14/02/2026
ಗ್ರಾಮ ಪಂಚಾಯಿತಿ ಶಿವನಿ ಅವರ ಆಯೋಜನೆಯಲ್ಲಿ, ಸರ್ಕಾರಿ ಕೆಪಿಎಸ್ ಶಾಲೆ ಶಿವನಿ ಯ ಹದಿಹರೆಯದ ಹೆಣ್ಣು ಮಕ್ಕಳಿಗೆ ಹಿಮೋಗ್ಲೋಬಿನ್ (HB) ಪರೀಕ್ಷೆ ಕಾರ್ಯಕ್ರಮವನ್ನು AAK ಶಿವನಿ – B ಶಿವನಿ ಪಿಎಚ್‌ಸಿ ವತಿಯಿಂದ ಸಮುದಾಯ ಆರೋಗ್ಯಾಧಿಕಾರಿ ಅವರ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆಸಲಾಯಿತು.
ಈ ಸಂದರ್ಭದಲ್ಲಿ ಬಾಲಕಿಯರಲ್ಲಿನ ರಕ್ತಹೀನತೆ (ಅನೀಮಿಯಾ) ಪತ್ತೆಹಚ್ಚುವ ಜೊತೆಗೆ, ಪೋಷಣೆಯ ಮಹತ್ವ ಮತ್ತು ವೈಯಕ್ತಿಕ ಸ್ವಚ್ಛತೆ ಕುರಿತು ವಿಶೇಷ ಜಾಗೃತಿ ಮೂಡಿಸಲಾಯಿತು. ಸಮತೋಲನ ಆಹಾರ ಸೇವನೆ, ಹಸಿರು ಸೊಪ್ಪುಗಳು, ಬೇಳೆಕಾಳುಗಳು, ಮೊಟ್ಟೆ, ಹಾಲು, ಕಬ್ಬಿಣಾಂಶಯುಕ್ತ ಆಹಾರಗಳ ಅಗತ್ಯತೆಯನ್ನು ವಿವರಿಸಲಾಯಿತು. ಐರನ್ ಮತ್ತು ಫೋಲಿಕ್ ಆಸಿಡ್ ಮಾತ್ರೆಗಳ ಉಪಯೋಗ ಹಾಗೂ ನಿಯಮಿತ ಆರೋಗ್ಯ ತಪಾಸಣೆಯ ಮಹತ್ವ ತಿಳಿಸಲಾಯಿತು.
ಹೆಣ್ಣು ಮಕ್ಕಳ ವೈಯಕ್ತಿಕ ಸ್ವಚ್ಛತೆ, ಕೈತೊಳೆಯುವ ಸರಿಯಾದ ವಿಧಾನ, ಮಾಸಿಕ ಧರ್ಮದ ಸಮಯದಲ್ಲಿ ಸ್ವಚ್ಛತೆ ಕಾಪಾಡುವ ವಿಧಾನ, ಶುದ್ಧ ನೀರಿನ ಬಳಕೆ ಹಾಗೂ ಪರಿಸರ ಸ್ವಚ್ಛತೆಯ ಕುರಿತು ಮಾರ್ಗದರ್ಶನ ನೀಡಲಾಯಿತು. ಆರೋಗ್ಯಕರ ಜೀವನಶೈಲಿಯ ಮೂಲಕ ಭವಿಷ್ಯದಲ್ಲಿ ಉತ್ತಮ ಆರೋಗ್ಯ ಸಾಧಿಸಬಹುದು ಎಂಬ ಸಂದೇಶ ನೀಡಲಾಯಿತು.
ಶಾಲಾ ಶಿಕ್ಷಕರು, ಆರೋಗ್ಯ ಸಿಬ್ಬಂದಿ ಮತ್ತು ಗ್ರಾಮ ಪಂಚಾಯಿತಿ ಸದಸ್ಯರ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.