Dr. Amaresh Patil

Dr. Amaresh Patil ಮಕ್ಕಳ ತಜ್ಞರು ಹಾಗೂ ಕಾರ್ಯಕಾರಿಣಿ ಸದಸ್ಯರು, ಐಎಪಿ ಕರ್ನಾಟಕ – ಗಂಗಾವತಿ
Pediatrician & Executive Committee Member, IAP Karnataka – Gangavati.

Ability to work and interact effectively with multidisciplinary team

31/12/2025

ಸಮಸ್ತ ನಾಡಿನ‌ ಜನತೆಗೆ ಇಂಗ್ಲಿಷ್ ಕ್ಯಾಲಂಡರಿನ 2026 ರ ಹೊಸ ವರ್ಷದ ಹಾರ್ದಿಕ‌ ಶುಭಾಶಯಗಳು.

28/12/2025

ನಿನ್ನೆ ನಗರದಲ್ಲಿ ಯಶಸ್ವಿಯಾಗಿ ಜರುಗಿದ ನಿರ್ಮಲ ತುಂಗಭದ್ರಾ ಅಭಿಯಾನ, ಸಮಾಜದ ಗಣ್ಯಮಾನ್ಯರು, ಹಿರಿಯರು, ನಾಗರಿಕರು, ರಾಜಕೀಯ ದುರೀಣರು, ವಿದ್ಯಾರ್ಥಿಗಳು ಒಕ್ಕೊರಳಿನಿಂದ ಸ್ವಚ್ಚತೆ ಕಾಪಾಡುವ ಕುರಿತು ಪ್ರತಿಜ್ಞೆ ಸ್ವೀಕರಿಸಿದರು.

ಅಭಿಯಾನದಲ್ಲಿ ಪರೋಕ್ಷವಾಗಿ ಹಾಗೂ ಮಾಧ್ಯಮ, ಸಾಮಾಜಿಕ ಜಾಲತಾಣದ ಮೂಲಕ ವಿಕ್ಷೀಸಿದ ನಗರದ ಬಂಧುಗಳು ತಾವೂ ಸಹ ಪ್ರತಿಜ್ಞೆಯನ್ನ ಮನದಟ್ಟು ಮಾಡಿಕೊಳ್ಳುವ ಮೂಲಕ ಪರಿಸರ ಸಂರಕ್ಷಣೆಯ ಜೊತೆಗೆ ನಾಡು ನುಡಿ ರಕ್ಷಣೆಗೆ ಕೈಜೋಡಿಸಲು ಮನವಿ.

ನೀರನ್ನ ಮಿತವಾಗಿ ಬಳಸೋಣ ನಮ್ಮ‌ ತುಂಗಭದ್ರೆಯನ್ನ ಸಂರಕ್ಷಿಸೋಣ ಧನ್ಯವಾದಗಳು.

#ನಿರ್ಮಲತುಂಗಭದ್ರಾಅಭಿಯಾನ

ಇಂದು ನಿರ್ಮಲ ತುಂಗಭದ್ರಾ ಅಭಿಯಾನ ಗಂಗಾವತಿ ನಗರದಲ್ಲಿ ಯಶಸ್ವಿಯಾಗಿ ಜರುಗಿತು.ದೇಶದ ಅನೇಕ ಭಾಗದಿಂದ ನೀರಾವರಿ ತಜ್ಞರು, ಪರಿಸರ ತಜ್ಞರು, ಜನಪ್ರತಿ...
27/12/2025

ಇಂದು ನಿರ್ಮಲ ತುಂಗಭದ್ರಾ ಅಭಿಯಾನ ಗಂಗಾವತಿ ನಗರದಲ್ಲಿ ಯಶಸ್ವಿಯಾಗಿ ಜರುಗಿತು.

ದೇಶದ ಅನೇಕ ಭಾಗದಿಂದ ನೀರಾವರಿ ತಜ್ಞರು, ಪರಿಸರ ತಜ್ಞರು, ಜನಪ್ರತಿನಿಧಿಗಳು, ಕುಲಪತಿಗಳು, ರಾಜಕಾರಣಿಗಳು, ಸಮಾಜ ಸೇವಕರು, ಕಾಲೇಜು ವಿದ್ಯಾರ್ಥಿ ವಿದ್ಯಾರ್ಥಿನಿಯರು, ಸೇರಿದಂತೆ ವಿಶೇಷ ವ್ಯಕ್ತಿಗಳು ಭಾಗವಹಿಸಿದ್ದರು.

ನಗರದ ಶ್ರೀ ಚನ್ನಬಸವ ತಾತನವರ ಮಠದಲ್ಲಿ ನೈರ್ಮಲ್ಯ ಕಾಪಾಡುವುದಾಗಿ ಪ್ರತಿಯೊಬ್ಬರೂ ಪ್ರತಿಜ್ಞೆ ಮಾಡುವ ಮೂಲಕ ಅಭಿಯಾನದ ಯಶಸ್ವಿಗೆ ಕಾರಣರಾದರು

ಬನ್ನಿ ಪರಿಸರ ಜಾಗೃತಿ, ಜಲ ಜಾಗೃತಿ, ಜನ ಜಾಗೃತಿ ಮೂಡಿಸೋಣ ನಮ್ಮ ತುಂಗಭದ್ರೆಯನ್ನ ಮಲಿನ ಮುಕ್ತಗೊಳಿಸೋಣ ನೀರನ್ನ ಮಿತವಾಗಿ ಬಳಸೋಣ‌ ಧನ್ಯವಾದಗಳು.

26/12/2025

ರಾಷ್ಟ್ರೀಯ ಸ್ವಯಂ ಸೇವಕ ಸಂಘದ " ಸಂಘ ಶತಬ್ದಿಯ " ಅಂಗವಾಗಿ, ನಿನ್ನೆ ನಗರದ ಶ್ರೀ ಚನ್ನಬಸವ ಕಲಾ ಮಂದಿರದಲ್ಲಿ ಆಯೋಜಿಸಲಾಗಿದ್ದ ಹಿಂದು ಸಮಾವೇಶಗಳ ಸಂಚಾಲನ ಸಮಿತಿಗಳ ಘೋಷಣ ಕಾರ್ಯಕ್ರಮದಲ್ಲಿ , ಹಿಂದು ಸಮಾವೇಶಗಳ ತಾಲೂಕ ಅಧ್ಯಕ್ಷನಾಗಿ, ಸಂಘದ ಹಿರಿಯರೊಂದಿಗೆ ಭಾಗವಹಿಸಿದ ಕ್ಷಣಗಳು...

ಸಮಸ್ತ ನಾಡಿನ ಕ್ರೈಸ್ತ ಬಾಂಧವರಿಗೆ ಕ್ರಿಸ್ಮಸ್ ಹಬ್ಬದ ಹಾರ್ಧಿಕ ಶುಭಾಶಯಗಳು.
25/12/2025

ಸಮಸ್ತ ನಾಡಿನ ಕ್ರೈಸ್ತ ಬಾಂಧವರಿಗೆ ಕ್ರಿಸ್ಮಸ್ ಹಬ್ಬದ ಹಾರ್ಧಿಕ ಶುಭಾಶಯಗಳು.

ಭಾರತದ ಪ್ರಧಾನಮಂತ್ರಿಯಾಗಿ, ವಿದೇಶಾಂಗ ಸಚಿವರಾಗಿ, ಸಂಸತ್ತಿನ ವಿವಿಧ ಮುಖ್ಯ ಸ್ಥಾಯಿ ಸಮಿತಿಗಳ ಅಧ್ಯಕ್ಷರಾಗಿ ಹಾಗೂ ವಿರೋಧಪಕ್ಷದ ನಾಯಕರಾಗಿ ಸೇವೆ...
25/12/2025

ಭಾರತದ ಪ್ರಧಾನಮಂತ್ರಿಯಾಗಿ, ವಿದೇಶಾಂಗ ಸಚಿವರಾಗಿ, ಸಂಸತ್ತಿನ ವಿವಿಧ ಮುಖ್ಯ ಸ್ಥಾಯಿ ಸಮಿತಿಗಳ ಅಧ್ಯಕ್ಷರಾಗಿ ಹಾಗೂ ವಿರೋಧಪಕ್ಷದ ನಾಯಕರಾಗಿ ಸೇವೆ ಸಲ್ಲಿಸಿದ ಹಾಗೂ ಜನಮಾನಸದಲ್ಲಿ ಹೆಸರುವಾಸಿಯಾದ ಶ್ರೇಷ್ಠ ರಾಜಕಾರಿಣಿಗಳು ಅಜಾತ ಶತ್ರು ದಿ. ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದ ಅಂಗವಾಗಿ ನನ್ನ ಅನಂತ ಅನಂತ ನಮನಗಳು.

ಡಿಸೆಂಬರ್ 23 – ರಾಷ್ಟ್ರೀಯ ರೈತ ದಿನಾಚರಣೆ ಮಣ್ಣಿನ ಜೊತೆ ತನ್ನ ಬದುಕನ್ನ ಕಟ್ಟಿಕೊಂಡು, ದೇಶದ ಬೆನ್ನೆಲುಬಾಗಿನಮ್ಮೆಲ್ಲರಿಗೂ ಆಹಾರ ಒದಗಿಸುವ, ಅನ...
23/12/2025

ಡಿಸೆಂಬರ್ 23 – ರಾಷ್ಟ್ರೀಯ ರೈತ ದಿನಾಚರಣೆ

ಮಣ್ಣಿನ ಜೊತೆ ತನ್ನ ಬದುಕನ್ನ ಕಟ್ಟಿಕೊಂಡು, ದೇಶದ ಬೆನ್ನೆಲುಬಾಗಿ
ನಮ್ಮೆಲ್ಲರಿಗೂ ಆಹಾರ ಒದಗಿಸುವ, ಅನ್ನದಾತ ರೈತನೇ ನಮ್ಮ ನಿಜವಾದ ಹೀರೋ.

ಬಿಸಿಲು–ಮಳೆ–ಕಷ್ಟಗಳನ್ನೆಲ್ಲ ಅನುಭವಿಸುತ್ತ ಸದಾ ದುಡಿಯುವ ಸಮಸ್ತ ನಾಡಿನ ರೈತರಿಗೆ ' ರಾಷ್ಟ್ರೀಯ ರೈತ ದಿನಾಚರಣೆಯ ' ಶುಭಾಶಯಗಳು

22/12/2025

ಸುಂದರ ಸ್ವಚ್ಚ ಆರೋಗ್ಯಕ್ಕೆ ಆಹ್ಲಾದವನ್ನ ನೀಡುವಂತ ನಮ್ಮ ಪರಿಸರವನ್ನ ಉಳಿಸಿಕೊಂಡು ಬೆಳಿಸಿಕೊಂಡು ಹೋಗುವುದು ನಮ್ಮೆಲ್ಲರ ಆದ್ಯಕರ್ತವ್ಯ.

ನಾವುಗಳು ನದಿ ದಂಡೆಗಳ ಮೇಲೆ ಎಲ್ಲೆಂದರಲ್ಲಿ ಕುಡಿತದ ಪಾರ್ಟಿಗಳನ್ನ ಮಾಡಿ, ಅವುಗಳ ಕಸವನ್ನ ಅಲ್ಲಿಯೇ ಬಿಟ್ಟು ಹೊದರೆ ಎಷ್ಟು ಸಮಂಜಸ, ಪಾರ್ಟಿ ಮೋಜು, ಮಸ್ತಿಗಳಾದ ಮೇಲೆ ನಿಮ್ಮಿಂದಾದ ಕಚ್ಚಾವಸ್ತುಗಳನ್ನ ಕಸದ ಬುಟ್ಟಿಯಲ್ಲಿ ಅಥವಾ ಸೂಕ್ತ ಸ್ಥಳಗಳಲ್ಲಿ ವಿಲೇವಾರಿ ಮಾಡಿದರೆ ನಮ್ಮ ಪರಿಸರ ಎಷ್ಟು ಸುಂದರವಾಗಿ ಕಾಣುವುದು ಒಮ್ಮೆ ಯೋಚಿಸಿ.

ಪರಿಸರ ಸೌಂಧರ್ಯವನ್ನ ಸವಿಯಲು ನಮ್ಮ ಭಾರತದಂತಹ ದೇಶಕ್ಕೆ ಅದು ಕರ್ನಾಟಕ್ಕೆ ಬರುವಂತಹ ಎಷ್ಟೊ ವಿದೇಶಿ ಪ್ರಜೆಗಳಿಗೆ, ಪ್ರವಾಸಿಗರಿಗೆ ಇರುಸು ಮುರಿಸು ಮಾಡವಂತಹ ಸನ್ನಿವೇಶಗಳನ್ನ ಸಾಧ್ಯವಾದಷ್ಟು ತಡೆಯೋಣ,‌ ಪ್ರಕೃತಿ ಮಾತೆಯ ಈ ಸುಂದರ ಪರಿಸರವನ್ನ ನಾವೆಲ್ಲರೂ ಆಹ್ಲಾದಿಸೋಣ ಧನ್ಯವಾದಗಳು.

21/12/2025

ಡಿಸೆಂಬರ್ 21 ಪೋಲಿಯೋ ದಿನ ಅಂಗವಾಗಿ ಇಂದು ನಮ್ಮ ಆಸ್ಪತ್ರೆಯಲ್ಲಿ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಲಾಯಿತು.

ನೀವು ಇನ್ನೂ ಲಸಿಕೆ ಹಾಕಿಸಿಲ್ಲವಾ ನಿಮ್ಮ ಹತ್ತಿರದ ಆರೋಗ್ಯ ಕೇಂದ್ರ ಅಥವಾ ಅಂಗನವಾಡಿ ಅಥವಾ ಆರೋಗ್ಯ ಕಾರ್ಯಕರ್ತೆಯರನ್ನ ಸಂಪರ್ಕಿಸಿ.

ನಿಮ್ಮ ಐದು ವರ್ಷದ ಒಳಗಿನ ಮಗುವಿಗೆ ತಪ್ಪದೆ ಲಸಿಕೆ ಹಾಕಿಸಿ ಪೋಲಿಯೋ ಮುಕ್ತ ಭಾರತಕ್ಕೆ ಕೈ ಜೋಡಿಸಿ ಧನ್ಯವಾದಗಳು.

ಪೋಲಿಯೋ ಮುಕ್ತ ಭಾರತ – ನಮ್ಮೆಲ್ಲರ ಗುರಿಯಾಗಿರಲಿ! ಪೋಲಿಯೋ ಒಂದು ಅಪಾಯಕಾರಿ ರೋಗ. ಆದರೆ ಲಸಿಕೆ ಮೂಲಕ ಸಂಪೂರ್ಣವಾಗಿ ತಡೆಯಬಹುದು. ಪ್ರತಿ ಮಗುವಿಗ...
21/12/2025

ಪೋಲಿಯೋ ಮುಕ್ತ ಭಾರತ – ನಮ್ಮೆಲ್ಲರ ಗುರಿಯಾಗಿರಲಿ!

ಪೋಲಿಯೋ ಒಂದು ಅಪಾಯಕಾರಿ ರೋಗ. ಆದರೆ ಲಸಿಕೆ ಮೂಲಕ ಸಂಪೂರ್ಣವಾಗಿ ತಡೆಯಬಹುದು. ಪ್ರತಿ ಮಗುವಿಗೂ ಪೋಲಿಯೋ ಲಸಿಕೆ ಹಾಕಿಸುವುದು ಪೋಷಕರ ಮತ್ತು ಸಮಾಜದ ಹೊಣೆಗಾರಿಕೆ.

0 ರಿಂದ 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೂ
ಪೋಲಿಯೋ ಹನಿ – ಅತ್ಯಾವಶ್ಯಕ.

ಡಿಸೆಂಬರ್ 21 ರಿಂದ 24 ರ ವರೆಗೆ ತಪ್ಪದೇ ಲಸಿಕೆ ಹಾಕಿಸಿ
ಲಸಿಕೆ ಸುರಕ್ಷಿತ, ಉಚಿತ ಮತ್ತು ಮಗುವಿನ ಭವಿಷ್ಯಕ್ಕೆ ರಕ್ಷಾಕವಚ.

ಇಂದು ಹಾಕಿಸಿದ ಒಂದು ಹನಿ – ನಾಳೆಯ ಆರೋಗ್ಯಕರ ಜೀವನಕ್ಕೆ ಭದ್ರ‌ ಬುನಾದಿ ನಿಮ್ಮ ಮಗುವಿಗೆ ತಪ್ಪದೇ ಲಸಿಕೆ ಹಾಕಿಸಿ, ಇತರರಿಗೂ ಲಸಿಕೆಯ ಕುರಿತು ಜಾಗೃತಿ ಮೂಡಿಸಿ.

ಪೋಲಿಯೋ ಮುಕ್ತ ಭಾರತಕ್ಕೆ ಕೈಜೋಡಿಸಿ! ಧನ್ಯವಾದಗಳು.

#ಪೋಲಿಯೋಮುಕ್ತಭಾರತ ❤️

ಗಂಗಾವತಿ ಶಕ್ತಿ ದೇವತೆ, ಗ್ರಾಮ ದೇವತೆಯಾದ ಶ್ರೀ ದುರ್ಗಾ ಪರಮೇಶ್ವರಿ ಜಾತ್ರಾಮಹೋತ್ಸವ ದಿನಾಂಕ‌ 18,19,20 ಮತ್ತು 21 ನಾಲ್ಕು ದಿನಗಳ ಜರುಗಲಿದ್ದ...
18/12/2025

ಗಂಗಾವತಿ ಶಕ್ತಿ ದೇವತೆ, ಗ್ರಾಮ ದೇವತೆಯಾದ ಶ್ರೀ ದುರ್ಗಾ ಪರಮೇಶ್ವರಿ ಜಾತ್ರಾಮಹೋತ್ಸವ ದಿನಾಂಕ‌ 18,19,20 ಮತ್ತು 21 ನಾಲ್ಕು ದಿನಗಳ ಜರುಗಲಿದ್ದು, ಈ ಜಾತ್ರಾ ಮಹೋತ್ಸವಕ್ಕೆ ತಾವೆಲ್ಲರೂ ಆಗಮಿಸುವ ಮೂಲಕ ಜಗನ್ಮಾತೆಯ ಕೃಪೆಗೆ ಪಾತ್ರರಾಗಲು ಮನವಿ ಜಾತ್ರೆಗೆ ಬನ್ನಿ ಎಲ್ಲರಿಗೂ ಹೃದಯಪೂರ್ವಕ ಸುಸ್ವಾಗತ.

17/12/2025

Small habits today. Big wellness tomorrow. 🌱🧼

A healthy child doesn’t start with medicines — it starts with hygiene.
Simple daily practices like washing hands, trimming nails, wearing clean uniforms, and eating safe food protect children from infections and build lifelong discipline.

✨ Teach hygiene early
✨ Practice it daily
✨ Protect their tomorrow

Because prevention is the most powerful form of care. ❤️👶👨‍⚕️














Address

Gangavati
583227

Opening Hours

Monday 10am - 9pm
Tuesday 10am - 9pm
Wednesday 10am - 9pm
Thursday 10am - 9pm
Friday 10am - 9pm
Saturday 10am - 5pm
Sunday 10am - 1pm

Telephone

+919686341767

Alerts

Be the first to know and let us send you an email when Dr. Amaresh Patil posts news and promotions. Your email address will not be used for any other purpose, and you can unsubscribe at any time.

Contact The Practice

Send a message to Dr. Amaresh Patil:

Share

Share on Facebook Share on Twitter Share on LinkedIn
Share on Pinterest Share on Reddit Share via Email
Share on WhatsApp Share on Instagram Share on Telegram