04/10/2025
ಸಮಸ್ತ ಒಕ್ಕಲಿಗ ಕುಲಬಾಂಧವರಿಗೆ ನಮಸ್ಕಾರಗಳು.
ಬಂಧುಗಳೇ ಜಾತಿ ಸಮೀಕ್ಷೆ ಪ್ರಾರಂಭವಾಗಿದೆ. ತಾವೆಲ್ಲರೂ ಜಾತಿ ಸಮೀಕ್ಷೆಯಲ್ಲಿ ಭಾಗವಹಿಸಿ ತಮ್ಮ ತಮ್ಮ ಗ್ರಾಮದಲ್ಲಿ ನಮ್ಮೆಲ್ಲಾ ಕುಲಬಾಂಧವರ ಎಲ್ಲಾ ವಿವರಗಳನ್ನು ನಿಖರವಾಗಿ ಬರೆಸಿ 8, 9 & 10 ಕಾಲಮ್ನಲ್ಲಿ ಧರ್ಮ ಹಿಂದೂ, ಜಾತಿ ಒಕ್ಕಲಿಗ ಹಾಗೂ ಉಪಜಾತಿ ಒಕ್ಕಲಿಗ ಎಂದು ಬರೆಸುವ ಮುಖಾಂತರ ನಮ್ಮ ಕೋಡ್ 1541 ಎಂದು ಬರೆಸಬೇಕು.
ಬಂಧುಗಳೇ ನಮ್ಮ ಒಗ್ಗಟ್ಟನ್ನು ಪ್ರದರ್ಶನ ಮಾಡುವಂತಹ ಸಮಯ ಈಗ ಬಂದಿದೆ. ನಾವೆಲ್ಲ ಸ್ವಾಭಿಮಾನಿಗಳಾಗಿ ನಾವೆಲ್ಲ ಒಕ್ಕಲಿಗರು ಎಂದು ಬರೆಸುವ ಮುಖಾಂತರ ಈ ರಾಜ್ಯದಲ್ಲಿ ನಮ್ಮ ಸ್ವಾಭಿಮಾನವನ್ನು ಮೆರೆಯುವಂತ ಸಮಯ ಇದು.
ದಯಮಾಡಿ ನೀವೆಲ್ಲರೂ ಈ ಜಾತಿ ಸಮೀಕ್ಷೆಯಲ್ಲಿ ತಪ್ಪದೇ ಭಾಗವಹಿಸಿ.
ಜಾಗೃತರಾಗಿ- ಜಾಗೃತಿ ಮೂಡಿಸಿ ಒಕ್ಕಲಿಗ ಎಂದು ಬರೆಸುವ ಮೂಲಕ ನಮ್ಮೆಲ್ಲರ ಒಗ್ಗಟ್ಟನ್ನು ಪ್ರದರ್ಶನ ಮಾಡಬೇಕು.
ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ ನಿರ್ಮಲಾನಂದನಾಥ ಮಹಾಸ್ವಾಮೀಜಿ
72ನೇ ಪೀಠಾಧ್ಯಕ್ಷರು
ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ