾಡಿ

15/02/2026

ಇವತ್ತಿನ ಕಾಲದಲ್ಲಿ ಬೆಳಗ್ಗೆ ಎದ್ದ ತಕ್ಷಣ ಮನೆ ಮುಂದೆ ರಂಗೋಲಿ ಬಿಡೋದು ಎಷ್ಟು ಅಪರೂಪ ಆಗಿದೆ ಗೊತ್ತಾ? ಒಂದು ಕಾಲದಲ್ಲಿ ಹೆಣ್ಣು ಮಕ್ಕಳು ರಂಗೋಲಿ ಬಿಡದೆ ದಿನವೇ ಶುರು ಆಗ್ತಿರಲಿಲ್ಲ. ಇವತ್ತು ಅದೇ ಹೆಣ್ಣು ಮಕ್ಕಳು ಬೆಳಗ್ಗೆ ಎದ್ದ ತಕ್ಷಣ ಮೊಬೈಲ್ ಹಿಡಿದು ರೀಲ್ಸ್‌ಗಳಲ್ಲಿ ಕಳೆದು ಹೋಗಿದ್ದಾರೆ. ಸಮಯ ಹೋದ್ರು ಗೊತ್ತಾಗಲ್ಲ, ದೇಹ ಏನಾಗ್ತಿದೆ ಅನ್ನೋದು ಯಾರು ಯೋಚನೆ ಮಾಡಲ್ಲ. ರಂಗೋಲಿ ಅನ್ನೋದು ಕೇವಲ ಅಲಂಕಾರ ಅಲ್ಲ… ಅದು ಆರೋಗ್ಯಕ್ಕೆ ನೇರವಾಗಿ ಸಂಪರ್ಕ ಹೊಂದಿದ ಒಂದು ವ್ಯಾಯಾಮ.
ರಂಗೋಲಿ ಬಿಡುವಾಗ ನಾವು ನೆಲಕ್ಕೆ ಕುಳಿತ್ತೀವಿ, ಬೆನ್ನು ಸ್ವಲ್ಪ ಮುಂದೆ ಬಾಗುತ್ತೆ, ಕೈಗಳ ಚಲನೆ ಜಾಸ್ತಿ ಇರುತ್ತೆ. ಇದರಿಂದ, ಬೆನ್ನು, ಮೊಣಕಾಲುಗಳಿಗೆ ಒಳ್ಳೆಯ ವ್ಯಾಯಾಮ ಸಿಗುತ್ತೆ. ಇವತ್ತಿನ ಮೊಬೈಲ್ ಜೀವನದಲ್ಲಿ ಹೆಣ್ಣು ಮಕ್ಕಳು ಗಂಟೆಗಟ್ಟಲೆ ಕುಳಿತುಕೊಂಡೇ ಇರುತ್ತಾರೆ, ಅದರ ಫಲವಾಗಿ ಬೆನ್ನು ನೋವು, ಕತ್ತು ನೋವು, ಮೊಣಕಾಲು ಸಮಸ್ಯೆಗಳು ಬೇಗ ಬರುತ್ತಿವೆ. ಆದರೆ ದಿನಕ್ಕೆ ಹತ್ತು ನಿಮಿಷ ರಂಗೋಲಿ ಬಿಡೋ ಅಭ್ಯಾಸ ಇದ್ದರೆ, ದೇಹ ಸ್ವತಃ ಸ್ಟ್ರೆಚ್ ಆಗುತ್ತೆ.
ಇನ್ನೊಂದು ದೊಡ್ಡ ಉಪಯೋಗ – ಮೆದುಳಿಗೆ ವ್ಯಾಯಾಮ. ರಂಗೋಲಿ ಬಿಡುವಾಗ ಗಮನ, ಸಹನೆ, ಸ್ಮರಣೆ, ಕ್ರಿಯೇಟಿವಿಟಿ ಎಲ್ಲವೂ ಕೆಲಸ ಮಾಡುತ್ತವೆ. ಯಾವ ಡಿಸೈನ್ ಬಿಡೋದು, ಎಲ್ಲಿ ಲೈನ್ ಹೋಗಬೇಕು, ಕೈ ಜಾರಬಾರದು ಅಂತಾ ಮೆದುಳು ಫುಲ್ ಅಲರ್ಟ್ ಇರುತ್ತೆ. ಇದರಿಂದ ಮೆದುಳಿನ ಆರೋಗ್ಯ ಚೆನ್ನಾಗಿರುತ್ತೆ. ಇವತ್ತು ರೀಲ್ಸ್ ನೋಡೋಾಗ ಮೆದುಳು ಕೆಲಸ ಮಾಡಲ್ಲ… ಕೇವಲ ಸ್ಕ್ರೋಲ್, ಸ್ಕ್ರೋಲ್, ಸ್ಕ್ರೋಲ್. ಅದಕ್ಕೇ ಕೋಪ, ಅಶಾಂತಿ, ನೆಮ್ಮದಿ ಇಲ್ಲದ ಮನಸ್ಸು ಹೆಚ್ಚಾಗಿದೆ.
ರಂಗೋಲಿ ಬಿಡೋದು ಮನಸ್ಸಿಗೂ ಥೆರಪಿ. ಬೆಳಗ್ಗೆ ಸಣ್ಣ ಸಂಗೀತ ಹಾಕಿಕೊಂಡು, ಶಾಂತವಾಗಿ ರಂಗೋಲಿ ಬಿಡೋದ್ರಲ್ಲಿ ಒಂದು ಧ್ಯಾನ ಇದೆ. ಒತ್ತಡ, ಟೆನ್ಶನ್, ಬೇಜಾರು—all slow ಆಗಿ ಕಡಿಮೆಯಾಗುತ್ತೆ. ಆದರೆ ಮೊಬೈಲ್ ರೀಲ್ಸ್ ಏನು ಮಾಡುತ್ತೆ? ಇನ್ನೊಬ್ಬರ ಜೀವನ ನೋಡಿ, ನಮ್ಮ ಜೀವನ ಕಡಿಮೆ ಅನ್ನೋ ಫೀಲಿಂಗ್ ತರುತ್ತೆ. ಅದ್ರಿಂದ ಮನಸ್ಸು ಇನ್ನಷ್ಟು ಅಶಾಂತ ಆಗುತ್ತೆ.
ಮಕ್ಕಳಿಗೆ ರಂಗೋಲಿ ಕಲಿಸದೇ ಇದ್ದರೆ ನಷ್ಟ ಯಾರಿಗೆ? ಆ ಮಕ್ಕಳಿಗೇ. ಇವತ್ತು ಅನೇಕ ಹೆಣ್ಣು ಮಕ್ಕಳು “ನಮಗೆ ರಂಗೋಲಿ ಬರಲ್ಲ” ಅನ್ನೋದೇ ಹೆಮ್ಮೆ ಅಂತಾ ಅಂದುಕೊಂಡಿದ್ದಾರೆ. ಆದರೆ ಅದು ಹೆಮ್ಮೆ ಅಲ್ಲ… ಅದು ನಾವು ಕಳೆದುಕೊಂಡ ಆರೋಗ್ಯದ ಸೂಚನೆ. ಇದಕ್ಕೆ ಮಕ್ಕಳು ಮಾತ್ರ ಕಾರಣ ಅಲ್ಲ, ಪೋಷಕರೂ ಕಾರಣ. ನಮಗೂ ರಂಗೋಲಿ ಬರಲ್ಲ, ನಮಗೆ ಟೈಮ್ ಇಲ್ಲ ಅಂತಾ ಮಕ್ಕಳಿಗೆ ಕಲಿಸೋ ಪ್ರಯತ್ನವೇ ಮಾಡಿಲ್ಲ.
ಇದು ಹಳೆಯ ಕಾಲದ ಸಂಪ್ರದಾಯ ಅಂತಾ ತಳ್ಳಿಹಾಕಬೇಡಿ. ನಮ್ಮ ಹಿರಿಯರು ವಿಜ್ಞಾನ ಗೊತ್ತಿಲ್ಲದೆ ಮಾಡಿಲ್ಲ. ಅವರು ಅನುಭವದಿಂದ ಕಂಡುಕೊಂಡಿದ್ದರು – ರಂಗೋಲಿ ಬಿಡೋದು ದೇಹಕ್ಕೂ, ಮನಸ್ಸಿಗೂ ಒಳ್ಳೆಯದು ಅಂತಾ. ಇವತ್ತು ನಾವು ಆ ಜ್ಞಾನ ಬಿಟ್ಟು ಮೊಬೈಲ್ ಜ್ಞಾನ ಹಿಡಿದಿದ್ದೇವೆ. ಫಲ ಏನು? ಕಿರಿಯ ವಯಸ್ಸಲ್ಲೇ ಆರೋಗ್ಯ ಸಮಸ್ಯೆಗಳು.
ಆದ್ರಿಂದ ಹೇಳ್ತಿದ್ದೀನಿ… ಇನ್ನು ಕನಿಷ್ಠ ನಿಮ್ಮ ಮನೆ ಮುಂದೆ ಒಂದು ಸಣ್ಣ ರಂಗೋಲಿ ಬಿಡಿ. ದೊಡ್ಡ ಡಿಸೈನ್ ಬೇಡ, ಪರ್ಫೆಕ್ಟ್ ಆಗಿರಬೇಕು ಅಂತಾ ಬೇಡ. ಕೈ ಚಲಿಸಿದ್ರೇ ಸಾಕು, ಮನಸ್ಸು ನೆಮ್ಮದಿಯಾದ್ರೇ ಸಾಕು. ನಿಮ್ಮ ಮಕ್ಕಳಿಗೆ ತೋರಿಸಿ – “ಇದು ನಮ್ಮ ಸಂಸ್ಕೃತಿ, ಇದು ನಮ್ಮ ಆರೋಗ್ಯ” ಅಂತಾ.
ರೀಲ್ಸ್ ಎಲ್ಲೂ ಓಡಿಹೋಗಲ್ಲ. ಆದರೆ ಆರೋಗ್ಯ ಹೋದ್ರೆ ಮತ್ತೆ ಬರುವುದಿಲ್ಲ. ಇವತ್ತು ಎಚ್ಚರವಾಗದಿದ್ದರೆ, ನಾಳೆ ದೇಹವೇ ಎಚ್ಚರ ಕೊಡುವುದು. ಅದಕ್ಕಿಂತ ಮುಂಚೆ ಹಷಾರು. ರಂಗೋಲಿ ಮರೆಯಬೇಡಿ… ಅದು ನೆಲದ ಮೇಲೆ ಬಿಡೋ ಬಣ್ಣ ಅಲ್ಲ, ನಮ್ಮ ಆರೋಗ್ಯದ ಮೇಲೆ ಬಿಡೋ ಗುರುತು.

ಅತಿಯಾಗಿ ಸ್ವೀಟ್ ತಿನ್ನಬೇಡಿ, ವಯಸ್ಸು ಎಷ್ಟೇ ಇದ್ದರು ಎಲ್ಲದರಲ್ಲೂ ಮಿತಿ ಇರಲಿ.
15/02/2026

ಅತಿಯಾಗಿ ಸ್ವೀಟ್ ತಿನ್ನಬೇಡಿ,
ವಯಸ್ಸು ಎಷ್ಟೇ ಇದ್ದರು ಎಲ್ಲದರಲ್ಲೂ ಮಿತಿ ಇರಲಿ.

14/02/2026

ಇದು ಆರೋಗ್ಯದ ಪಾಠ | Health tips questions.

13/02/2026

good ways to away from the heart attacks

13/02/2026

old memories | ಹಳೆಯ ನೆನಪುಗಳ ಮಧುರ

12/02/2026

Vitamin A - Will help for your eye
ಕಣ್ಣಿಗೆ ಯಾವ ಆಹಾರ ಬೇಕು ?

12/02/2026

Which exercise will help us.
ನಮ್ಮದೇಹಕ್ಕೆ ವಾಕ್ ಮಾಡುವುದು ತುಂಬಾನೇ ಮುಖ್ಯ... ಹೃದಯದ ಸ್ನಾಯು ಬಲಪಡಿಸುವ ವ್ಯಾಯಮ ಯಾವುದು ?

12/02/2026

food for diabetes / Sugar patient

Address

Bangalore

Website

Alerts

Be the first to know and let us send you an email when Karnataka India posts news and promotions. Your email address will not be used for any other purpose, and you can unsubscribe at any time.

Share

Share on Facebook Share on Twitter Share on LinkedIn
Share on Pinterest Share on Reddit Share via Email
Share on WhatsApp Share on Instagram Share on Telegram