15/09/2015
ಜಗತ್ತಿನ ಮಧುಮೇಹ ರೋಗಿಗಳಲ್ಲಿ ಶೇಕಡಾ 60 ರಷ್ಟು ರೋಗಿಗಳು ಭಾರತದಲ್ಲಿಯೇ ಇದ್ದಾರೆ…. ನಿಮಗೆ ವಯಸ್ಸು 30 ದಾಟಿದಯೇ ಮಧುಮೇಹ ಪರೀಕ್ಷೆ ಮಾಡಿಸಿ!
ಇಂದಿನ ದಿನಗಳಲ್ಲಿ ಡಯಾಬಿಟೀಸ್ ಅಥವಾ ಮಧುಮೇಹ ತೊಂದರೆಯಿಂದ ಬಳಲುತ್ತಿರುವವರ ಸಂಖ್ಯೆ ಬೆಳೆಯುತ್ತಿದೆ. ಇದಕ್ಕೆ ವಯಸ್ಸಿನ ಮಿತಿಯೂ ಇಲ್ಲ. ಚಿಕ್ಕಮಕ್ಕಳಿಂದ ಹಿಡಿದು ವೃದ್ಧರವರೆಗೆ ಯಾರಿಗೆ ಬೇಕಾದರೂ ಈ ತೊಂದರೆ ಕಾಣಿಸಿಕೊಳ್ಳಬಹುದು.
ದೇಹದಲ್ಲಿ ಗ್ಲೂಕೋಸ್ ಪದಾರ್ಥದ ನಿಯಂತ್ರಣ ವ್ಯವಸ್ಥೆಯ ದೋಶಗಳಿಂದ ಉಂಟಾಗುವ ಈ ಕಾಯಿಲೆಯು ವಂಶಪಾರಂಪರ್ಯವಾಗಿಯೂ ಬರಬಹುದು.
ಪ್ರತಿ ವರ್ಷ ನಮ್ಮ ದೇಶದಲ್ಲಿ ಸುಮಾರು 10 ಲಕ್ಷ ಮಂದಿ ಮಧುಮೇಹ ತೊಂದರೆಯಿಂದಲೇ ಮೃತಪಡುತ್ತಿದ್ದು, ವರ್ಷದಿಂದ ವರ್ಷಕ್ಕೆ ಮಧುಮೇಹ ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ ಎಂದು ಇಂಟರ್ನ್ಯಾಷನಲ್ ಡಯಾಬಿಟೀಸ್ ಫೆಡರೇಶನ್ ಹೇಳಿದೆ.
ಡಯಾಬಿಟೀಸ್ ಫೆಡರೇಶನ್ನ ಸಮೀಕ್ಷೆಯ ಪ್ರಕಾರ ಭಾರತದಲ್ಲಿ ಸುಮಾರು 6.13 ಕೋಟಿ ಜನ ಸಕ್ಕರೆ ಕಾಯಿಲೆಗೆ ಒಳಗಾಗಿದ್ದಾರೆ. ಇಡೀ ಜಗತ್ತಿನ ಮಧುಮೇಹ ರೋಗಿಗಳಲ್ಲಿ ಶೇಕಡಾ 60 ರಷ್ಟು ರೋಗಿಗಳು ಭಾರತದಲ್ಲಿಯೇ ಇದ್ದಾರೆ ಎಂಬ ಆತಂಕಕಾರಿ ಮಾಹಿತಿ ನೀಡಿದೆ.
ಭಾರತದಲ್ಲಿ ಮಧುಮೇಹವನ್ನು ಗಂಭೀರವಾಗಿ ಪರಿಗಣಿಸದಿರುವುದು ಮತ್ತು ನಿಯಂತ್ರಣದ ಕುರಿತು ಹೆಚ್ಚಿನ ಅರಿವಿಲ್ಲದಿರುವುದೇ ಈ ರೋಗ ಹೆಚ್ಚುತ್ತಿರುವುದಕ್ಕೆ ಕಾರಣ ಎನ್ನಲಾಗಿದೆ.
ಡಯಾಬಿಟಿಸ್ ಖಾಯಿಲೆಯ ಕುರಿತ ಜಾಗೃತೆಯ ಕೊರತೆಯಿಂದ ಭಾರತದಲ್ಲಿ ಮಧುಮೇಯ ತೊಂದರೆ ಉಲ್ಬಣವಾಗುತ್ತಿದೆಯೇ ಹೊರತು, ಇದು ನಿಯಂತ್ರಿಸಲಾಗದ ಖಾಯಿಲೆಯಲ್ಲ. ಸರಿಯಾದ ಪಥ್ಯ, ಸಮಯಕ್ಕೆ ಸರಿಯಾಗಿ ನಿಯಮಿತ ಆಹಾರ ಸೇವನೆ ಮತ್ತು ವ್ಯಾಯಾಮಗಳಿಂದ ಈ ರೋಗವನ್ನು ನಿಯಂತ್ರಣದಲ್ಲಿಡಬಹುದು. ದಿನವೂ ಸೇವಿಸುವ ಆಹಾರದಲ್ಲಿಯೇ ಸ್ವಲ್ಪ ಬದಲಾವಣೆ ಮಾಡಿಕೊಂಡು, ಆರೋಗ್ಯವನ್ನು ಕಾಪಾಡಿಕೊಳ್ಳಬಹುದು
ನಿಮಗೆ ವಯಸ್ಸು 30 ದಾಟಿದಯೇ ಮಧುಮೇಹ ಪರೀಕ್ಷೆ ಮಾಡಿಸಿ!
ನಮ್ಮ ತಾತ ಮುತ್ತಾಂದಿರು ನೂರು ವರ್ಷಕ್ಕಿಂತ ಅಧಿಕ ಕಾಲ ಬಾಳಿರುವುದನ್ನು ಕೇಳಿದಾಗ ಅಥವಾ ಮನೆಯಲ್ಲಿ ಹಿರಿಯರಿದ್ದರೆ ಅವರು ಚಟುವಟಿಕೆಯಿಂದ ಓಡಾಡುವುದನ್ನು ನೋಡುವಾಗ ಈಗೀನ ಪೀಳಿಗೆಯವರಾದ ನಾವು ಇವರ ಹಾಗೆ ಇಷ್ಟು ಕಾಲ ಬದುಕಿರಲು ಸಾಧ್ಯವೇ? ಎಂಬ ಸಂಶಯ ಬಂದೇ ಬರುತ್ತದೆ. ಏಕೆಂದರೆ ಈವಾಗೆಲ್ಲಾ ವಯಸ್ಸು ಮೂವತ್ತು ದಾಟಿದರೆ ಸಾಕು ಕಾಯಿಲೆ ಕಸಾಲೆಗಳು ಬಂದು ಬಿಡುತ್ತವೆ. ಅದರಲ್ಲೂ ಮಧುಮೇಹದಂತಹ ಕಾಯಿಲೆಗಳು ಬರದಂತೆ ತುಂಬಾ ಎಚ್ಚರಿಕೆವಹಿಸಬೇಕು. ನಮ್ಮ ಬದಲಾಗಿರುವ ಜೀವನ ಶೈಲಿಗಳು, ಮಾನಸಿಕ ಒತ್ತಡ, ಪರಿಸರ ಮಾಲಿನ್ಯ, ಆರೋಗ್ಯಕರವಲ್ಲದ ಆಹಾರ ಪದ್ಧತಿಗಳು ಚಿಕ್ಕ ಪ್ರಾಯದಲ್ಲಿಯೇ ನಮ್ಮನ್ನು ರೋಗಿಗಳನ್ನಾಗಿ ಮಾಡುತ್ತಿದೆ. ಈ ರೀತಿ ಉಂಟಾಗಲು ಮುಖ್ಯ ಕಾರಣ ನಮ್ಮ ಜೀವನ ಶೈಲಿ ಎಂಬುದರಲ್ಲಿ ಎರಡು ಮಾತಿಲ್ಲ. ಈ ಜೀವನ ಶೈಲಿ ಮಧುಮೇಹ ತರುವಲ್ಲಿ ಹೇಗೆ ಕಾರಣವಾಗುತ್ತದೆ ಎಂದು ನೋಡೋಣ ಬನ್ನಿ. ಕೂತಲ್ಲೇ ಕೆಲಸ: ಈಗ ಪ್ರತಿಯೊಂದು ಕೆಲಸ ಕಾರ್ಯಗಳು ಕಂಪ್ಯೂಟರ್ ಮುಖಾಂತರವೇ ನಡೆಯುತ್ತಿವೆ. ಬೆಳಿಗ್ಗೆ ಕಂಪ್ಯೂಟರ್ ಎದುರು ಕುಳಿತರೆ ಏಳೋದು ರಾತ್ರಿನೇ. ಇದರಿಂದ ದೇಹಕ್ಕೆ ಯಾವುದೇ ವ್ಯಾಯಾಮವಿರುವುದಿಲ್ಲ. ಕುಳಿತುಕೊಂಡೇ ಮಾಡುವ ಕೆಲಸ ಇರುವವರಿಗೆ ವಾಕಿಂಗ್ ಅಥವಾ ಮೆಟ್ಟಿಲೇರುವುದು... ಇಂಥವೆಲ್ಲ ಬೇಕೇ ಬೇಕು. ಕುಳಿತೇ ಕೆಲಸ ಮಾಡುವವರು ಒಂದು ಗಂಟೆಗೊಮ್ಮೆಯಾದರೂ ಎದ್ದು ಅತ್ತಿತ್ತ ಹೋಗಿ, ನೀರು ಕುಡಿದು ಬಂದರೆ ಒಳಿತು. ಕೂತಲ್ಲೇ ಕೆಲಸ ಮಾಡುವುದರಿಂದ ಬೊಜ್ಜು ಹೆಚ್ಚುವುದು. ಈ ರೀತಿ ಮಾಡಿದರೆ ಮಧುಮೇಹ ಕಾಯಿಲೆಯನ್ನೂ ಕೂಡ ತಡೆಯಬಹುದು. ಒತ್ತಡ: ಟಾರ್ಗೆಟ್, ಸ್ಪರ್ಧೆ ಅಂತ ನಮ್ಮ ಜೀವನನದ ಸಾಕಷ್ಟು ಭಾಗವನ್ನು ಒತ್ತಡದಲ್ಲಿಯೇ ಕಳಿಯುತ್ತೇವೆ. ಹೊರಗಿನಿಂದಲೂ ಬೆಲೆ ಏರಿಕೆ, ಸಂಸಾರ ತಾಪ್ರತಯಗಳು, ಕಚೇರಿಯಲ್ಲೂ ಮಿತಿ ಮೀರಿದ ಕೆಲಸ ಇದರಿಂದ ಮಾನಸಿಕ ಒತ್ತಡ ಹೆಚ್ಚಾಗಿ, ನೇರವಾಗಿ ರಕ್ತದೊತ್ತಡದ ಮೇಲೆ ಪರಿಣಾಮ ಬೀರುತ್ತದೆ ಮಾತ್ರವಲ್ಲದೆ, ಮಧುಮೇಹ ಹೆಚ್ಚಳಕ್ಕೂ ಕಾರಣವಾಗಿದೆ. ಕುರುಕಲು ತಿಂಡಿ: ಟ್ರೆಂಡ್ ನ ಹೆಸರಿನಲ್ಲಿ ಪಿಜ್ಜಾ, ಪಾಸ್ತಾ, ನೂಡಲ್ಸ್, ಹೀಗೆ ಅಧಿಕ ಪೋಷಕಾಂಶಗಳಿಲ್ಲದ ಆಹಾರಕ್ಕೆ ಬಲಿಯಾಗುತ್ತಿದ್ದೇವೆ. ಬಾಯಿಗೆ ರುಚಿ ಬೇಕೆಂದು ಕುರುಕಲು ತಿಂಡಿ ತಿಂದರೆ ದೇಹದ ಆರೋಗ್ಯ ಬೇಗನೆ ಹಾಳಾಗುತ್ತದೆ. ಆದ್ದರಿಂದ ಆದಷ್ಟು ಆರೋಗ್ಯಕರ ಆಹಾರಕ್ರಮ ಪಾಲಿಸುವುದು ಒಳ್ಳೆಯದು. ಅಲ್ಲದೆ ಮಧುಮೇಹ ಬರದಂತೆ ತಡೆಯಲು ಈ ಕೆಳಗಿನ ಮುನ್ನಚ್ಚರಿಕೆ ಕ್ರಮ ಅನುಸರಿಸುವುದು ಒಳ್ಳೆಯದು. * ಮೊದಲು ರಕ್ತ ಪರೀಕ್ಷೆ ಮಾಡಿಸಿಕೊಂಡು, ಡಯಾಬಿಟಿಸ್ ಇದೆಯೇ ಎಂದು ತಿಳಿದುಕೊಳ್ಳಬೇಕು. ಡಯಾಬಿಟಿಸ್ ಆರಂಭವಾದಾಗಲೇ ಇದು ಪತ್ತೆಯಾದರೆ, ಅದನ್ನು ಗುಣಪಡಿಸುವುದು ಸುಲಭ. ಇಲ್ಲದಿದ್ದರೆ ಡಯಾಬಿಟಿಸ್ ಅನ್ನು ಸಂಪೂರ್ಣವಾಗಿ ಹೋಗಲಾಡಿಸಲು ಸಾಧ್ಯವಿಲ್ಲ. * ತುಂಬಾ ತೂಕ ಇರುವವರು ತೂಕ ಇಳಿಸಿಕೊಳ್ಳಬೇಕು. ಬೊಜ್ಜು ಕಡಿಮೆಯಾದರೆ ಡಯಾಬಿಟಿಸ್ ಬರುವ ಸಾಧ್ಯೆತೆ ಕೂಡ ಕಡಿಮೆಯಾಗುತ್ತದೆ. ಜೀವನಶೈಲಿ - ಆಹಾರ ಸೇವನೆಯಲ್ಲಿ ಬದಲಾವಣೆ ಮತ್ತು ನಿಯಮಿತ ವ್ಯಾಯಾಮ, ಸೊಪ್ಪು-ತರಕಾರಿ, ದವಸ ಧಾನ್ಯದ ಆಹಾರಗಳನ್ನು ಧಾರಾಳವಾಗಿ ಸೇವಿಸಬೇಕು. * ಕುರುಕಲು ತಿಂಡಿಯಿಂದ ದೂರ ಇರಬೇಕು. * ದಿನಕ್ಕೆ ಕನಿಷ್ಠ ಅರ್ಧಗಂಟೆಯಂತೆ ಪ್ರತಿ ದಿನ ಅಥವಾ ವಾರದಲ್ಲಿ 5 ದಿನವಾದರೂ ವ್ಯಾಯಾಮ ಮಾಡಬೇಕು. * ಸಾಧ್ಯವಿರುವಾಗಲೆಲ್ಲಾ ನಡೆಯಬೇಕು. ಲಿಫ್ಟ್ ಬಳಕೆಗೆ ಹೋಗಬಾರದು. * ಮಾನಸಿಕ ಒತ್ತಡ ನಿವಾರಣೆಗಾಗಿ ಯೋಗ, ಪ್ರಾಣಯಾಮ ಅಥವಾ ಧ್ಯಾನ ಮಾಡಬೇಕು. * ಕೆಟ್ಟ ಚಟಗಳಿಂದ ದೂರವಿರಬೇಕು
ಮಧುಮೇಹವು ಇಂದಿನ ದಿನಗಳಲ್ಲಿ ಒಂದು ಸಾಮಾನ್ಯ ಸಮಸ್ಯೆಯಾಗಿದೆ. ಓರ್ವ ವ್ಯಕ್ತಿಯು ತನಗೆ ಮಧುಮೇಹವಿದೆ ಎಂದು ತಿಳಿದ ಕೂಡಲೇ, ಮನಸ್ಸಿನಲ್ಲಿ ಅನೇಕ ಪ್ರಶ್ನೆಗಳು ಕಾಡುತ್ತವೆ, ಆದರೆ ಸೂಕ್ತ ಉತ್ತರಕ್ಕಾಗಿ ಎಲ್ಲಿ ಹುಡುಕಬೇಕಂಬ ಸಂದೇಹವೂ ಉಂಟಾಗುತ್ತದೆ. ಮಧುಮೇಹ ನಿಮ್ಮ ರಕ್ತದ ಗ್ಲೂಕೋಸ್, ಅಥವಾ ಸಕ್ಕರೆ ಮಟ್ಟಗಳು ತುಂಬಾ ಅಧಿಕವಾಗಿರುವ ಒಂದು ಕಾಯಿಲೆ.
ಮಧುಮೇಹ 1 ನೆಯ ವಿಧ
• ಸುಮಾರು 10% ಮಧುಮೇಹಿಗಳಲ್ಲಿ ಈ ವಿಧದ ಮಧುಮೇಹ ಕಂಡುಬರುವುದು.
• ಸಾಮಾನ್ಯವಾಗಿ 30 ವರ್ಷಕ್ಕಿಂತ ಮೊದಲು ಕಂಡುಬರುತ್ತದೆ.
• ಸಾಮಾನ್ಯವಾಗಿ ತೆಳ್ಳಗಿನ ಅಥವಾ ಸಹಜ ತೂಕದ ಜನರಲ್ಲಿ ಕಂಡುಬರುತ್ತದೆ.
ಮಧುಮೇಹ 2 ನೆಯ ವಿಧ
• ಸುಮಾರು 90% ಮಧುಮೇಹಿಗಳಲ್ಲಿ ಈ ವಿಧದ ಮಧುಮೇಹ ಕಂಡುಬರುವುದು.
• ಸಾಮಾನ್ಯವಾಗಿ 40 ವರ್ಷದ ನಂತರ ಕಾಣಿಸಿಕೊಳ್ಳುತ್ತದೆ.
• ಸಾಮಾನ್ಯವಾಗಿ ಅತಿಯಾದ ತೂಕವುಳ್ಳ ಜನರಲ್ಲಿ ಕಂಡುಬರುತ್ತದೆ.
ಗರ್ಭದಾರಣೆಯ ಮಧುಮೇಹ
• ಭಾರತದಲ್ಲಿ 4% to 21% ಗರ್ಭಿಣಿಯರಲ್ಲಿ ಕಂಡುಬರುತ್ತದೆ
• ಪ್ರಸವದ ನಂತರ ಸಾಮಾನ್ಯವಾಗಿ ಸರಿ ಹೋಗುತ್ತದೆ.
• ನಂತರ ಜೀವನದಲ್ಲಿ ಶಾಶ್ವತ ಮಧುಮೇಹ 50% ಮಹಿಳೆಯರಲ್ಲಿ ಕಂಡುಬರಬಹುದು.
ಮಧುಮೇಹದ ಇತರ ಅಪರೂಪದ ವಿಧಗಳಿವೆ.
ಹೊಟ್ಟೆ ಕೆಳಗೆ ಇರುವ ಮೇದೋಜೀರಕ ಗ್ರಂಥಿ ಇನ್ಸುಲಿನ್ ಎಂಬ ಹಾರ್ಮೋನ್ ಉತ್ಪಾದಿಸುತ್ತದೆ. ಈ ಹಾರ್ಮೋನು ಆಹಾರ ಸೇವನೆ ನಂತರ ಅಂಗಾಂಶಗಳಲ್ಲಿ ಸಕ್ಕರೆಯನ್ನು ಸಂಗ್ರಹಿಸಲು ನಿರ್ದೇಶಿಸುವ ಮೂಲಕ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಶರೀರದಲ್ಲಿ ಇನ್ಸುಲಿನ್ ಕೊರತೆ ಅಥವಾ ದೇಹದಲ್ಲಿ ಇನ್ಸುಲಿನ್ ಪ್ರತಿರೋಧಕಕತೆ (ರೆಸಿಸ್ಟನ್ಸ್) ಅಧಿಕವಾದಲ್ಲಿ ಮಧುಮೇಹ ಉಂಟಾಗುತದೆ.
ಮಧುಮೇಹ (ಡಯಾಬಿಟಿಸ್) ಸಾಮಾನ್ಯವಾಗಿ: ದೈಹಿಕ ವ್ಯಾಯಾಮ ಇಲ್ಲದವರಲ್ಲಿ, ಅನಾರೋಗ್ಯಕರ ಆಹಾರ ಪದ್ಧತಿ ಅನುಸರಿಸುವರಲ್ಲಿ, ಅತಿಯಾದ ತೂಕ ಉಳ್ಳವರಲ್ಲಿ, ಗರ್ಭಿಣಿಯಾಗಿದ್ದಾಗ ಮಧುಮೇಹ ಕಂಡುಬಂದ ಮಹಿಳೆಯರಲ್ಲಿ, ಅಧಿಕ ರಕ್ತದೊತ್ತಡ (BP) ಹೊಂದಿರುವ ಸಂಬಂಧಿಕರಿರುವ ಜನರಲ್ಲಿ ಕಂಡುಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಈ ವರ್ಗದ ಜನರು ನಿಯಮಿತವಾಗಿ ರಕ್ತ ಪರೀಕ್ಷೆ ಮಾಡಿಸುವುದು ಸೂಕ್ತ.
ಡಯಾಬಿಟಿಸ್ ಒಂದು ಸಾಮಾನ್ಯ ಸಮಸ್ಯೆಯೇ?
ಹೌದು, ಭಾರತದ ವಯಸ್ಕರಲ್ಲಿ 10 ಜನರಲ್ಲಿ ಒಬ್ಬರು ಮಧುಮೇಹದಿಂದ ಬಳಲುತ್ತಿರಬಹುದು, ಆದರೆ ರೋಗಿಗೆ ಆರಂಭಿಕ ಹಂತಗಳಲ್ಲಿ ಇದು ತಿಳಿದಿರುವುದಿಲ್ಲ.
ಮಧುಮೇಹದ ರೋಗ ಲಕ್ಷಣಗಳೇನು?
• ಪದೇ ಪದೇ ಮೂತ್ರ ವಿಸರ್ಜನೆ.
• ವಿಪರೀತ ಬಾಯಾರಿಕೆ.
• ವಿವರಿಸಲಾಗದ ತೂಕ ನಷ್ಟ.
• ವಿಪರೀತ ಹಸಿವು.
• ದೃಷ್ಟಿ ಮಸುಕಾಗುವಿಕೆ. • ಕೈ ಅಥವಾ ಕಾಲುಗಳ ಅಡಿಗಳಲ್ಲಿ ಜುಮ್ಮೆನಿಸುವಿಕೆ ಅಥವಾ ಮರಗಟ್ಟುವಿಕೆ.
• ಯಾವಗಲೂ ಸುಸ್ತಾಗಿರುವ ಅನುಭವ.
• ಶುಷ್ಕ ಚರ್ಮ ಹಾಗೂ ಚರ್ಮದಲ್ಲಿ ತುರಿಕೆ.
• ಗಾಯಗಳು ಗುಣವಾಗದಿರುವುದು.
• ಈಸ್ಟ್ ಸೋಂಕು.
• ನೆನಪಿಡಿ : ಪ್ರಾಥಮಿಕ ಹಂತಗಳಲ್ಲಿ, ಹಲವಾರು ವರ್ಷ ರೋಗಿಗೆ ಮಧುಮೇಹದ ಯಾವುದೇ ಲಕ್ಷಣಗಳು ಇಲ್ಲದಿರಬಹುದು!
• ಮಧುಮೇಹ ಇದೆಯೇ ಎಂದು ಹೇಗೆ ತಿಳಿಯಬಹುದು?
• ಬೆಳಿಗ್ಗೆ ಯಾವುದೇ ಆಹಾರವನ್ನು ಸೇವಿಸದೇ (ಉಪವಾಸ) ರಕ್ತದಲ್ಲಿನ ಸಕ್ಕರೆಯ ಪರೀಕ್ಷೆ ಎರಡು ಬಾರಿ ಮಾಡಿದಾಗ ಅದು 126mg/dl ಗಿಂತಲೂ ಅಧಿಕವಾಗಿದ್ದಲ್ಲಿ ನಿಮಗೆ ಮಧುಮೇಹ ಇದೆ ಎಂದು ವೈದ್ಯರು ಸೂಚಿಸುವರು. ಹಾಗೆಯೇ ನಿಮ್ಮ ಗ್ಲೈಕೊಸಿಲೇಟೆಡ್ ಹಿಮೊಗ್ಲೊಬಿನ್ (HbA1C) ಮೌಲ್ಯವು > 6.5% ಗಿಂತ ಹೆಚ್ಚಿದ್ದಲ್ಲಿ ಅದು ಮಧುಮೇಹದ ಸಂಕೇತವಾಗಿದೆ.
• ಗ್ಲುಕೋಸ್ ಟಾಲರೆನ್ಸ್ ಪರೀಕ್ಷೆಃ 75 ಗ್ರಾಂ ಗ್ಲುಕೋಸ್ ತೆಗೆದುಕೊಂಡ ಎರಡು ಅವಧಿಗಳ ನಂತರ ರಕ್ತದಲ್ಲಿನ ಸಕ್ಕರೆಯ ಮಾಡಿದಾಗ ಅದು 200mg/dl ಗಿಂತಲೂ ಅಧಿಕವಾಗಿದ್ದಲ್ಲಿ ನಿಮಗೆ ಮಧುಮೇಹ ಇದೆ ಎಂದತರ್ಥ.
ಸಕ್ಕರೆ ಅಥವಾ ಸಿಹಿ ತಿಂಡಿ (ತೂಕವನ್ನು ಹೆಚ್ಚಿಸುವುದಕ್ಕಿಂತ ಹೊರತುಪಡಿಸಿ) ಮಧುಮೇಹವನ್ನು ಉಂಟು ಮಾಡುವುದಿಲ್ಲ. ಮಧುಮೇಹ 1ನೇ ವಿಧ ಅನುವಂಶೀಯ ಮತ್ತು ಅಪರಿಚಿತ ಅಂಶಗಳಿಂದ ಉಂಟಾಗುತ್ತದೆಂದು ತಿಳಿಯಲಾಗಿದೆ. ಸಾಮಾನ್ಯವಾಗಿ ಕಂಡುಬರುವ 2ನೇ ವಿಧದ ಮಧುಮೇಹ ಅನುವಂಶೀಯವಾಗಿ ಮತ್ತು ಜೀವನಶೈಲಿಗಳಿಂದ ಉಂಟಾಗುತ್ತದೆ.
• ಸಾಮನ್ಯವಾಗಿ ಕಂಡುಬರುವ 2ನೇ ವಿಧ ಮಧುಮೇಹಕ್ಕೆ ಯಾವುದೇ ಶಾಷ್ವತವಾದ ಚಿಕಿತ್ಸೆ ಇಲ್ಲ. ಮಧುಮೇಹವನ್ನು ಶಾಷ್ವತವಾಗಿ ಗುಣಪಡಿಸುವ ನಿಟ್ಟಿನಲ್ಲಿ ಸಾಕಸ್ಟು ಸಂಶೋಧನೆ ಪ್ರಗತಿಯಲ್ಲಿದೆ.
• ಮಧುಮೇಹವನ್ನು ಸೂಕ್ತ ಆಹಾರ, ಆರೋಗ್ಯಕರವಾದ ತೂಕ ಕಾಯ್ದುಕೊಳ್ಳುವುದು ಹಾಗೂ ನಿಯಮಿತವಾದ ವ್ಯಾಯಾಮದಿಂದ ಬರದಂತೆ ತಡೆಗಟ್ಟಬಹುದು.
• ಅಂತೆಯೇ ಮಧುಮೇಹವುಳ್ಳವರು ಸೂಕ್ತ ಜೀವನ ಶೈಲಿ ಹಾಗೂ ಸರಿಯಾದ ಚಿಕಿತ್ಸೆಯಿಂದ ಯಾವುದೇ ತೊಡಕುಗಳಿಲ್ಲದ ಆರೋಗ್ಯವಂತ ಜೀವನವನ್ನು ನಡೆಸಬಹುದು.
• ಮಧುಮೇಹದ ಲಕ್ಷಣ*ಪುರುಷರಿಗೆ 90 ಸೆಂ.ಮೀ. ಮತ್ತು ಮಹಿಳೆಯರಿಗೆ 80 ಸೆಂ.ಮೀ. ಸೊಂಟದ ಸುತ್ತಳತೆ ಮೀರಿದರೆ ಮಧುಮೇಹಕ್ಕೆ ಹತ್ತಿರ ಆಗುತ್ತಿದ್ದಾರೆ ಎಂದು ಅರ್ಥ.
• *ಬಗ್ಗಿದರೆ ನಿಮ್ಮ ಪಾದಗಳು ಸ್ಪಷ್ಟವಾಗಿ ಕಾಣಬೇಕು, ಬೊಜ್ಜು ಇರಬಾರದು.
• *ಒಂದು ಅಡ್ಡ ಗೆರೆ ಎಳೆದು ಅದರ ಮಧ್ಯೆಬಿಂದುವನ್ನು ಇರಿಸಿ. ಒಂದು ನಿರ್ದಿಷ್ಟ ಅಂತರದಿಂದ ಅದನ್ನು ಒಂದು ಕಣ್ಣು ಮುಚ್ಚಿ ಇನ್ನೊಂದು ಕಣ್ಣಿನಿಂದ ನೋಡಿ. ಆಗ ಬಿಂದು ಸ್ಪಷ್ಟವಾಗಿ ಗೆರೆಯ ಮಧ್ಯದಲ್ಲೇ ಕಾಣಿಸಬೇಕು. ಈ ಪರೀಕ್ಷೆಯನ್ನು ಎರಡು ಕಣ್ಣಿನಿಂದಲೂ ಮಾಡಿ. ಒಂದು ವೇಳೆ ಬಿಂದು ಗೆರೆ ಮಧ್ಯೆ ಕಾಣದಿದ್ದರೆ ಮಧು¬ಮೇಹದ ಪ್ರಮಾಣವನ್ನು ಪರೀಕ್ಷಿಸಿ¬ಕೊಳ್ಳುವುದು ಒಳಿತು.
• ಬೊಜ್ಜು ತಡೆಯಿರಿ
• *ಆಹಾರದಲ್ಲಿ ಎಣ್ಣೆ ಅಂಶ ಸಮತೋಲನದಿಂದ ಕೂಡಿರಲಿ. ವಿವಿಧ ಬಣ್ಣಗಳ ತರಕಾರಿ ಬಳಕೆ ಸೂಕ್ತ.
• *ಮಧುಮೇಹ- 1ನೇ ಮಾದರಿ ಹೆಚ್ಚಿನ ಸಂದರ್ಭದಲ್ಲಿ ಶೈಶವದಲ್ಲೇ ಇರುತ್ತದೆ. ಆದರೆ ಅದನ್ನು ಸರಿಯಾಗಿ ಪತ್ತೆ ಮಾಡಬೇಕು. ಚಿಕಿತ್ಸೆ ನೀಡಬೇಕು. ಹಸಿವು, ವಿನಾಕಾರಣ ರಚ್ಚೆ ಹಿಡಿಯುವ ಮಕ್ಕಳನ್ನು ತಜ್ಞರಿಂದ ಪರೀಕ್ಷಿಸಿ ಸಕ್ಕರೆ ಕಾಯಿಲೆಯ ಮೊದಲ ಹಂತದ ಬಗ್ಗೆ ನಿಖರವಾಗಿ ತಿಳಿದುಕೊಳ್ಳಿ.
• *ಆಯುರ್ವೇದ, ಅಲೋಪಥಿ, ನೈಸರ್ಗಿಕ... ಯಾವ ವಿಧಾನವಾದರೂ ಸರಿ ಒಂದನ್ನು ಅನುಸರಿಸಿ.
• *ಮಾರುಕಟ್ಟೆಯಲ್ಲಿ ಸಿಗುವ ಆಹಾರ ಪದಾರ್ಥಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಿ, ನಂತರ ಬಳಸಿ.
• *ದಿನಕ್ಕೆ ಆರು ಬಾರಿ ನಿಯಮಿತ ಅವಧಿಯಲ್ಲಿ ಆಹಾರ ಸೇವನೆ ಸೂಕ್ತ.
• *ನಿಮ್ಮ ಆಹಾರದಲ್ಲಿ ಶೇ 20ರಷ್ಟು ಹಣ್ಣು-,ತರಕಾರಿ ಇರಲಿ.
• *ರುಚಿಯಾಗಿದ್ದನ್ನು ತಿನ್ನಿ, ಕಡಿಮೆ ತಿನ್ನಿ.
• ಕೊಲೆಸ್ಟ್ರಾಲ್ ಸಸ್ಯಜನ್ಯ ಪದಾರ್ಥಗಳಲ್ಲಿ ಇರುವುದಿಲ್ಲ. ಉದಾ: ತೆಂಗು
• *ಪ್ರಾಣಿಜನ್ಯ ಪದಾರ್ಥದಲ್ಲಿ ಇರುತ್ತದೆ: ಉದಾ:ಹಾಲು
• *ವ್ಯಾಯಾಮದಿಂದ ಜಿಡ್ಡಿನ ಪದಾರ್ಥದಿಂದ ಶೇಖರವಾಗುವ ಕೊಬ್ಬನ್ನು ತಡೆಯಬಹುದು.
• ಬೊಜ್ಜು ಹೆಚ್ಚಳಕ್ಕೆ ಕಾರಣ
• *ಆಹಾರ ಪದ್ಧತಿಯಲ್ಲಿನ ಏರುಪೇರು, ನಗರೀಕರಣದಿಂದಾಗಿ ಜೀವನ ಕ್ರಮದಲ್ಲಿ ಬದಲಾವಣೆ.
• *ವ್ಯಾಯಾಮದ ಕೊರತೆಯಿಂದ ಶೇ 58, ಧೂಮಪಾನದಿಂದ, ಶೇ 11,ವಾರಕ್ಕೊಮ್ಮೆ ಮದ್ಯ ಸೇವನೆಯಿಂದ ಶೇ 23ರಷ್ಟು ಬೊಜ್ಜು ಬರುತ್ತದೆ.
Dia Areca -Food supplement to control diabetes.
Technology By: University of agriculture Science, Bangalore. Arecanut Research Centre (ARC) , Licensed : Food Safety & Standard Authority of India.
The Indian tribal and hilly people have traditionally developed organic and natural products to manage diabetes and to live healthy and longer. Dia areca is the product of tribal medicinal knowledge and is thoroughly subjected to clinical trials and tests on par with CISM, Govt of India norms. Clinical trials were conducted to test the glycemic response by administering the product to Non-Insulin dependent Diabetic Mellitus patients (NiDDM)
Composition
Clinical Trials
According to the clinical trial, average percentage of control among diabetic people is 71.81 within the age group between 25 to 55. On the other hand, it is 64.58 percent among the category between 65 and 75. Average duration of diabetes history is 9.4 years for all age groups. Whereas, it is 5.3 years among 25 and 55 years age group and 15.5 years among above 55 years age group.
Special Features
Basically it is a food supplement; it increases stemma, helps in getting sound sleep
Generally the chronic diabetes patients manifest comparatively low s*x interest. But, Dia Areca helps in maintaining natural vitality and normal s*x desire proportionate to the age
Commonly observer symptoms like exhaustion, dry skin and premature ageing could be controlled by dia areca
It also controls joint pains and back aches
ಮದುಮೇಹ ನಿಯಂತ್ರಣಕ್ಕೆ ಅಡಿಕೆಯಿ೦ದ ಬೆ೦ಗಳೂರು ಕೃಷಿ ವಿಶ್ವವಿದ್ಯಾಲಯ, ಅರೆಕಾ ನಟ್ ರಿಸರ್ಚ್ ಸೆ೦ಟರ್ ನ ಆವಿಷ್ಕಾರ ಮತ್ತು ತಂತ್ರಜ್ಞಾನದ ಉತ್ಪನ್ನ ಮಾರುಕಟ್ಟೆಯಲ್ಲಿದೆ.ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ(ಭಾರತ ಸರಕಾರ)ದ ಪರವಾನಿಗೆ ಹೂ೦ದಿದೆ ಹಾಗೊ ವೈದ್ಯಕೀಯ ಟ್ರಯಲ್ ನಲ್ಲಿ ೪೫ ದಿನಗಳಲ್ಲಿ ದೇಹದ ಸಕ್ಕರೆ ಪ್ರಮಾಣವನ್ನು ಸಾಮಾನ್ಯ ಮಟ್ಟಕ್ಕೆ ತರಿಸುತ್ತದೆ ಎ೦ದು ಪ್ರಮಾಣೀಕರಿಸಲಾಗಿದೆ(CISM, ರೂಢಿಗಳಿಗೆ ಅನುಗುಣವಾಗಿ). , , RESEARCH AND DEVELOPMENT FOUNDATION(R) ಉತ್ಪನ್ನದ ಬಗ್ಗೆ ಮೆಚ್ಚಿಗೆ ಸೂಚಿಸಿದೆ. ನೀವೂ ರೈತರನ್ನು ಅಡಿಕೆ ಬೆಳೆಗಾರರನ್ನು ಬೆ೦ಬಲಿಸಿ ಮತ್ತು ನಿಮ್ಮ ಗೆಳೆಯರ ಜತೆ ಹ೦ಚಿಕೊಳ್ಳಿ.....
Control your & using areca nut extract
ಹೆಚ್ಚಿನ ವಿವರಗಳಿಗಾಗಿ: WhatsApp/call/sms: 09986186819
Pls follow & "LIKE" fb page.https://www.facebook.com/DiaAreca4diabetes
Share with your friends group for support Agriculture Invention. And support farmer.
Now You can Order DIA Areca On shopclues.com
http://www.shopclues.com/dia-areca-food-supplementary-for-manage-diabetes-65-days-course-500ml-x-4.html