18/10/2017
National Ayurveda Day and Dhanwantari Jayanti at Swasthya Ayurveda
ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಹಾಗೂ ಧನ್ವಂತರಿ ಜಯಂತಿ ಕನ್ನಡ ಪೂಜೆಯೊಂದಿಗೆ ಹಿರೇಮಗಳೂರು ಕಣ್ಣನ್ರವರಿಂದ.
ಚಿಕ್ಕಮಗಳೂರಿನ ಕೋಟೆ ಸಮೀಪದಲ್ಲಿರುವ ಸ್ವಾಸ್ಥ್ಯ ಆಯುರ್ವೇದ ಆಸ್ಪತ್ರೆಯಲ್ಲಿ ಹಾಗೂ ಆರೋಗ್ಯ ಭಾರತಿ ಸಹಯೂಗದೂಂದಿಗೆ ಆಸ್ಪತ್ರೆಯಲ್ಲಿ ಲವಲವಿಕೆಯ ವಾತಾವರಣ. ಆಸ್ಪತ್ರೆಯ ಬಾಗಿಲಿಗೂ ಹಸಿರು ತೋರಣ, ಬಂದ ಆಮಂತ್ರಿತರಿಗೆಲ್ಲ ಸಿಹಿ ಹೋರಣ ವಿತರಣೆ, ಮಾತುಕಥೆ, ಆರೋಗ್ಯ ತಪಾಸಣೆ, ಇಡೀ ಆಸ್ಪತ್ರೆಯ ಅಂಗಣದಲ್ಲಿ ಲವಲವಿಕೆಯನ್ನೆ ತಂದಿರಿಸಿತ್ತು, ಭಾಗವಹಿಸಿದವರ ಮುಖದಲ್ಲಿ ಆರೋಗ್ಯದ ನಗುವು ತುಳುಕುತ್ತಿತ್ತು.
ಆಸ್ಪತ್ರೆಯ ಒಳಾವರಣದಲ್ಲಿ ಆಮಂತ್ರಿತರು ಒಳಹೊಕ್ಕುತ್ತಿದ್ದಂತೆ ಭಗವಾನ್ ಧನ್ವಂತರಿಯ ದರ್ಶನ ಎಲ್ಲರಿಗೂ ಪುಣ್ಯಪ್ರಧವೆನಿಸಿತ್ತು. ಸರಳವಾದ ಅಲಂಕಾರದಿಂದ ಶೋಭಿತಗೊಂಡ ಧನ್ವಂತರಿ ಭಗವಂತನ ಮೂರ್ತಿರ್ಶನ ಮತ್ತೆ ಮತ್ತೆ ನೋಡುಗನ ಮನಸ್ಸನ್ನು ಆಕರ್ಷಿಸುತ್ತಿತ್ತು. ಆಡಂಬರಕ್ಕೆ ಎಡೆಯಿಲ್ಲದ ಆಚರಣೆಯ ಕಾರ್ಯಕ್ರಮ ಇಲ್ಲಿ ಸದ್ದಿಲ್ಲದೆ ಸಾಗಿತ್ತು. ಸಡಗರ ಸಂಭ್ರಮದಿಂದ ಕೂಡಿದ್ದ ಈ ಕಾರ್ಯಕ್ರಮ ಭಾಗವಸಿದವರಿಗೆ ಲವಲವಿಕೆಯನ್ನೆ ತುಂಬಿ ತುಳುಕಿಸಿತ್ತು, ಕಾರಣ ಭಾಷಣಗಳ ಭರಾಟೆ, ವಿಚಾರಸಂಕೀರ್ಣಗಳ ಕೊರೆತ ಇಲ್ಲಿರಲಿಲ್ಲ. ಇದಕ್ಕೆ ಬದಲಾಗಿ ಎಲ್ಲರಿಗೂ ಅರ್ಥವಾಗುವ ಎಲ್ಲರ ಮನಸ್ಸಿಗೂ ಮನಮುಟ್ಟುವ ಸರಳ ಸುಂದರ ಕನ್ನಡ ಭಾಷೆಯ ಪೂಜೆ ಧನ್ವಂತರಿ ದೇವನಿಗೆ ಹಿರೇಮಗಳೂರು ಕಣ್ಣನ್ರವರಿಂದ ಸಮರ್ಪಿತವಾಗುತ್ತಿದ್ದು, ಎಲ್ಲರ ಹ್ರುದಯಕ್ಕೆ ತ್ರುಪ್ತಿ ತಂದಿತ್ತು.
ಪೂಜೆ ಪುನಸ್ಕಾರ ನಡೆದ ನಂತರದಲ್ಲಿ ಸಭಾಕಾರ್ಯಕ್ರಮವು ಭಾಷಣಗಳ ಭರಾಟೆಯಿಲ್ಲದೆ ನಡೆಯಿತು. ನಾದ ಚೈತನ್ಯ ಸಂಸ್ಥೆಯ ಶ್ರೀಮತಿ ರೇಖಾ ಪ್ರೇಮ್ ಕುಮಾರ್ ಅವರಿಂದ ಸುಶ್ರಾವ್ಯವಾದ ಪ್ರಾರ್ಥನೆ ಎಲ್ಲರ ಕಿವಿಗೆ ಸುಧೆಯಾಗಿ ಮನಕೆ ಸಂತರ್ಪಣೆಯಾಗಿಸಿತ್ತು.ವೈದ್ಯ ಶ್ರೀ ವಿಕ್ರಮ ಚಿಕ್ಕ ಚುಕ್ಕ ಮಾತುಗಳಿಂದ ಸ್ವಾಗತಿಸಿದರು, ವೈದ್ಯ ಶ್ರೀ ವಿರೂಪಾಕ್ಷ ನಲ್ನುಡಿಗಳನ್ನು ಬಿತ್ತಿದರು. ಇದೇ ಸಂದರ್ಭದಲ್ಲಿ ಆಗಮಿಸಿದ ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ರವರು ಹಾಸ್ಯ ಲೇಪಿತ ಮಾತಿನೂಂದಿಗೆ ಆಹಾರ, ಆರೂಗ್ಯ, ಆಧ್ಯಾತ್ಮ ವಿಷಯ ಕುರಿತು ಮಾತನಾಡಿದರು, ”ನಮ್ಮ ಆರೋಗ್ಯ ನಮ್ಮ ಕೈಯಲ್ಲಿ’’, ಆಯುರ್ವೇದದ ಸಿದ್ದಾಂತ ವಾದ “ಹಿತ ಭುಕ್-ಮಿತಭುಕ್-ಋತುಭುಕ್, ಸತ್ಸಂಗ, ಸದಾಚಾರ, ಸರಿಯಾದ ಜೀವನ ಶೈಲಿಯಿಂದಲೇ” ನಮ್ಮ ಆರೂಗ್ಯ ಎನ್ನುವುದನ್ನು ಮನದಟ್ಟು ಮಾಡಿದರು . ವೈದ್ಯ ಶ್ರೀ ರಾಮಾನುಜ ಕೆ ಕೆ ಎಲ್ಲರಿಗೂ ಕ್ರುತಙತೆಯನ್ನು ಕ್ರುತಙಿಸಿದರು. ಸಿಹಿಮಾತು, ಸಿಹಿ ಭೊಜನದೊಂದಿಗೆ ಸಮಾರಂಭ ಮುಕ್ತಾಯವಾಯಿತು.
ಅರ್ಥಪೂರ್ಣ ಧನ್ವಂತರಿ ಭಗವಂತನ ಆಚರಣೆ ಮುದಕೊಟ್ಟಿತ್ತು.