ಸ್ವಾಭಿಮಾನ / स्वाभिमान / Swabhiman

  • Home
  • India
  • Gulbarga
  • ಸ್ವಾಭಿಮಾನ / स्वाभिमान / Swabhiman

ಸ್ವಾಭಿಮಾನ / स्वाभिमान / Swabhiman ಖಾದಿ ಸಿದ್ಧ ಉಡುಪುಗಳು, ಸ್ವದೇಶಿ ಹಾಗೂ ಜೈವಿಕ ಉತ್ಪನ್ನಗಳ ಮಳಿಗೆ

ಸ್ವದೇಶಿ ಆಯುರ್ವೇದ ಉತ್ಪನ್ನಗಳು, ಪಂಚಗವ್ಯ ಉತ್ಪನ್ನಗಳು, ಕರಕುಶಲ ವಸ್ತುಗಳು, ಖಾದಿ ಕುರ್ತಾ, ಪೈಜಾಮ, ಅಂಗಿ, ಜಾಕೆಟ್, ಸಿಧ್ಧ ಉಡುಪುಗಳು, ವಸ್ತ್ರ, ಕೈ ವಸ್ತ್ರ, ಹಾಸಿಗೆ, ಕೈ ಚೀಲ, ಬಟ್ಟೆ, ಸ್ವದೇಶಿ ಹಾಗು ಜೈವಿಕ(organic) ಉತ್ಪನ್ನಗಳು,ಚನ್ನಪಟ್ಟಣದ ಗೊಂಬೆಗಳು ಇತ್ಯಾದಿ...

01/03/2026
20/02/2026

ಸ್ವಾಭಿಮಾನ ಸ್ವದೇಶಿಯ 11 ವರ್ಷಗಳ ಸಂಭ್ರಮಾಚರಣೆಯ ಪ್ರಯುಕ್ತ ನಡೆದ 2 ದಿನಗಳ ಸ್ವದೇಶೀ ಉತ್ಸವ ಯಶಸ್ವೀಗೋಳಿಸಿದ್ದಕ್ಕೆ ಧನ್ಯವಾದಗಳು ಕಲಬುರಗಿ ಜನತೆ..🙏


17/02/2026

Swabhiman Swadeshi Customer Review..

11/02/2026

ನಿಮ್ಮ ಸ್ವಾಭಿಮಾನ ಸ್ವದೇಶಿ ಬೆಳೆದು ಬಂದ ಹಾದಿ..!
11 ವರ್ಷಗಳ ಪಯಣದ ಕಿರು ಪರಿಚಯ ನಿಮ್ಮ ಮುಂದೆ ....

ಸ್ವಾಭಿಮಾನ ಸ್ವದೇಶಿ ಕೇಂದ್ರದ 11ನೇ ವಾರ್ಷಿಕೋತ್ಸವ: ಸ್ವದೇಶಿ ಉತ್ಸವ ಯಶಸ್ವಿಸ್ವಾಭಿಮಾನ ಸ್ವದೇಶಿ ಕೇಂದ್ರದ ವತಿಯಿಂದ 11ನೇ ವಾರ್ಷಿಕೋತ್ಸವದ ಅಂ...
07/02/2026

ಸ್ವಾಭಿಮಾನ ಸ್ವದೇಶಿ ಕೇಂದ್ರದ 11ನೇ ವಾರ್ಷಿಕೋತ್ಸವ: ಸ್ವದೇಶಿ ಉತ್ಸವ ಯಶಸ್ವಿ

ಸ್ವಾಭಿಮಾನ ಸ್ವದೇಶಿ ಕೇಂದ್ರದ ವತಿಯಿಂದ 11ನೇ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಲಾದ ಎರಡು ದಿನಗಳ ಬೃಹತ್ ಸ್ವದೇಶಿ ಉತ್ಸವ ಕಾರ್ಯಕ್ರಮವು ಯಶಸ್ವಿಯಾಗಿ ಆರಂಭವಾಯಿತು.
ಕಾರ್ಯಕ್ರಮವು ಬೆಳಿಗ್ಗೆ 11:00 ಗಂಟೆಗೆ ಆರಂಭಗೊಂಡು, ಶತಮಾನದ ಸಂತ ಶ್ರೀ ಸಿದ್ಧೇಶ್ವರರು, ಸ್ವದೇಶಿ ಚಳವಳಿಯ ಪ್ರೇರಣಾದಾಯಕ ಸಂತ ಶ್ರೀ ರಾಜೀವ್ ಭಾಯಿ ದೀಕ್ಷಿತ್ ಹಾಗೂ ಭಾರತಮಾತೆಯ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಲಾಯಿತು. ಚೇತನ್ ಮಠ ಅವರು ವಂದೇ ಮಾತರಂ ಗೀತೆಯನ್ನು ಹಾಡಿದರು.

ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಡಾ॥ ದಾಕ್ಷಾಯಣಿ ಅವ್ವಾಜಿ ಅವರು ಆರೋಗ್ಯಕರ ಆಹಾರ ಸೇವನೆಯ ಮಹತ್ವವನ್ನು ವಿವರಿಸಿ, ಕುಟುಂಬದ ಆರೋಗ್ಯವನ್ನು ಕಾಪಾಡುವಲ್ಲಿ ಮಹಿಳೆಯರ ಪಾತ್ರ ಅತ್ಯಂತ ಪ್ರಮುಖವೆಂದು ಹೇಳಿದರು. ರಾಸಾಯನಿಕರಹಿತ, ನೈಸರ್ಗಿಕ ಆಹಾರ ಸೇವನೆಯತ್ತ ಜನರು ಗಮನಹರಿಸಬೇಕೆಂದು ಅವರು ಸಲಹೆ ನೀಡಿದರು.
ಇದಾದ ನಂತರ ಸ್ವಾಭಿಮಾನ ಸ್ವದೇಶಿ ಮಳಿಗೆಯ ಸಾಧನೆಗಳನ್ನು ಒಳಗೊಂಡ ಕಿರುಚಿತ್ರವನ್ನು ಪ್ರದರ್ಶಿಸಲಾಯಿತು.

ಕಾರ್ಯಕ್ರಮದ ಮುಖ್ಯ ಉಪನ್ಯಾಸಕರಾಗಿ ಧಾರವಾಡದಿಂದ ಆಗಮಿಸಿದ್ದ ಶ್ರೀಯುತ ಗೌರಿಶಂಕರ ಕರೋಶಿ ಅವರು ಮಾತನಾಡಿ, ಕೃಷಿಯಲ್ಲಿ ಬೀಜದಿಂದ ಹಿಡಿದು ಕೀಟನಾಶಕ ಹಾಗೂ ಕಳೆನಾಶಕಗಳವರೆಗೆ ಸಂಪೂರ್ಣವಾಗಿ ಮಾರುಕಟ್ಟೆಯ ಅವಲಂಬನೆ ಸರಿಯಲ್ಲ ಎಂದು ಅಭಿಪ್ರಾಯಪಟ್ಟರು. ರೈತರು ಮಾತ್ರವಲ್ಲದೆ ಜನಸಾಮಾನ್ಯರೂ ಸ್ವಾವಲಂಬಿ ಹಾಗೂ ಪೂರಕ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕೆಂದು ಅವರು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ರೈತರಿಗೆ ವರದಾನವಾಗಿರುಬ ಗೋಕೃಪಾಮೃತವನ್ನು ಉಚಿತವಾಗಿ ವಿತರಣೆ ಮಾಡಲಾಯಿತು.

ಕಾರ್ಯಕ್ರಮದ ಅಂತ್ಯದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಎಲೆಮರೆಯ ಕಾಯಿಯಂತಿರುವ ಸಾಧಕರನ್ನು ಶ್ರೀಯುತ ಗೌರಿಶಂಕರ ಕರೋಶಿ ಅವರು ಸನ್ಮಾನಿಸಿದರು.
ಸನ್ಮಾನಿತರಾದವರು: ಶ್ರೀ ಕೃಷ್ಣ ಕೆಂಭಾವಿ, ಶ್ರೀ ಮಹೇಶ್ ಬೀದರ್ಕರ್, ಶ್ರೀ ನಾಗನಾಥ್ ಯಾದಗೀರ್, ಅಮೃತ್ ತೇಲಿ, ಮೇಕ್ ಇಟ್ ಪಾಸಿಬಲ್ ತಂಡ, ಶ್ರೀ ಗುರು ಬೆಟಗೇರಿ, ಶ್ರೀ ಶಿವರಾಜ್ ಕುಮಾರ್ ಹಳ್ಳಿ ಹಾಗೂ ಚೇತನ್ ದೀಕ್ಷಿತ್.

ಸನ್ಮಾನ ಕಾರ್ಯಕ್ರಮವನ್ನು ಸಂಪೂರ್ಣ ಪರಿಸರಪೂರಕವಾಗಿ ಆಯೋಜಿಸಲಾಗಿದ್ದು, ಖಾದಿ ನೂಲಿನಿಂದ ತಯಾರಿಸಲಾದ ಹಾರಗಳು ಹಾಗೂ ಖಾದಿ ಶಾಲುಗಳನ್ನು ಬಳಸಲಾಯಿತು.

ಇಂದಿನ ಮತ್ತೊಂದು ವಿಶೇಷರೈತರಿಗೆ ವರದಾನವಾಗಿರುವ ಗೋಕೃಪಾಮೃತದ ಉಚಿತ ವಿತರಣೆ ಇರುತ್ತದೆಖಾಲಿ ಬಾಟಲಿ ತನ್ನಿ
07/02/2026

ಇಂದಿನ ಮತ್ತೊಂದು ವಿಶೇಷ

ರೈತರಿಗೆ ವರದಾನವಾಗಿರುವ ಗೋಕೃಪಾಮೃತದ ಉಚಿತ ವಿತರಣೆ ಇರುತ್ತದೆ

ಖಾಲಿ ಬಾಟಲಿ ತನ್ನಿ

ಎರಡು ದಿನಗಳ ಬೃಹತ್ ಸ್ವದೇಶೀ ಉತ್ಸವಕ್ಕೆ ಸ್ವಾಗತ
06/02/2026

ಎರಡು ದಿನಗಳ ಬೃಹತ್ ಸ್ವದೇಶೀ ಉತ್ಸವಕ್ಕೆ ಸ್ವಾಗತ

Address

SWABHIMAN SWADESHI KENDRA SUPER BAZAR, Oppo. Old Kothari Bhavan, New Jewargi Road, Godutai Nagar, Kalburgi
Gulbarga
585102

Opening Hours

Monday 10am - 9:30pm
Tuesday 10am - 9:30pm
Wednesday 10am - 9:30pm
Thursday 10am - 9:30pm
Friday 10am - 9:30pm
Saturday 10am - 9:30pm
Sunday 10am - 9:30pm

Telephone

+918880080277

Alerts

Be the first to know and let us send you an email when ಸ್ವಾಭಿಮಾನ / स्वाभिमान / Swabhiman posts news and promotions. Your email address will not be used for any other purpose, and you can unsubscribe at any time.

Contact The Practice

Send a message to ಸ್ವಾಭಿಮಾನ / स्वाभिमान / Swabhiman:

Share