Shree Sangameshwar Clinic, Bilgi

Shree Sangameshwar Clinic, Bilgi Welcome to our Shree Sangameshwar Clinic Bilagi official page dedicated to raising awareness about important health topics.

Join us as we discuss the latest trends in healthcare, share tips for maintaining a healthy lifestyle.

ಸ್ವಾಮಿ ವಿವೇಕಾನಂದರ ಅನುಯಾಯಿಗಳು, ರಾಮಕೃಷ್ಣ ಮಿಷನ್ ಹಿರಿಯ ಮುಖಂಡರಲ್ಲಿ ಒಬ್ಬರು, 1888-89ರ ಅವಧಿಯಲ್ಲಿ ಕೋಲ್ಕತ್ತದಲ್ಲಿ ಆವರಿಸಿದ್ದ ಪ್ಲೇಗ್ ...
06/01/2026

ಸ್ವಾಮಿ ವಿವೇಕಾನಂದರ ಅನುಯಾಯಿಗಳು, ರಾಮಕೃಷ್ಣ ಮಿಷನ್ ಹಿರಿಯ ಮುಖಂಡರಲ್ಲಿ ಒಬ್ಬರು, 1888-89ರ ಅವಧಿಯಲ್ಲಿ ಕೋಲ್ಕತ್ತದಲ್ಲಿ ಆವರಿಸಿದ್ದ ಪ್ಲೇಗ್ ರೋಗಕ್ಕೆ ತುತ್ತಾದವರಿಗೆ ಸಹಾಯಹಸ್ತ ಚಾಚಿದ ಸ್ವಾಮಿ ಸದಾನಂದ ಅವರ ಜನ್ಮದಿನವಾದ ಇಂದು ಅವರಿಗೆ ಅನಂತ ನಮನಗಳು.

Fondly remembering the holiest disciples of Swami Vivekananda, on his birth anniversary and recalling his tireless efforts in spreading the teachings of Shri Ramakrishna Paramahamsa and Swami Vivekananda.

ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕ ಶ್ರೀ ಕಪಿಲ್ ದೇವ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ದೇವರು ನಿಮಗೆ ಆಯುರಾರೋಗ್ಯ  ಕೊಟ್ಟು ಕಾಪಾಡ...
06/01/2026

ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕ ಶ್ರೀ ಕಪಿಲ್ ದೇವ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ದೇವರು ನಿಮಗೆ ಆಯುರಾರೋಗ್ಯ ಕೊಟ್ಟು ಕಾಪಾಡಲಿ.

ಸಾರ್ವಕಾಲಿಕ ಶ್ರೇಷ್ಠ ಆಲ್ರೌಂಡರ್ ರಾಗಿ ಭಾರತದ ಕ್ರಿಕೆಟ್ ತಂಡಕ್ಕೆ ಅವರ ಕೊಡುಗೆ ಅವಿಸ್ಮರಣೀಯ. ಅವರ ನಾಯಕತ್ವದಲ್ಲಿ 1983ರಲ್ಲಿ ಭಾರತದ ಕ್ರಿಕೆಟ್ ತಂಡವು ಮೊದಲ ವಿಶ್ವ ಕಪ್ ಗೆದ್ದು ದೇಶವೇ ಪಡುವಂತೆ ಮಾಡಿದ ಅತ್ಯುತ್ತಮ ಆಟಗಾರ

A very Happy Birthday to Former Captain of Indian Cricket Team Shri. Kapil Dev. Praying God to bless you with good health and keep you protected.

His contribution to the Indian cricket team as the greatest all-rounder of all time is unforgettable. Under his leadership, the Indian cricket team won its first World Cup in 1983 and no other player could have led the country better than him.

ಮನುಕುಲವನ್ನೇ ಬೆಚ್ಚಿಬೀಳಿಸಿದ ಮಹಾಯುದ್ಧದಲ್ಲಿ ಅನಾಥರಾದವರಿಗೆ ಬಲ, ವಿಶ್ವಾಸ ತುಂಬಲು ಇಂದು ವಿಶ್ವಯುದ್ಧದ ಅನಾಥರ ದಿನ ಆಚರಿಸುತ್ತಿದ್ದು, ಅಂದು ...
06/01/2026

ಮನುಕುಲವನ್ನೇ ಬೆಚ್ಚಿಬೀಳಿಸಿದ ಮಹಾಯುದ್ಧದಲ್ಲಿ ಅನಾಥರಾದವರಿಗೆ ಬಲ, ವಿಶ್ವಾಸ ತುಂಬಲು ಇಂದು ವಿಶ್ವಯುದ್ಧದ ಅನಾಥರ ದಿನ ಆಚರಿಸುತ್ತಿದ್ದು, ಅಂದು ಅನಾಥರಾದವರು, ನೊಂದವರ ಪರ ನಿಲ್ಲೋಣ. ಅವರಿಗೆ ಸಾಂತ್ವನ ಹೇಳೋಣ. ಮುಂದೆ ಇಂಥ ದುರಂತ ನಡೆಯದಿರಲಿ ಎಂದು ಪ್ರಾರ್ಥಿಸೋಣ.

Today as we commemorate , let us spread awareness on the needs to the ones orphaned dude to world wars that scarred people across the world.

ಮಿರ್ಜಾ ಇಸ್ಮಾಯಿಲ್ (ಅಕ್ಟೋಬರ್ ೨೪,೧೮೮೩ - ಜನವರಿ ೫, ೧೯೫೯) ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ, ಮೈಸೂರಿನ ದಿವಾನರಾಗಿದ್ದರು. ಕಾಗದದ ಕಾರ್ಖ...
05/01/2026

ಮಿರ್ಜಾ ಇಸ್ಮಾಯಿಲ್ (ಅಕ್ಟೋಬರ್ ೨೪,೧೮೮೩ - ಜನವರಿ ೫, ೧೯೫೯) ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ, ಮೈಸೂರಿನ ದಿವಾನರಾಗಿದ್ದರು. ಕಾಗದದ ಕಾರ್ಖಾನೆ, ಸಕ್ಕರೆ ಕಾರ್ಖಾನೆ, ಮೊದಲಾದ ಕಾರ್ಖಾನೆಗಳನ್ನು ಸ್ಥಾಪಿಸಲು ಕಾರಣಕರ್ತರಾದವರು. ವೃಂದಾವನ ಉದ್ಯಾನವನ್ನು ನಿರ್ಮಿಸಿದವರು ಮಿರ್ಜಾರವರು. ಸಂಸ್ಥಾನದ ಸಮೃದ್ಧಿ ಮತ್ತು ಸೊಬಗುಗಳಿಗಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದರು.
ವಿಶ್ವವೇ ಮೆಚ್ಚುವಂತಹ ಆಡಳಿತವನ್ನು ಮೈಸೂರು ಸಂಸ್ಥಾನದಲ್ಲಿ ತಂದ ಅಭಿವೃದ್ದಿಯ ಹರಿಕಾರ ಹಾಗು ಸಂಸ್ಕೃತ-ಕನ್ನಡ ಭಾಷಾ ಕಲಿಕೆಯನ್ನು ಕಡ್ಡಾಯಗೊಳಿಸಿದ ಮೊದಲ ಆಡಳಿತಗಾರ
"ದಿವಾನ್ ಸರ್.ಮಿರ್ಜಾ ಇಸ್ಮಾಯಿಲ್" ಅವರ ಪುಣ್ಯ ಸ್ಮರಣೆಯಂದು ಗೌರವ ನಮನಗಳು💐

ಧ್ಯಾನ ಮತ್ತು ಅಧ್ಯಾತ್ಮದ ಕುರಿತು ಲಕ್ಷಾಂತರ ಜನರಿಗೆ ಮಾರ್ಗದರ್ಶನ ನೀಡಿದ ಶ್ರೀ ಪರಮಹಂಸ ಯೋಗಾನಂದ ಅವರ ಜನ್ಮದಿನದಂದು ಅವರಿಗೆ ಗೌರವ ನಮನ ಸಲ್ಲಿಸ...
05/01/2026

ಧ್ಯಾನ ಮತ್ತು ಅಧ್ಯಾತ್ಮದ ಕುರಿತು ಲಕ್ಷಾಂತರ ಜನರಿಗೆ ಮಾರ್ಗದರ್ಶನ ನೀಡಿದ ಶ್ರೀ ಪರಮಹಂಸ ಯೋಗಾನಂದ ಅವರ ಜನ್ಮದಿನದಂದು ಅವರಿಗೆ ಗೌರವ ನಮನ ಸಲ್ಲಿಸುತ್ತೇನೆ. ಕ್ರಿಯಾ ಯೋಗಕ್ಕೆ ಅವರು ನೀಡಿದ ಕೊಡುಗೆಗೆ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಅವರನ್ನು ಯೋಗದ ಪಿತಾಮಹ ಎಂದೇ ಕರೆಯುತ್ತಾರೆ.

Fondly remembering the Yogi and the Guru who taught millions the importance of meditation and spirituality, Shri on his birth anniversary. His contributions to Kriya Yoga that credited him with the tag of “The Father of Yoga” in the west is always hailed.

ಪಾತ್ರದ ಪರಕಾಯ ಪ್ರವೇಶಕ್ಕೆ ಹಾಗೂ ಖಳನಾಯಕ ಪಾತ್ರಕ್ಕೆ ದಂತಕಥೆಯಾಗಿದ್ದ ಶ್ರೀ ವಜ್ರಮುನಿ ಅವರ ಪುಣ್ಯಸ್ಮರಣೆಯ ದಿನವಾದ ಇಂದು ಅನಂತ ನಮನಗಳು. ಪಾತ್...
05/01/2026

ಪಾತ್ರದ ಪರಕಾಯ ಪ್ರವೇಶಕ್ಕೆ ಹಾಗೂ ಖಳನಾಯಕ ಪಾತ್ರಕ್ಕೆ ದಂತಕಥೆಯಾಗಿದ್ದ ಶ್ರೀ ವಜ್ರಮುನಿ ಅವರ ಪುಣ್ಯಸ್ಮರಣೆಯ ದಿನವಾದ ಇಂದು ಅನಂತ ನಮನಗಳು. ಪಾತ್ರದಲ್ಲಿ ಭಯಂಕರವಾಗಿ ಕಾಣುತ್ತಿದ್ದ ಅವರು ವೈಯಕ್ತಿಕವಾಗಿ ಮೃದು ಮನಸ್ಸಿನವರಾಗಿದ್ದರು.

https://youtu.be/RfajyKKs05E

ನಿಸರ್ಗದ ಸಮತೋಲನಕ್ಕೆ ಪಕ್ಷಿಗಳು ಹಾಗೂ ಪ್ರಾಣಿಗಳ ಪಾತ್ರ ನಿರ್ಣಾಯಕವಾಗಿದ್ದು, ರಾಷ್ಟೀಯ ಪಕ್ಷಿಗಳ ದಿನವಾದ ಇಂದು ಪಕ್ಷಿಗಳ ರಕ್ಷಣೆಯ ಪಣ ತೊಡೋಣ, ...
05/01/2026

ನಿಸರ್ಗದ ಸಮತೋಲನಕ್ಕೆ ಪಕ್ಷಿಗಳು ಹಾಗೂ ಪ್ರಾಣಿಗಳ ಪಾತ್ರ ನಿರ್ಣಾಯಕವಾಗಿದ್ದು, ರಾಷ್ಟೀಯ ಪಕ್ಷಿಗಳ ದಿನವಾದ ಇಂದು ಪಕ್ಷಿಗಳ ರಕ್ಷಣೆಯ ಪಣ ತೊಡೋಣ, ಜಾಗೃತಿ ಮೂಡಿಸೋಣ.

On this day let us create awareness about the hardships and the plight of the avian animals and build a healthier and a more sustainable environment for them.

https://youtu.be/taEkXcGXmeU
https://youtu.be/rlvZT5ql1hc

ಲೇಖಕಿ, ಕಾದಂಬರಿಗಾರ್ತಿ ಎಂ. ಕೆ. ಇಂದಿರಾ ಅವರ ಜನ್ಮದಿನವಾದ ಇಂದು ಅವರಿಗೆ ಗೌರವ ನಮನಗಳು. ಸ್ತ್ರೀ ಸಂವೇದನೆ ಜತೆಗೆ ಸಾಮಾಜಿಕ ಕಳಕಳಿಯುಳ್ಳ ಅವರ ...
05/01/2026

ಲೇಖಕಿ, ಕಾದಂಬರಿಗಾರ್ತಿ ಎಂ. ಕೆ. ಇಂದಿರಾ ಅವರ ಜನ್ಮದಿನವಾದ ಇಂದು ಅವರಿಗೆ ಗೌರವ ನಮನಗಳು. ಸ್ತ್ರೀ ಸಂವೇದನೆ ಜತೆಗೆ ಸಾಮಾಜಿಕ ಕಳಕಳಿಯುಳ್ಳ ಅವರ ಕಾದಂಬರಿಗಳು ಸಿನೆಮಾ ಆಗಿ ಪರದೆ ಮೇಲೂ ಜನಮನ ಸೆಳೆದವು ಎಂಬುದು ಅವರ ಹೆಗ್ಗಳಿಕೆ.

ಇಂದು ವಿಶ್ವ ಬ್ರೈಲ್ ದಿನದೃಷ್ಟಿ ವಿಶೇಷ ಚೇತನರು ಓದಲು, ಬರೆಯಲು ಬ್ರೈಲ್ ಲಿಪಿಯನ್ನು ಆವಿಷ್ಕರಿಸಿದ ಲೂಯಿಸ್ ಬ್ರೈಲ್ ಅವರ ಜನ್ಮದಿನವನ್ನು ವಿಶ್ವ ...
04/01/2026

ಇಂದು ವಿಶ್ವ ಬ್ರೈಲ್ ದಿನ

ದೃಷ್ಟಿ ವಿಶೇಷ ಚೇತನರು ಓದಲು, ಬರೆಯಲು ಬ್ರೈಲ್ ಲಿಪಿಯನ್ನು ಆವಿಷ್ಕರಿಸಿದ ಲೂಯಿಸ್ ಬ್ರೈಲ್ ಅವರ ಜನ್ಮದಿನವನ್ನು ವಿಶ್ವ ಬ್ರೈಲ್ ದಿನವನ್ನಾಗಿ ಆಚರಿಸಲಾಗುತ್ತಿದೆ.

ಅಂಧರಿಗೆ ಅಕ್ಷರ ಬೆಳಕಿನ ಹಾದಿ ತೋರಿದ ಲೂಯಿಸ್ ಬ್ರೈಲ್ ಅವರಿಗೆ ಗೌರವ ಪೂರ್ಣ ನಮನಗಳು🙏🏻



The French educator “Louis Braille” invented the Braille System for blinds and visually impaired people and in 2019, United Nations decided to celebrate the World Braille Day on the birth
anniversary of the inventor.
World Braille Day is an international day on 4 January and celebrates awareness of the importance of braille as a means of communication in the full realization of the human rights for blind and visually impaired people.

🌸 ಅನಾಥರ ತಾಯಿ ಎಂದು ಹೆಸರಾಗಿದ್ದ ದಿವಂಗತ ಸಿಂಧುತಾಯಿ ಸಪ್ಕಾಲ್ ಅವರ ಪುಣ್ಯ ಸ್ಮರಣೆಯಂದು ಗೌರವ ನಮನಗಳು. ಮಹಾರಾಷ್ಟ್ರದ ವಾರ್ಧಾದಲ್ಲಿ ಜನಿಸಿದ ಅ...
04/01/2026

🌸 ಅನಾಥರ ತಾಯಿ ಎಂದು ಹೆಸರಾಗಿದ್ದ ದಿವಂಗತ ಸಿಂಧುತಾಯಿ ಸಪ್ಕಾಲ್ ಅವರ ಪುಣ್ಯ ಸ್ಮರಣೆಯಂದು ಗೌರವ ನಮನಗಳು. ಮಹಾರಾಷ್ಟ್ರದ ವಾರ್ಧಾದಲ್ಲಿ ಜನಿಸಿದ ಅವರು ಕಠಿಣ ಪರಿಸ್ಥಿತಿಗಳಲ್ಲೂ ಅನಾಥ ಮಕ್ಕಳಿಗೆ ಅಮ್ಮನಾದರು. 1500 ಕ್ಕೂ ಹೆಚ್ಚು ಮಕ್ಕಳನ್ನು ದತ್ತು ಪಡೆದು ಅವರ ಶಿಕ್ಷಣ–ಭವಿಷ್ಯಕ್ಕಾಗಿ ಜೀವನವನ್ನೇ ಅರ್ಪಿಸಿದರು. 84 ಆದಿವಾಸಿ ಹಳ್ಳಿಗಳ ಪುನರ್ವಸತಿಗೂ ಹೋರಾಡಿದರು. ಅವರ ನಿಸ್ವಾರ್ಥ ಸೇವೆಗೆ ಪದ್ಮಶ್ರೀ ಸೇರಿದಂತೆ ಅನೇಕ ರಾಷ್ಟ್ರೀಯ–ಅಂತರರಾಷ್ಟ್ರೀಯ ಪುರಸ್ಕಾರಗಳು ದೊರೆತಿವೆ. 04-01-2022 ರಂದು ‘ಮಾಯ್’ ನಮ್ಮನ್ನಗಲಿದರು. 🙏💐

#ಸಿಂಧುತಾಯಿಸಪ್ಕಾಲ್

ದೇಶದ ಖ್ಯಾತ ವ್ಯೋಮ ವಿಜ್ಞಾನಿ, ಬಾಹ್ಯಾಕಾಶ ಕ್ಷೇತ್ರದಲ್ಲಿ ಅನುಪಮ ಸಾಧನೆಗೈದ, ಇಸ್ರೋ ಅಧ್ಯಕ್ಷರಾಗಿದ್ದ, ಪದ್ಮವಿಭೂಷಣ ಪುರಸ್ಕೃತರಾದ ಶ್ರೀ ಸತೀಶ...
03/01/2026

ದೇಶದ ಖ್ಯಾತ ವ್ಯೋಮ ವಿಜ್ಞಾನಿ, ಬಾಹ್ಯಾಕಾಶ ಕ್ಷೇತ್ರದಲ್ಲಿ ಅನುಪಮ ಸಾಧನೆಗೈದ, ಇಸ್ರೋ ಅಧ್ಯಕ್ಷರಾಗಿದ್ದ, ಪದ್ಮವಿಭೂಷಣ ಪುರಸ್ಕೃತರಾದ ಶ್ರೀ ಸತೀಶ್ ಧವನ್ ಅವರ ಪುಣ್ಯಸ್ಮರಣೆಯ ದಿನವಾದ ಇಂದು ಅವರ ಸಾಧನೆ ನೆನೆಯೋಣ. ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಉಡ್ಡಯನ ಕೇಂದ್ರಕ್ಕೆ ಇವರ ಹೆಸರು ಇಟ್ಟಿದ್ದು ಸಾಧನೆಗೆ ಸಂದ ಗೌರವ.

Remembering the pioneer of Indian space journey, an aerospace engineer and a mathematician of impeccable caliber, Shri ji on his death anniversary. India will forever rejoice it’s first satellite under his leadership.

ಮಹಿಳೆಯರಿಗೆ ಶಿಕ್ಷಣ ನೀಡುವ ಮೂಲಕ ಹೊಸ ಮನ್ವಂತರಕ್ಕೆ ನಾಂದಿ ಹಾಡಿದ ದೇಶದ ಮೊದಲ ಶಿಕ್ಷಕಿ , ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಅವರಿಗೆ ಜನ್ಮದಿನದ...
03/01/2026

ಮಹಿಳೆಯರಿಗೆ ಶಿಕ್ಷಣ ನೀಡುವ ಮೂಲಕ ಹೊಸ ಮನ್ವಂತರಕ್ಕೆ ನಾಂದಿ ಹಾಡಿದ ದೇಶದ ಮೊದಲ ಶಿಕ್ಷಕಿ , ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಅವರಿಗೆ ಜನ್ಮದಿನದ ನಮನಗಳು.
Humble tributes to the social reformer and an epitome of women empowerment Savitribai Phule Ji on her Jayanti.

Her contributions to the upliftment of women will be remembered forever.

Address

Bilgi

Opening Hours

Monday 10am - 1:30pm
5pm - 8:30pm
Tuesday 10am - 1:30pm
5pm - 8:30pm
Wednesday 10am - 1:30pm
5pm - 8:30pm
Thursday 10am - 1:30pm
5pm - 8:30pm
Friday 10am - 1:30pm
5pm - 8:30pm
Saturday 10am - 1:30pm
5pm - 8:30pm
Sunday 10am - 1:30pm
5pm - 8:30pm

Telephone

+919448959659

Alerts

Be the first to know and let us send you an email when Shree Sangameshwar Clinic, Bilgi posts news and promotions. Your email address will not be used for any other purpose, and you can unsubscribe at any time.

Contact The Practice

Send a message to Shree Sangameshwar Clinic, Bilgi:

Share

Share on Facebook Share on Twitter Share on LinkedIn
Share on Pinterest Share on Reddit Share via Email
Share on WhatsApp Share on Instagram Share on Telegram