27/11/2025
ಭಾರತೀಯ ವೈದ್ಯಕೀಯ ಸಂಘ, ಹಾಸನ, ಜನಪ್ರಿಯ ಸಮೂಹ ಸಂಸ್ಥೆಗಳು, ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರ ಸಂಘ, ಮಣಿ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ, ಸಹ್ಯಾದ್ರಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಇನ್ನಿತರೆ ಸಂಸ್ಥೆಗಳ ಸಹಯೋಗದಲ್ಲಿ ವಿಶ್ವ ಡಯಾಬಿಟಿಕ್ ದಿನಾಚರಣೆ ಅಂಗವಾಗಿ ಜಾಥಾ ಕಾರ್ಯಕ್ರಮದ ಚಾಲನೆಯನ್ನು ಹಿರಿಯ ವೈದ್ಯರಾದ ಡಾ. ಎ ನಾಗರಾಜ್ ರವರು ಚಾಲನೆ ನೀಡಿದ ನಂತರ ಮಾತನಾಡಿದ ಅವರು. ವಿಶ್ವ ಮಧುಮೇಹ ದಿನವನ್ನು ಪ್ರತಿ ವರ್ಷ ನವೆಂಬರ್ ೧೪ ರಂದು ಆಚರಿಸಲಾಗುತ್ತದೆ. ಈ ದಿನದ ಉದ್ದೇಶವು ಮಧುಮೇಹದ ಬಗ್ಗೆ ಜಾಗೃತಿ ಮೂಡಿಸುವುದು, ಅದರ ತಡೆಗಟ್ಟುವಿಕೆ, ರೋಗನಿರ್ಣಯ, ಮತ್ತು ಅಗತ್ಯ ಚಿಕಿತ್ಸೆಯ ಕುರಿತು ಮಾಹಿತಿ ನೀಡುವುದು, ಮತ್ತು ಮಧುಮೇಹದಿಂದ ಬಳಲುತ್ತಿರುವ ಜನರಿಗೆ ಅರಿವು ಮೂಡಿಸುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಐಎಂಎ ಮಾಜಿ ಅಧ್ಯಕ್ಷರು ಮತ್ತು ಜನಪ್ರಿಯ ಫೌಂಡೇಶನ್ ಅಧ್ಯಕ್ಷರಾದ ಡಾ. ವಿ ಕೆ ಅಬ್ದುಲ್ ಬಶೀರ್ ರವರು ಮಾತನಾಡಿ ಆರೋಗ್ಯದ ಬಗ್ಗೆ ಮಾತನಾಡುತ್ತಾ ನಾವು ನಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡಿ, ಬಿಪಿ ಶುಗರ್ ನಂತಹ ಸಾಮಾನ್ಯ ಕಾಯಿಲೆಯನ್ನು ನಿರ್ಲಕ್ಷ ಮಾಡಬೇಡಿ ಕಾಲಕಾಲಕ್ಕೆ ಪರೀಕ್ಷೆ ಮಾಡಿಕೊಂಡು ಆರೋಗ್ಯದಿಂದರಬೇಕು, ಬಿಪಿ ಶುಗರ್ ಅನ್ನು ಹತೋಟಿಯಲ್ಲಿ ಇಡಬೇಕೆಂದು ಸಾರ್ವಜನಿಕರಲ್ಲಿ ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಐಎಂಎ ಅಧ್ಯಕ್ಷರಾದ ಡಾ. ಶ್ರೀರಂಗರವರು ಮಧುಮೇಹಿಗಳು ಸಂಸ್ಕರಿಸಿದ ಆಹಾರ, ಸಕ್ಕರೆ ಪಾನೀಯಗಳು, ಮತ್ತು ಅತಿಯಾದ ಉಪ್ಪು, ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌ಗಳು ಮತ್ತು ಅಧಿಕ ಕೊಬ್ಬಿನಾಂಶವಿರುವ ಆಹಾರಗಳನ್ನು ತಿನ್ನಬಾರದು. ಹೆಚ್ಚಿನ ಸಕ್ಕರೆ ಅಂಶವಿರುವ ಹಣ್ಣುಗಳಾದ ಬಾಳೆಹಣ್ಣು, ಮಾವು, ದ್ರಾಕ್ಷಿ, ಮತ್ತು ಹಣ್ಣಿನ ರಸಗಳನ್ನು ಕೂಡ ಮಿತಗೊಳಿಸಬೇಕು ಮತ್ತು ಪಾಲಕ್, ಹಾಗಲಕಾಯಿ, ಬ್ರೊಕೊಲಿ, ಹೂಕೋಸು, ಕ್ಯಾರೆಟ್ ಪಿಷ್ಟರಹಿತ ತರಕಾರಿಗಳನ್ನು ಹೆಚ್ಚು ಸೇವಿಸಿ ರಾಗಿ, ಬ್ರೌನ್ ರೈಸ್, ಕ್ವಿನೋವಾ, ಮತ್ತು ಓಟ್ಸ್ನಂತಹ ಸಂಪೂರ್ಣ ಧಾನ್ಯಗಳನ್ನು ಮತ್ತು ತಾಜಾ ಹಣ್ಣುಗಳು, ವಿಶೇಷವಾಗಿ ಕಡಿಮೆ ಸಕ್ಕರೆಯ ಹಣ್ಣುಗಳಾದ ದ್ರಾಕ್ಷಿಹಣ್ಣು ಆಮ್ಲಾ, ಮತ್ತು ಕಾಲಾ ಜಾಮೂನ್‌ಗಳನ್ನು ದಿನಕ್ಕೆ ಒಮ್ಮೆಯಾದರೂ ಸೇವಿಸಬಹುದು ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಮಣಿ ಆಸ್ಪತ್ರೆ ಮುಖ್ಯಸ್ಥರಾದ ಡಾ. ಯತೀಶ್ ಕುಮಾರ್, ಮಾಜಿ ಐಎಂಎ ಅಧ್ಯಕ್ಷರಾದ ಡಾ. ಶ್ರೀರಂಗ ಡಾಂಗೆ, ಹಿರಿಯ ವೈದ್ಯರಾದ ಡಾ.ರಾಜಶೇಖರ್, ಡಾ.ಪದ್ಮಪ್ರಸಾದ್, ಡಾ.ಕಿರಣ್, ಡಾ. ಭಾರತಿ ರಾಜಶೇಖರ್, ಡಾ.ನ್ಯಾನ್ಸಿ ಪೌಲ್, ಡಾ.ತೇಜಸ್ವಿ ಮತ್ತು ಇತರೇ ವೈದ್ಯರು, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.