11/06/2023
ಡಾ. ಹೆಚ್. ಎಲ್. ಸುಬ್ಬರಾವ್ ನೇತ್ರತ್ವದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರ
ದಿನಾಂಕ 5-03-2023ರ ಭಾನುವಾರದಂದು ಬ್ರಾಹ್ಮಣ ಸಮಾಜ (ರಿ.,), ಶ್ರೀ ಶಂಕರ ಸೇವಾಸಂಘ (ರಿ.,) ದಾವಣಗೆರೆ ಮತ್ತು ಸಿಟಿ ಸೆಂಟ್ರಲ್ ಹಾಸ್ಪಿಟಲ್ ಪ್ರೈ. ಲಿ., ದಾವಣಗೆರೆ ಹಾಗೂ ಇತರೆ ನುರಿತ ತಜ್ಞ ವೈದ್ಯರಿಂದ ಡಾ. ಹೆಚ್. ಎಲ್. ಸುಬ್ಬರಾವ್ ಇವರ ನೇತೃತ್ವದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಬೆಳಿಗ್ಗೆ 8.30ರಿಂದ ಮಧ್ಯಾಹ್ನ 2.30ರ ವರೆಗೆ ನಡೆಸಲಾಯಿತು. ಸುಮಾರು 350 ರೋಗಿಗಳು ಇದರ ಪ್ರಯೋಜನವನ್ನು ಪಡೆದರು. 60 ಜನರಿಗೆ ಇಕೋ ಪರೀಕ್ಷೆ, 125ಜನರಿಗೆ ಇಸಿಜಿ ಪರೀಕ್ಷೆ, 250ಜನರಿಗೆ ರಕ್ತ ಪರೀಕ್ಷೆ, 60 ಜನರಿಗೆ ಕಣ್ಣಿನ ಪರೀಕ್ಷೆ ನಡೆಸಲಾಯಿತು ಹಾಗೂ 35 ಜನರಿಗೆ ಉಚಿತವಾಗಿ ಕನ್ನಡಕಗಳನ್ನು ವಿತರಿಸಲಾಯಿತು. ತಜ್ಞ ವೈದ್ಯರುಗಳಾದ ಡಾ. ಹೆಚ್. ಎಲ್. ಸುಬ್ಬರಾವ್, ಡಾ. ವೆಂಕಟೇಶ್ ಬಿ. ಪಿ., ಡಾ. ರವೀಂದ್ರ ಆರ್, ಡಾ. ಮುರಳಿ, ಡಾ. ಹೆಚ್. ಬಿ. ಶಿವಕುಮಾರ್, ಡಾ. ನಿತೀಶ್ ಕೊಟ್ರಪ್ಪ, ಡಾ.ಎಂ.ಸಿ. ಶಶಿಕಾಂತ್, ಡಾ. ರೂಪಶ್ರೀ ಶಶಿಕಾಂತ್, ಡಾ. ರಶ್ಮಿ ಹೆಗಡೆ, ಡಾ. ಸುರೇಶ್ ಬಾಬು, ಡಾ. ಹರ್ಷ ಕುಲಕರ್ಣಿ, ಡಾ. ವೆಂಕಟರಾಮ್ ಕಟ್ಟಿ ಮುಂತಾದವರು ಭಾಗವಹಿಸಿ ಶಿಬಿರದ ಯಶಸ್ಸಿಗೆ ಕಾರಣರಾದರು. ಅಪೋಲೋ ಡಯಾಗ್ನೋಸ್ಟಿಕ್ಸ್ ನ ಚೇತನ್ ಕುಮಾರ್ ಮತ್ತು ತಂಡ ವಿವಿಧ ರಕ್ತ ಪರೀಕ್ಷೆಗಳನ್ನು ಉಚಿತವಾಗಿ ನಡೆಸಿಕೊಟ್ಟರು.
ಸಿಟಿ ಸೆಂಟ್ರಲ್ ಆಸ್ಪತ್ರೆ ಯ ಔಷಧಾಲಯದವರು ಎ.ಕೆ. ಫಾರ್ಮಾದವರ ಸಹಯೋಗದೊಂದಿಗೆ ಸಿಎ ಶ್ರೀ ಗಿರೀಶ್ ನಾಡಿಗ್ ರವರ ಸಹಕಾರದಿಂದ ಔಷಧಗಳನ್ನು ಉಚಿತವಾಗಿ ವಿತರಿಸಿದರು.
ಸಿಟಿ ಸೆಂಟ್ರಲ್ ಆಸ್ಪತ್ರೆಯ ಸಿಬ್ಬಂದಿಗಳು, ಬ್ರಾಹ್ಮಣ ಸಮಾಜ ಹಾಗೂ ಶ್ರೀ ಶಂಕರ ಸೇವಾ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸ್ವಯಂ ಸೇವಕರು ಪೂರ್ಣ ಶಿಬಿರದ ಯಶಸ್ಸಿಗೆ ಸಮಯೋಚಿತ ಸೇವೆ ಒದಗಿಸಿದರು. ಬ್ರಾಹ್ಮಣ ಸಂಘದ ಡಾ. ಶಶಿಕಾಂತ್, ಶ್ರೀ ಅಚ್ಯುತ್ ಹಾಗೂ ಶ್ರೀ ಬಾಲಕೃಷ್ಣ ವೈದ್ಯ ಮತ್ತು ತಂಡದವರ ನಗುಮೊಗದ ಸೇವೆ ಪ್ರಶಂಸನೀಯ. ಒಟ್ಟಾರೆ ಎಲ್ಲರ ಸಹಕಾರದಿಂದ ಈ ಶಿಬಿರವು ಯಶಸ್ವಿಯಾಗಿ ನೆರವೇರಿದ್ದು ಡಾ. ಸುಬ್ಬರಾವ್ ರವರು ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸಿದರು.