Bharati Ayurveda Health Care

Bharati Ayurveda Health Care Ayurvedic Wellness Centre For Good Health

30/03/2022

ಋತುಮತಿಯಾದ ಮೊದಲ ಮಾಸಿಕ ದಿನವನ್ನು ರಜೋದರ್ಶಕ ಅಥವಾ ಮೆನಾರ್ಚೆ ಅಂದು ಕರೆಯಲಾಗುತ್ತದೆ. ಮೊದಲೆಲ್ಲಾ 13 ವರ್ಷ ಮೇಲ್ಪಟ್ಟ ಹೆಣ್ಣುಮಕ್ಕ.....

24/02/2022
10/12/2021

,

22/10/2021
22/10/2021

If your doctor prescribes you medication without first asking about
Your diet
Your sleep
Your exercise
Your water consumption
The stress in your life
Whether you have any structural issues
Then you don't have a Doctor, You have a drug dealer.

ಸೋರಿಯಾಸಿಸ್:ಚರ್ಮ ರೋಗಗಳಿಂದ ಬಳಲುತ್ತಿರುವವ ಬಹಳಷ್ಟು ಜನರು ಚಳಿಗಾಲದಲ್ಲಿ ರೋಗದ ತೀವ್ರತೆ ಹೆಚ್ಚಾಗಿ ವೈದ್ಯರ ಬಳಿಗೆ ದೌಡಾಯಿಸುತ್ತಾರೆ. ಇದರಲ್ಲ...
14/04/2021

ಸೋರಿಯಾಸಿಸ್:
ಚರ್ಮ ರೋಗಗಳಿಂದ ಬಳಲುತ್ತಿರುವವ ಬಹಳಷ್ಟು ಜನರು ಚಳಿಗಾಲದಲ್ಲಿ ರೋಗದ ತೀವ್ರತೆ ಹೆಚ್ಚಾಗಿ ವೈದ್ಯರ ಬಳಿಗೆ ದೌಡಾಯಿಸುತ್ತಾರೆ. ಇದರಲ್ಲಿ ಅತ್ಯಂತ ಕ್ಲಿಷ್ಟವಾದ ಸಮಸ್ಯೆ ಸೋರಿಯಾಸಿಸ್. ಬಹಳಷ್ಟು ಜನರು ಸೋರಿಯಾಸಿಸ್‌ನ್ನು ತುಂಬಾ ಸಾಧಾರಣ ಕಾಯಿಲೆ ಎಂದು ಭಾವಿಸುತ್ತಾರೆ. ಆದರೆ ಇದು ನಮ್ಮ ಶರೀರದಲ್ಲಿನ ರೋಗ ನಿರೋಧಕ ಶಕ್ತಿ ಕುಂದಿದಾಗ ಬರುವ ಚರ್ಮರೋಗ ಎಂಬುದು ಹೆಚ್ಚಿನವರಿಗೆ ಗೊತ್ತಿರುವುದಿಲ್ಲ.

ಪ್ರಪಂಚದ ಜನ ಸಾಂದ್ರತೆಯಲ್ಲಿ ಶೇ.3 ರಷ್ಟು ಜನರು ಈ ರೋಗಕ್ಕೆ ಒಳಗಾಗುತ್ತಾರೆ. ಸೋರಿಯಾಸಿಸ್ ಮಾರಣಾಂತಿಕವಲ್ಲ. ಆದರೆ ಮಾನಸಿಕ ಅಶಾಂತಿಗೆ ಒಳಗಾಗುವುದರಿಂದ ಮತ್ತಷ್ಟು ತೊಂದರೆಪಡುತ್ತಾರೆ. ಸೋರಿಯಾಸಿಸ್ ಒಂದು ದೀರ್ಘಕಾಲಿಕ ಚರ್ಮರೋಗ. ಇದರಲ್ಲಿ ಮುಖ್ಯವಾಗಿ ಚರ್ಮದ ಮೇಲೆ ತುರಿಕೆಯಿಂದ ಕೂಡಿದ ಕೆಂಪು ಬಣ್ಣದ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ. ಸೋರಿಯಾಸಿಸ್‌ನಲ್ಲಿ ಮೊದಲು ಚರ್ಮ ಇನ್‌ಫ್ಲಮೇಶನ್‌ಗೆ ಒಳಗಾಗುತ್ತದೆ. ಇದರಿಂದ ಚರ್ಮದ ಮೇಲಿನ ಪೊರೆ ಕೆಂಪು ಬಣ್ಣದಿಂದ ಕೂಡಿದ ಮೊಡವೆಗಳ ರೂಪದಲ್ಲಿ ಕಳಚಿಕೊಳ್ಳುತ್ತದೆ. ಸಾಧಾರಣವಾಗಿ ವಾತಾವರಣ ತಂಪು ಇದ್ದಾಗ ಈ ರೋಗ ಲಕ್ಷಣಗಳು ಅಧಿಕವಾಗುತ್ತವೆ. ಈ ವ್ಯಾಧಿ ಚರ್ಮದ ಜತೆಗೆ ಕೀಲುಗಳಲ್ಲಿ ಕೂಡ ಪ್ರಭಾವ ಬೀರುತ್ತದೆ. ಆರೋಗ್ಯವಂಥ ಚರ್ಮವು ಕಾಲಕ್ರಮೇಣ ಉದುರುವುದರಿಂದ ಅದರ ಕೆಳಗೆ ಹೊಸ ಜೀವಕೋಶಗಳು ನಿರಂತರವಾಗಿ ಉತ್ಪತ್ತಿಯಾಗುತ್ತಿರುತ್ತವೆ. ಸುಮಾರು ಒಂದು ತಿಂಗಳ ಕಾಲ ಈ ಕಣಗಳು ಹೊರಗಡೆ ಸೇರಿಕೊಳ್ಳುತ್ತವೆ. ಈ ರೀತಿಯ ದೇಹದ ಪೊರೆಯಾಗಿ ಮಾರ್ಪಡುವ ಕಣಗಳು ಕ್ರಮೇಣ ನಿರ್ಜೀವವಾಗಿ ಉದುರಿ ಹೋಗುತ್ತವೆ. ಕೆಳಗಡೆ ಇರುವ ಕಣಗಳನ್ನು ಹೊಸ ಚರ್ಮ ಆಗುವುದಕ್ಕೆ ದಾರಿ ಮಾಡಿಕೊಡುತ್ತದೆ. ರೋಗ ನಿರೋಧಕ ಶಕ್ತಿ ಕುಂಠಿತಗೊಂಡು ರೋಗ ಕಣಗಳ ಮೇಲೆ ದಾಳಿ ನಡೆಸುವುದರಿಂದ ಸೋರಿಯಾಸಿಸ್ ಉಂಟಾಗುತ್ತದೆ.

ಕಾರಣಗಳು: ಅನುವಂಶೀಯ ಕಾರಣಗಳಿಂದ ಅಥವಾ ಮಾನಸಿಕ ಒತ್ತಡದಿಂದ ಈ ಕಾಯಿಲೆ ಬರುತ್ತದೆ. ದೇಹದ ರೋಗನಿರೋಧಕ ವ್ಯವಸ್ಥೆಯಲ್ಲಿ ಅಸಮತೋಲನ ಏರ್ಪಡುತ್ತದೆ. ಅಲ್ಲದೆ ಹಲವು ಬಗೆಯ ಔಷಧಗಳನ್ನು ದೀರ್ಘಕಾಲದವರೆಗೆ ಸೇವಿಸುವುದರಿಂದಲೂ ಸೋರಿಯಾಸಿಸ್ ಬರಬಹುದು.

ದುಷ್ಪರಿಣಾಮಗಳು: ಸೋರಿಯಾಸಿಸ್ ಅರ್ಥೈಟಿಸ್, ಮಾನಸಿಕ ಅಶಾಂತಿ, ಲವಣಗಳು, ವಿಟಮಿನ್ ಲೋಪಕ್ಕೆ ದಾರಿ ಮಾಡಿಕೊಡುತ್ತದೆ.

ಲಕ್ಷಣಗಳು: ತಲೆ, ಮೊಣಕೈ, ಮೊಣಕಾಲು, ಅಂಗೈ, ಪಾದ ಹಾಗೂ ಹೊಟ್ಟೆಯ ಮೇಲ್ಭಾಗದ ಚರ್ಮದ ಮೇಲೆ ಸೋರಿಯಾಸಿಸ್ ಪ್ರಭಾವ ಬೀರುತ್ತದೆ.

ಚರ್ಮ ಕೆಂಪಾಗುವುದು, ಸಾಧಾರಣದಿಂದ ಅತಿ ತೀವ್ರ ತುರಿಕೆ, ಚರ್ಮ ಒಡೆದು ಹೋಗುವುದರಿಂದ ತೀವ್ರವಾದ ನೋವು, ಸೋರಿಯಾಸಿಸ್ ತಲೆಯಲ್ಲಿ ಇದ್ದಾಗ ಹೊಟ್ಟು ಹಾಗೂ ಕೂದಲುದುರುವಿಕೆ, ಅಂಗೈ, ಪಾದಗಳಲ್ಲಿನ ಚರ್ಮ ಹೊಟ್ಟಿನ ರೂಪದಲ್ಲಿ ಉದುರುವುದು.
ಸೋರಿಯಾಸಿಸ್ ರೋಗ ತೀವ್ರವಾಗಿದ್ದಾಗ ಕೀಲುಗಳಲ್ಲಿ ನೋವು ಕಾಣಿಸುತ್ತದೆ.

ಮುಂಜಾಗ್ರತೆ: ಅಧಿಕ ನೀರಿನ ಸೇವನೆ, ಅಧಿಕ ಪ್ರೋಟೀನ್‌ಯುಕ್ತ ಆಹಾರ ಸೇವನೆ, ಚರ್ಮ ಉದುರಿ ಹೋಗದಂತೆ ಕೊಬ್ಬರಿ ಎಣ್ಣೆ, ಮಾಯ್ಚಿರೈಸರ್ ಹಚ್ಚಬೇಕು. ಚರ್ಮದ ಮೃದುತ್ವ ಕಾಪಾಡಲು ಒಮೆಗಾ 3 ಇರುವ ಆಹಾರ ಸೇವಿಸುವುದು, ಪ್ರತಿದಿನ ವ್ಯಾಯಾಮ ಮಾಡುವುದು, ಪ್ರತಿನಿತ್ಯ ಬೆಳಗಿನ ಸೂರ್ಯ ಕಿರಣಗಳಿಗೆ ದೇಹವನ್ನು ಒಡ್ಡುವುದು ಚರ್ಮದ ಆರೋಗ್ಯಕ್ಕೆ ಬಹಳ ಉತ್ತಮ. ಚಳಿಗಾಲ, ಮಾನಸಿಕ ಒತ್ತಡ, ಧೂಮಪಾನ, ಮದ್ಯಪಾನ ಮತ್ತು ಕೆಲವು ದುರಾಭ್ಯಾಸಗಳಿಂದ ಕಾಯಿಲೆ ಹೆಚ್ಚಾಗುವ ಸಾಧ್ಯತೆ ಇರುತ್ತದೆ.

ರೋಗ ಪತ್ತೆ ಪರೀಕ್ಷೆಗಳು: ಸಿಬಿಸಿ, ಇಎಸ್‌ಬಿ, ಚರ್ಮ ಬಯೋ ಸೈ, ಕ್ಷ ಕಿರಣ(ಸೋರಿಯಾಸಿಸ್ ಕೀಲುಗಳ ನೋವು ಹೆಚ್ಚಾದಾಗ), ಮುಂತಾದ ಪರೀಕ್ಷೆಗಳನ್ನು ಮಾಡಬೇಕು. ಸಾಧಾರಣವಾಗಿ ಅನುಭವಿ ವೈದ್ಯರು ರೋಗಿಯ ಚರ್ಮವನ್ನು ಸೂಕ್ಷ್ಮವಾಗಿ ಪರಿಶೀಲಿಸುವುದರಿಂದ ರೋಗವನ್ನು ಪತ್ತೆ ಹಚ್ಚುತ್ತಾರೆ.
ಆಯುರ್ವೇದದಲ್ಲಿ ಸೊರಿಯಾಸಿಸ್:
ಆಯುರ್ವೇದದಲ್ಲಿ ಈ ಖಾಯಿಲೆಗೆ ತುಂಬಾ ಪರಿಣಾಮಕಾರಿಯಾದ ಚಿಕಿತ್ಸೆ ಇರುತ್ತದೆ. ಆಯುರ್ವೇದದ ಪಂಚಕರ್ಮದ ಮುಖಾಂತರ ರೋಗವನ್ನು ಗುಣಪಡಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಡಾ. ಮಂಜುನಾಥ ದಿನ್ನಿ BAMS, MS
ಭಾರತಿ ಆಯುರ್ವೇದ ಹೆಲ್ತ್ ಕೇರ್ ಸೆಂಟರ
3 ನೇ ಕ್ರಾಸ್ ಎಂ.ಜೆ. ನಗರ, 100 ಹಾಸಿಗೆ ಆಸ್ಪತ್ರೆ ರಸ್ತೆ
ಹೊಸಪೇಟೆ-583201
ಮೊ-8050710699

13/04/2021

ಪ್ಲವನಾಮ ಸಂವತ್ಸರದ ಯುಗಾದಿ ಹಬ್ಬದ ಮತ್ತು ಹೊಸ ವರ್ಷದ ಹಾರ್ದಿಕ ಶುಭಾಶಯಗಳು

Address

3rd Cross MJ Nagar, 100 Bed Hospital Road
Hospet
583201

Opening Hours

Monday 10am - 1pm
6pm - 8:30pm
Tuesday 10am - 1pm
6pm - 8:30pm
Wednesday 10am - 1pm
6pm - 8:30pm
Thursday 10am - 1pm
6pm - 8:30pm
Friday 10am - 1pm
6pm - 8:30pm
Saturday 10am - 1pm
6pm - 8:30pm

Telephone

+918050710699

Website

Alerts

Be the first to know and let us send you an email when Bharati Ayurveda Health Care posts news and promotions. Your email address will not be used for any other purpose, and you can unsubscribe at any time.

Contact The Practice

Send a message to Bharati Ayurveda Health Care:

Share

Share on Facebook Share on Twitter Share on LinkedIn
Share on Pinterest Share on Reddit Share via Email
Share on WhatsApp Share on Instagram Share on Telegram