22/05/2022
ಇದು ಒಂದು ಸಾಮಾನ್ಯ ರೀಡಿಂಗ್ ಮಾತ್ರ ಆಗಿರುತ್ತದೆ, ನಿಮಗೆ ಅನ್ವಯಿಸಿದಲ್ಲಿ ಮಾತ್ರ ತೆಗೆದುಕೊಳ್ಳಿ ಇಲ್ಲವಾದಲ್ಲಿ ಬಿಟ್ಟುಬಿಡಿ....
ನನಗೆ ತುಂಬಾ ಫೈರ್ ಎನರ್ಜಿ ಕಾಣ್ಸುಸ್ತಾ ಇದೆ, ಯಾವ್ದು ನಿಮ್ಮ ಪ್ರಕಾರ ನಡೀತಾ ಇಲ್ಲಾ, ತುಂಬಾ ಪೀಪಲ್ಸ್ ಅಥವಾ ಪೀಪಲ್ಸ್ ಒಪೀನಿಯನ್ ನಿಮ್ಮ ಡಿಸಿಷನ್ ಮದ್ಯೆ ಬರ್ತಾ ಇದೆ, ಯಾವ್ದು ಕೂಡ ಸರಿಯಾದ ಎಂಡ್ ಕಾಣುತ್ತಾ ಇಲ್ಲಾ ಅಥವಾ ಅದು ಎಂಡ್ ಆಗೋ ಅಲ್ಲಿಗೆ ಬಂದಾಗ ಮತ್ತೆ ಏನೋ ಸಮಸ್ಯೆ ಅಥವಾ ತಿರುವು ಬಂದು ಹಾಗೇ ಆ ಸಮಸ್ಯೆ ಅಥವಾ ವಿಷಯ ಮುಂದುವರಿತಾ ಇದೆ.
ನನಗೆ ಇಲ್ಲಿ ಕಾಂಪಿಟಿಷನ್ ಕೂಡ ಕಾಣುಸ್ತಾ ಇದೆ, ಕೆಲವೊಂದು ಪ್ಲಾನ್ಸ್ ವರ್ಕ್ ಆಗ್ತಾ ಇಲ್ಲಾಅಂತ ನೀವು ಆ ಪ್ಲಾನ್ಸ್ ನ ಕ್ಯಾನ್ಸಲ್ ಕೂಡ ಮಾಡಿರಬಹುದು, ಆದರೆ ಈಗ ನಿಮ್ಮನ್ನ ನೀವು ಪ್ರೋವ್ ಮಾಡ್ಕೋಬೇಕಾದ ಸಮಯ ಇದಾಗಿದೆ, ನಿಮ್ಮ ಡಿಸಿಷನ್ ಅನ್ನು ನೀವು ಫರ್ಮ್ ಆಗಿ ಹೇಳಬೇಕಾಗಿದೆ.
ಕೆಲವರಿಗೆ ನಿಮ್ಮ ಜೀವನದಲ್ಲಿ ಸಣ್ಣ ಬದಲಾವಣೆಗಳು ಬಂದಿರಬಹುದು, ಒಳ್ಳೇದು ಮತ್ತು ಕೆಟ್ಟದ್ದು ಸಮನಾಗಿ ನಡೀತಿರಬಹುದು, ಸ್ವಲ್ಪ ಅಪ್ಸ್ ಅಂಡ್ ಡೌನ್ಸ್ ನಿಮ್ಮ ಲೈಫ್ ಅಲ್ಲಿ ನೀವು ನೋಡುತ್ತಿರಬಹುದು. ಕೆಲವರಿಗೆ ಮೂಡ್ ಸ್ವೀಗ್ಸ್ ಜಾಸ್ತಿ ಆಗ್ತಾ ಇರಬಹುದು, ಇನ್ನು ಕೆಲವರು ಟ್ರಾವೆಲ್ ಪ್ಲಾನ್ ಮಾಡುತ್ತಾ ಇರಬಹುದು, ಆದರೆ ಕೆಲವರಿಗೆ ಮುಂದೆ ಚಾಲೆಂಜ್ಸ್ ಬಾರೋ ಸಾಧ್ಯತೆ ಇದೆ ಅದು ಪರ್ಸನಲ್ ಅಥವಾ ಪ್ರೊಫೆಷನಲ್ ಲೈಫ್ ಅಲ್ಲಿ ಇರಬಹುದು, ಅದಕ್ಕೋಸ್ಕರ ನೀವು ಸಿದ್ದರಾಗೋ ಅಗತ್ಯ ಇದೆ, ಖಂಡಿತ ಕೆಲವರ ಲೈಫ್ ಅಲ್ಲಿ ಗ್ರೋಥ್ ಮುಂದೆ ಬರುತ್ತೆ ಆದರೆ ನೀವು ಮುಂದೆ ಬರುವಂತಹ ಬದಲಾವಣೆಗಳಿಗೆ ಸಿದ್ದರಿದ್ರೆ ಮಾತ್ರ ನೀವು ಆ ಗ್ರೋಥ್ ನ ನಿಮ್ಮ ಲೈಫ್ ಅಲ್ಲಿ ನೀವು ನೋಡಬಹುದು.
ಕೆಲವರಂತು ಒನ್ ಮ್ಯಾನ್ ಆರ್ಮಿ ತರ ಆಗಿದ್ದಾರೆ, ಎಲ್ಲವನ್ನು ತಮ್ಮ ಹೆಗಲ ಮೇಲೆ ಹಾಕಿಕೊಂಡು ನಿಭಾಹಿಸುತ್ತಾ ಇದಾರೆ, ಕೆಲವರು ಮೆಂಟಲಿ ಸ್ವಲ್ಪ ಡಿಸ್ಟರ್ಬ್ ಆಗಿದರೆ, ನಿಮಗೆ ಮೆಡಿಟೇಶನ್ ಅಗತ್ಯ ಇದೆ, ನೀವು ತುಂಬಾ ಸಮಯದಿಂದ ಯಾವುದಾದರೂ ವಿಷಯಕ್ಕೆ ಜಗ್ಗಾಡುತ್ತಾ ಬಂದಿದ್ದರೆ ಖಂಡಿತಾ ನೀವು ಅದನ್ನ ಈಗ ವಿಥ್ ಡ್ರಾವೆಲ್ ಮಾಡ್ಕೊಳೋದು ಒಳ್ಳೇದು, ಕೆಲವರಿಗೆ ಒಂಟಿಯಾಗಿ ಇರಬೇಕು ಅನಿಸ್ತಾ ಇದೆ, ಮತ್ತೆ ಕೆಲವರಿಗೆ ಒಂಟಿತನ ಕಾಡುತ್ತಾ ಇದೆ, ನೀವು ಯಾವುದಾದರೂ ವಿಷಯಕ್ಕೆ ಕೈ ಹಾಕುವ ಮುನ್ನ ಸತ್ಯ ತಿಳಿಯಲು ಪ್ರಯತ್ನಿಸಿ ತದ ನಂತರ ಆ ವಿಷಯಕ್ಕೆ ಕೈ ಹಾಕಿ ಹಾಗೂ ನೀವು ಯಾವುದಾದರೂ ಮುಖ್ಯವಾದ ವಿಷಯಕ್ಕೆ ಕೈ ಹಾಕಲು ನಿರ್ಧರಿಸಿದ್ದರೆ ದಯವಿಟ್ಟು ಪರಿಣಿತರ ಸಲಹೆ ತೆಗೆದುಕೊಳ್ಳಿ.