06/12/2020
#ವೀರ_ಯೋಧನಿಗೆ_ಆತ್ಮೀಯ_ಸನ್ಮಾನ....
ಆತ್ಮೀಯರೇ.....
ನಮ್ಮ ದೇಶದ ರಕ್ಷಣೆ ಹಾಗೂ ನಮ್ಮೆಲ್ಲರ ಸುರಕ್ಷತೆಗಾಗಿ ಸದಾ ತ್ಯಾಗಮಯಿಗಳಾದ ವೀರ ಯೋಧರು ನಮ್ಮ ಹೆಮ್ಮೆ..ಅಂತಹ ಯೋಧರೊಬ್ಬರು ನಿವೃತ್ತಿಯಾಗಿ ತಮ್ಮ ಕರ್ತವ್ಯ ನಿರ್ವಹಿಸಿ ಮರಳಿ ಗೂಡಿಗೆ ಬರುತ್ತಿದ್ದಾರೆ.ಅಂತಹ ಯೋಧರಿಗೆ
ಹುಬ್ಬಳ್ಳಿ #ಕಾರಟಗಿ_ಮಲ್ಟಿಸ್ಪೆಷಾಲಿಟಿ_ಆಸ್ಪತ್ರೆ ಹಾಗೂ
#ರೈತರ_ಮತ್ತು_ಸೈನಿಕರ_ಅಭಿಮಾನಿಗಳ_ಸಂಘದ ಸಹಯೋಗದೊಂದಿಗೆ ನಾಳೆ ದಿನಾಂಕ 7-12-2020 ರಂದು ಸಂಜೆ 4 ಗಂಟೆಗೆ ಹುಬ್ಬಳ್ಳಿಯ ಕಾರಟಗಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಆವರಣದಲ್ಲಿ ಸನ್ಮಾನ ಹಮ್ಮಿಕೊಳ್ಳಲಾಗಿದೆ.
ಸುಧೀರ್ಘ 22 ವರ್ಷ ದೇಶಸೇವೆ ಸಲ್ಲಿಸಿ ನಿವೃತ್ತರಾಗಿ ಮರಳಿ ತಾಯ್ನಾಡಿಗೆ ಆಗಮಿಸುತ್ತಿರುವ ಗದಗ ಜಿಲ್ಲೆಯ ರೋಣ ತಾಲೂಕಿನ ಕೊತಬಾಳ ಗ್ರಾಮದ ಹೆಮ್ಮೆಯ ಸಿಆರ್ ಪಿ ಎಫ್ ಯೋಧರಾದ #ಅಪ್ಪು #ಹುಬ್ಬಳ್ಳಿಯವರಿಗೆ ನಾವೆಲ್ಲರೂ ಸೇರಿ ಗೌರವ ಸನ್ಮಾನ ಹಮ್ಮಿಕೊಂಡಿದ್ದೇವೆ.ಈ ಸುಸಮಯದಲ್ಲಿ ನೀವು ಸಹ ಪಾಲ್ಗೊಳ್ಳಲು ಮನವಿ....