11/08/2016
ಥೈರಾಯಿಡ್ ಬಗ್ಗೆ ಸಣ್ಣ ಮಾಹಿತಿ...
ನಮ್ಮ ಶರೀರದಲ್ಲಿರುವ ಎಲ್ಲಾ ಗ್ರಂಥಿಗಳಲ್ಲಿ ಥೈರಾಯಿಡ್ ಗ್ರಂಥಿಯು ಅತೀ ದೊಡ್ಡ ಗ್ರಂಥಿಯಾಗಿದೆ. ಸಾಮಾನ್ಯವಾಗಿ ಎಲ್ಲಾ ಜೀವಿಗಳಲ್ಲೂ ಕಂಡುಬಂದರೂ, ಮೀನಿನಲ್ಲಿ ಮಾತ್ರ ಚರ್ಮದ ಭಾಗದಲ್ಲಿ ಇರುತ್ತದೆ. ಥೈರಾಯಿಡ್ ಗ್ರಂಥಿಯು ನಮ್ಮ ಗಂಟಲಿನ ಮಧ್ಯ ಭಾಗದಲ್ಲಿ ಹಾಗೂ ಮುಂಭಾಗದಲ್ಲಿ ಇರುವುದರಿಂದ, ಇದು ನಮ್ಮ ಶರೀರಕ್ಕೆ ಅವಶ್ಯವಿರುವ ವಿವಿಧ ಹಾರ್ಮೋನ್ ಗಳನ್ನು ಉತ್ಪತ್ತಿಮಾಡಲು ನೆರವಾಗುತ್ತದೆ. ಅಷ್ಟೇ ಅಲ್ಲದೆ ಈ ಹಾರ್ಮೋನ್ ಗಳು ನಮ್ಮ ಶರೀರದ ಸಂಚಲನ ವ್ಯವಸ್ಥೆಯನ್ನು ಸುಗಮಗೊಳಿಸಲು ನೆರವಾಗುವುದರ ಜೊತೆಗೆ ದೇಹದ ಸೂಕ್ಷ್ಮತೆಯನ್ನು ಕಾಪಾಡುವಲ್ಲಿ ಮಹತ್ವದ ಪಾತ್ರವಹಿಸುತ್ತವೆ. ಇತ್ತೀಚಿನ ದಿನಗಳಲ್ಲಿ ಥೈರಾಯಿಡ್ ಸಮಸ್ಯೆಯು ಮಹಿಳೆಯರನ್ನು ಹೆಚ್ಚು ಕಾಡುತ್ತಿದೆ. ಹಾರ್ಮೋನ್ ಉತ್ಪತ್ತಿಯು ಕಡಿಮೆಯಾದಲ್ಲಿ ಅದನ್ನು ಹೈಪೊಥೈರಾಯಿಡಿಸಮ್ ಅಥವಾ ಥೈರಾಯಿಡ್ ವಿಫಲವಾಗಿದೆಯೆಂದು ಹೇಳಲಾಗುತ್ತದೆ.
ಹಾರ್ಮೋನ್ ಉತ್ಪತ್ತಿಯು ಜಾಸ್ತಿಯಾದಲ್ಲಿ ಅದನ್ನು ಹೈಪರ್ಥೈರಾಯಿಡಿಸಮ್ಯೆಂದು ಹೇಳಲಾಗುತ್ತದೆ. ಅಲ್ಲದೆ ವಯಸ್ಸಾದಂತೆ ಥೈರಾಯಿಡ್ ಗ್ರಂಥಿಯ ಸಮಸ್ಯೆ ಬರುವುದು ಸರ್ವೇ ಸಾಮಾನ್ಯ. ಬದುಕಿನ ಒತ್ತಡಗಳೂ ಸಹ ಈ ವ್ಯಾಧಿಗೆ ಕಾರಣವಾಗಲಿದ್ದು, ಅಯೋಡಿನ್ ಕೊರತೆಯಿಂದಲೂ ಸಹ ಈ ಸಮಸ್ಯೆ ಉಂಟಾಗುತ್ತದೆ.
ಮೇಲೆ ತಿಳಿಸಿದಂತೆ ಥೈರಾಯಿಡ್ನಲ್ಲಿ 2 ವಿಧ...
1)ಹೈಪೋಥೈರಾಯಿಡ್.
2)ಹೈಪರ್ ಥೈರಾಯಿಡ್..
** ಹೈಪೋಥೈರಾಯಿಡ್...---
ಹೈಪೊ ಥೈರಾಯಿಡಿಸಮ್ ಅಂದರೆ ಥೈರಾಯಿಡ್ ಗ್ರಂಥಿ ಸರಿಯಾದ ಪ್ರಮಾಣದಲ್ಲಿ ಟಿ3, ಟಿ4 ಅನ್ನು ಬಿಡುಗಡೆಮಾಡುತ್ತಿಲ್ಲ ಎಂದು.
ಹೈಪೊ ಥೈರಾಯಿಡಿಸಮ್ನ ಲಕ್ಷಣಗಳು
• ಮಲಬದ್ದತೆ,
• ಸ್ಥೌಲ್ಯ
• ಖಿನ್ನತೆ
• ಅತಿಯಾದ ನಿದ್ರೆ
• ಯಾವುದರಲ್ಲೂ ಆಸಕ್ತಿ ಇಲ್ಲದಿರುವುದು
ಅತಿಯಾದ ಬೇಸರ, ಜಡತೆ, ಕೆಲಸದಲ್ಲಿ ಆಸಕ್ತಿ ಇಲ್ಲದಿರುವುದು, ಅತಿಯಾದ ನಿದ್ದೆ, ಹಸಿವಾಗದೇ ಇರುವುದು, ಯಾವುದೂ ಬೇಡವೆನ್ನಿಸುವುದು, ತೂಕಹೆಚ್ಚಾಗುವುದು. ಅತಿಯಾಗಿ ಮುಟ್ಟು ಹೋಗುವುದು .
* ಹೈಪೋ ಥೈರಾಯಿಡ್ ನ ಕಾರಣಗಳು
ಮೊಸರು, ಬೆಣ್ಣೆ, ಸಿಹಿ ಖಾದ್ಯ, ಹಗಲು ನಿದ್ದೆ, ವ್ಯಾಯಾಮ ಮಾಡದಿರುವುದು, fridgeನಲ್ಲಿನ ವಸ್ತುವಿನ ಸೇವನೆ, ಸುಖ ಜೀವನ, ಹೊರಗಿನ ತಿನಿಸುಗಳನ್ನ ತಿನ್ನುವುದು, ಕರೆದ ಪದಾರ್ಥ ಸೇವನೆ, ಎಣ್ಣೆಯನ್ನು ಅತಿ ಹೆಚ್ಚು ಸೇವನೆ, ಕೆಲವು ಔಷಧಿಗಳಿಂದ ಹಾಗು ಬಹಳ ಮುಖ್ಯ ನಮ್ಮ ದೇಹ ಪ್ರಕೃತಿ ಇತ್ಯಾದಿ ....
** ಹೈಪರ್ ಥೈರಾಯಿಡ್ ...--
ಹೈಪರ್ ಥೈರಾಯಿಡಿಸಮ್ ಅಂದರೆ ಥೈರಾಯಿಡ್ ಗ್ರಂಥಿ ಸರಿಯಾದ ಪ್ರಮಾಣಕಿಂತ ಹೆಚ್ಚು ಟಿ3, ಟಿ4 ಅನ್ನು ಬಿಡುಗಡೆಮಾಡುತ್ತಿದೆ ಎಂದು.
**ಹೈಪರ್ ಥೈರಾಯಿಡ್ ನ ಲಕ್ಷಣಗಳು ...
• ಅತಿಸಾರ
• ಕೃಶತೆ
• ಕಳವಳ
• ರಾತ್ರಿ ನಿದ್ದೆ ಬಾರದಿರುವುದು
• ಸಂಶಯ
• ಅತಿಯಾಗಿ ಮಾತನಾಡುವುದು
• 2-3 ತಿಂಗಳವರೆಗು ಮುಟ್ಟಾಗದೆ ಇರುವುದು
• ಕೂದಲು ತೆಳುವಾಗಿ ಉದುರುವುದು
• ನಡುಕ
• ಸೆಖೆ ತಡೆಯಲಾಗದೇ ಇರುವುದು
• ಯಾವಾಗಲೂ ಜ್ವರಬಂದಂತಿರುವುದು
• ಗಾಬರಿಯಾಗುವುದು.
ತೂಕ ಕ್ರಮೇಣ ಇಳಿದು ಸುಸ್ತಾಗುವುದು, ರಾತ್ರಿ ಸರಿಯಾಗಿ ನಿದ್ದೆ ಬಾರದಿರುವುದು, ಮನಸ್ಸಿನಲ್ಲೇ ಏನೋ ಕಸಿವಿಸಿ, ಸಮಾಧಾನ ಇಲ್ಲದೆ ಇರುವುದು, ಬೇರೆಯವರು ಮಾತಾಡಿದರೆ ಕಿರಿಕಿರಿಯಾಗುವುದು, ದಿನದಲ್ಲಿ 3 ರಿಂದ 4 ಬಾರಿ ಬೇದಿಯಾಗುವುದು, ಅನುಮಾನ, ತಾನು ಅತಿಯಾಗಿ ಮಾತಾಡುವುದು, ನಿಶಕ್ತಿಗೆ ಕೆಲವೊಮ್ಮೆ ನಡುಕ ಬರುವುದು, ಮಾತಾಡುತ್ತಿರುವಾಗ ಗಂಟಲು ಊದುವುದು , ಅವರ ನಾಡಿಬಡಿತ ನೋಡಿದಾಗ ಅತಿ ವೇಗವಿದ್ದು ಹೃದಯ ಬಡಿತವೂ ವೇಗವಾಗಿರುತ್ತದೆ ಇದು ಹೈಪರ್ ಥೈರಾಯಿಡ್ ಎಂದು ತಿಳಿದರೂ ಒಮ್ಮೆ ಟೆಸ್ಟ ಮಾಡಿಸುವುದು ಸೂಕ್ತ ...
ಹೈಪರ್ ಥೈರಾಯಿಡ್ ನ ಕಾರಣಗಳು...
ಅತಿಯಾದ ವ್ಯಾಯಾಮ, ಕುಪೋಷಣೆ, ಕೆಲಸದ ಒತ್ತಡ, ತುಪ್ಪ ತಿನ್ನದೇ ಇರುವುದು, ಬೇಕಾದಷ್ಟು ಸಿಹಿ ಸೇವಿಸದೇ ಇರುವುದು, ರಾತ್ರಿ ನಿದ್ದೆ ಮಾಡದೇ ಇರುವುದು, ಚಿಂತೆ, ಅಯೋಡಿನ್ನ ಕೊರತೆ, ನಮ್ಮ ದೇಹ ಪ್ರಕೃತಿ....
*** ಇನ್ನಿತರೆ ಪರಿಣಾಮಗಳು ಮತ್ತು ಕಾರಣಗಳು ....
ಈ ವ್ಯಾಧಿಯಿಂದ ದೇಹದ ತೂಕವು ಹೆಚ್ಚಾಗುವುದಲ್ಲದೇ ಗರ್ಭಪಾತ, ಗರ್ಭಕೋಶ ತೊಂದರೆಗಳು, ಒಣ ಚರ್ಮ, ಒಣ ಕೇಶ, ಏಕಾಗ್ರತೆಯ ಕೊರತೆ, ಆಯಾಸ, ಮಾನಸಿಕ ದೌರ್ಬಲ್ಯ, ಕೆರಳಿಕೆ, ಬಂಜೆತನ ಹೀಗೆ ಹಲವಾರು ಶಾರೀರಿಕ ಸಮಸ್ಯೆಗಳು ಉಂಟಾಗುವುದರ ಜೊತೆಗೆ, ಹಾರ್ಮೋನ್ ಕೊರತೆಯಿಂದಾಗಿ ಕೂಡ ದೇಹದ ಸಾಮರ್ಥ್ಯ ಕೂಡ ಕುಂದುತ್ತದೆ. ಇದಕ್ಕೆ ಗರ್ಭಿಣಿಯರೂ ಹೊರತಾಗಿಲ್ಲ. ಈ ವ್ಯಾಧಿಯಿಂದ ಗರ್ಭಿಣಿಯರಿಗೆ ಗರ್ಭಪಾತವಾಗುವ ಸಾಧ್ಯತೆಯಿರುತ್ತದೆ. ಇದರಿಂದ ಬಂಜೆತನವೂ ಸಹ ಪ್ರಾಪ್ತಿಯಾಗಿ ಪುರುಷ ಹಾಗೂ ಮಹಿಳೆಯರನ್ನು ಕಾಡುತ್ತದೆ.
ಥೈರಾಯಿಡ್ ಸಂಬಂಧಿತ ಸಮಸ್ಯೆಗಳು ಉದ್ಭವಿಸಲು ಕಾರಣವಾದಂತಹ ಅಂಶಗಳು..
***ದಿನನಿತ್ಯ ಉಪಯೋಗಿಸುವ ವಸ್ತುಗಳಿಂದ ಉಂಟಾಗಬಹುದಾದ ಥೈರಾಯಿಡ್ ತೊಂದರೆಗಳು...
# ಪ್ಲಾಸ್ಟಿಕ್ ಬಳಕೆ ಪ್ಲಾಸ್ಟಿಕ್ ಬಟ್ಟಲು ಅಥವಾ ಪ್ಲಾಸ್ಟಿಕ್ ಪಾತ್ರೆಯಲ್ಲಿ ಸೇವಿಸುವುದು, ಕುಡಿಯುವುದು ಅಥವಾ ಬಿಸಿ ಆಹಾರ ಪದಾರ್ಥವನ್ನು ಸೇವಿಸುವುದರಿಂದ ಥೈರಾಯಿಡ್ ಗ್ರಂಥಿಯು ಬೇಗ ಹಾಳಾಗಲು ನೇರ ಕಾರಣವಾಗುತ್ತದೆ. ಪ್ಲಾಸ್ಟಿಕ್ ನಲ್ಲಿ ಕೆಲವು ವಿಷಕಾರಿ ಹಾಗೂ ಹಾನಿಕಾರಕ ಅಂಶಗಳಿದ್ದು, ಅದು ಸೇವಿಸುವ ಆಹಾರದ ಮೂಲಕ ಶರೀರವನ್ನು ಪ್ರವೇಶಿಸುತ್ತದೆ. ಇದರಿಂದ ಥೈರಾಯಿಡ್ ಗ್ರಂಥಿ ಮಾತ್ರವಲ್ಲದೇ ಇನ್ನೂ ಅನೇಕ ಆರೋಗ್ಯ ಸಮಸ್ಯೆಗಳಿಗೆ ಹಾಗೂ ಕ್ಯಾನ್ಸರ್ ನಂತಹ ಮಾರಣಾಂತಿಕ ಕಾಯಿಲೆಗಳಿಗೆ ನೇರ ಕಾರಣವಾಗುತ್ತದೆ.
# ಹಳಸಂಡೆ ಜಾತಿಯ ಕಾಳುಗಳ ಬಳಕೆ ಸೋಯ್ ಅಥವಾ ಹಳಸಂದೆ ಜಾತಿಯ ಕಾಳುಗಳನ್ನು ಆಹಾರದಲ್ಲಿ ಬಳಸುವುದರಿಂದ, ಅದರಲ್ಲಿರುವ ಫೈಟೋಎಸ್ಟ್ರೋಜೆನ್ಸ್ ಎಂಬ ಸತ್ವವು ಉತ್ಪತ್ತಿಯಾಗುವ ಥೈರಾಯಿಡ್ ಹಾರ್ಮೋನ್ ಅನ್ನು ಸೆಳೆದುಕೊಳ್ಳುತ್ತದೆ. ಇದರಿಂದ ಶರೀರಕ್ಕೆ ಅವಶ್ಯವಿರುವ ಹಾರ್ಮೋನ್ ಗಳ ಕೊರತೆಯುಂಟಾಗುತ್ತದೆ. ಇದನ್ನು ಹೆಚ್ಚು ಸೇವಿಸುವುದರಿಂದ ಥೈರಾಯಿಡ್ ಗ್ರಂಥಿಯ ಉತ್ಪಾದನಾ ಸಾಮರ್ಥವು ಕಡಿಮೆಯಾಗಿ, ಸಂಬಂಧಿತಿ ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ.
# ಕ್ರಿಮಿನಾಶಕ ಸಿಂಪಡಿಸಿದ ಹಣ್ಣು ಮತ್ತು ತರಕಾರಿಗಳ ಬಳಕೆ ಹಣ್ಣು ಮತ್ತು ತರಕಾರಿಗಳನ್ನು ಸೇವಿಸುವ ಮುನ್ನ ಚೆನ್ನಾಗಿ ಸ್ವಚ್ಛಗೊಳಿಸಿ. ಇಲ್ಲವಾದಲ್ಲಿ ಅವುಗಳಿಗೆ ಸಿಂಪಡಿಸಿರುವ ಕೀಟನಾಶಕಗಳು ನೇರವಾಗಿ ಥೈರಾಯಿಡ್ ಗ್ರಂಥಿಯನ್ನು ನಾಶ ಮಾಡುವುದಲ್ಲದೇ ಮೆದುಳನ್ನು ಸಹ ನಾಶಮಾಡಲು ಕಾರಣವಾಗುತ್ತದೆ ಹಾಗೂ ಇನ್ನಿತರೆ ಆರೋಗ್ಯ ಸಮಸ್ಯೆಗಳಿಗೆ ಎಡೆಮಾಡಿಕೊಡುತ್ತದೆ.
# ಫ್ಲೋರೈಡ್ ಮಿಶ್ರಿತ ನೀರಿನ ಸೇವನೆ ನೀರಿನಲ್ಲಿ ಸಹಜವಾಗಿ ಫ್ಲೋರೈಡ್ ರಾಸಾಯನಿಕವು ಇದ್ದೇ ಇರುತ್ತದೆ. ಆದರೆ ಹೆಚ್ಚು ಫ್ಲೋರೈಡ್ ಇದ್ದಲ್ಲಿ ನೇರವಾಗಿ ಥೈರಾಯಿಡ್ ಗ್ರಂಥಿಯನ್ನು ನಾಶಮಾಡಲು ಕಾರಣವಾಗುತ್ತದೆ. ಇದನ್ನು ಹೊರತುಪಡಿಸಿ ನೀರಿನಲ್ಲಿರುವ ಕ್ಲೋರಿನ್ ಅಂಶ ಮತ್ತು ಇತರೆ ವಸ್ತುಗಳು ಸಹ ಥೈರಾಯಿಡ್ ಗ್ರಂಥಿಯು ನಾಶವಾಗಲು ಕಾರಣವಾಗುತ್ತವೆ.
*** #ಪರಿಹಾರ #***
*ದಿನನಿತ್ಯ ಯೋಗಾಭ್ಯಾಸ ಮಾಡುವುದು ..
*ವಾಕಿಂಗ್ ಮಾಡುವುದು ..
*ಆಕ್ಯೂಪಂಚರ್ ಚಿಕಿತ್ಸೆಯ ಮೂಲಕ ಥೈರಾಯಿಡನ್ನ Maintain ಮಾಡಬಹುದು ....
ಹೆಚಿನ ಮಾಹಿತಿಗಾಗಿ ...
Like page :
SANJEEVINI ACU HEALTHCARE ..
ಚಿಕಿತ್ಸೆಗಾಗಿ...
Visit our clinic ....
SANJEEVINI ACU HEALTHCARE ...
#83/160 ..Magadi main road ...
Sunkadakatte, Bangalore -91...
ಇಂತೀ ನಿಮ್ಮ ಡಾಕ್ಟರ್ ...
Dr.KeshavaCharya Mutthu(KTY)...