10/09/2019
ಆಯುರ್ವೇದದ ಪ್ರಕಾರ ಗಾಸ್ಟ್ರಿಕ್ ಸಮಸ್ಯೆಗಳ ಮೂಲ ಕಾರಣ ಶರೀರದ ಅಗ್ನಿಯಲ್ಲಾಗುವ ವ್ಯತ್ಯಯ. ನಮ್ಮ ಜಠರದಲ್ಲಿರುವ ಅಗ್ನಿ ನಾವು ಸೇವಿಸಿದ ಆಹಾರವನ್ನು ಸಮರ್ಪಕವಾಗಿ ಜೀರ್ಣಿಸಿ ಪೋಷಕಾಂಶಕಗಳನ್ನು ಬೇರ್ಪಡಿಸಿ ಶರೀರಕ್ಕೆ ಪೂರೈಸುವುದು. ಯಾವಾಗ ಈ ಅಗ್ನಿಯಲ್ಲಿ ವ್ಯತ್ಯಯ ಉಂಟಾಗುವುದೋ ಆವಾಗ ವಿವಿಧ ರೀತಿಯ ಗಾಸ್ಟ್ರಿಕ್ ಸಮಸ್ಯೆಗಳು ಉಂಟಾಗುವುದು ಅಲ್ಲದೇ ಶರೀರದ ಹೆಚ್ಚಿನ ರೋಗಗಳಿಗೆ ಈ ಅಗ್ನಿಯಲ್ಲಾಗುವ ವ್ಯತ್ಯಯವೇ ಮೂಲ ಕಾರಣ. ಅತಿಯಾದ ಹುಳಿ, ಖಾರ, ಕರಿದ ಆಹಾರ, ಹಾಳಾದ ಆಹಾರ, ವಿಷಮ ಆಹಾರಗಳ ಸೇವನೆಯಿಂದಲೂ ಜಾಠರಾಗ್ನಿಯಲ್ಲಿ ವ್ಯತ್ಯಯ ಉಂಟಾಗುವುದು. ಯಾವಾಗ ಜಾಠರಾಗ್ನಿಯಲ್ಲಿ ವ್ಯತ್ಯಯವಾಗುವುದೋ ಆವಾಗ ಕೇವಲ ಗ್ಯಾಸ್ಟ್ರಿಕ್ ಸಮಸ್ಯೆಯಲ್ಲದೆ ಇತರ ಅನೇಕ ರೋಗಗಳಿಗೆ ಬಹಳ ಬೇಗನೆ ದಾರಿ ಮಾಡಿ ಕೊಡುವುದು. ಗಾಸ್ಟ್ರೋನಿಲ್ ನಲ್ಲಿರುವ ಘಟಕ ದ್ರವ್ಯಗಳು ಅಗ್ನಿಯಲ್ಲಾಗುವ ವ್ಯತ್ಯಯವನ್ನು ಶೀಘ್ರ ಸಹಜ ಸ್ಥಿತಿಗೆ ತಂದು ಗಾಸ್ಟ್ರಿಕ್ ಸಮಸ್ಯೆಯನ್ನು ನಿವಾರಿಸುವುದು.
ಅಗ್ನಿಯಲ್ಲಾಗುವ ವ್ಯತ್ಯಯವಲ್ಲದೆ ಜಠರದ ಮಾಂಸಪೇಶಿಗಳಲ್ಲಾಗುವ ಊತ ಕೂಡ ಗಾಸ್ಟ್ರಿಕ್ ಸಮಸ್ಯೆಯ ಇನ್ನೊಂದು ಪ್ರಮುಖ ಕಾರಣ. ಗಾಸ್ಟ್ರೋನಿಲ್ ಜಠರದ ಮಾಂಸಪೇಶಿಯ ಊತವನ್ನು ಶಮನಗೊಳಿಸಿ, ಸುದೃಢಗೊಳಿಸಿ ಸಮಸ್ಯೆಯನ್ನು ಮೂಲದಿಂದಲೇ ಗುಣಪಡಿಸುವಲ್ಲಿ ಸಹಾಯ ಮಾಡುವುದು. ಹೆಚ್. ಪೈಲೋರಿ ಇನ್ಫೆಕ್ಷನ್ ನಿಂದ ಉಂಟಾದ ಗಾಸ್ಟ್ರಿಕ್ ಸಮಸ್ಯೆಯಲ್ಲಿ ಕೂಡ ಈ ಔಷಧಿಯ ದೀರ್ಘ ಕಾಲದ ಸೇವನೆ ಸಹಕಾರಿ.
ಇನ್ನು ಅನೇಕರಲ್ಲಿ ಕೆಲವು ನಿರ್ದಿಷ್ಟ ಆಹಾರಕ್ಕೆ ಶರೀರ ವ್ಯತಿರಿಕ್ತ ರೀತಿಯಲ್ಲಿ ಪ್ರತಿಕ್ರಿಯೆ ನೀಡುವುದರಿಂದ ಗಾಸ್ಟ್ರಿಕ್ ಹಾಗೂ ಗ್ರಹಣಿ (colitis) ಎಂಬ ಸಮಸ್ಯೆ ಉಂಟಾಗುವುದು. ಆಹಾರ ಸೇವಿಸಿದ ಒಡನೆ ಅಥವಾ ಸ್ವಲ್ಪ ಸಮಯದಲ್ಲಿ ಮಲವಿಸರ್ಜನೆ ಮಾಡಬೇಕಾಗಿ ಬರುವುದು, ದಿನದಲ್ಲಿ ಅನೇಕ ಬಾರಿ ಮಲ ವಿಸರ್ಜನೆ ಮಾಡುವುದು ಇದರ ಮುಖ್ಯ ಲಕ್ಷಣ.
ಇನ್ನು ಅನೇಕರಲ್ಲಿ ಜಾಠರಾಗ್ನಿ ವ್ಯತ್ಯಯದಿಂದ ಮೈಗ್ರೇನ್ ತಲೆನೋವು, ಪದೇ ಪದೇ ಬಾಯಿಹುಣ್ಣು, ಅತಿಸಾರ, ಜಡತ್ವ ಹಾಗೂ ಅನೇಕ ಶಾರೀರಿಕ ಮತ್ತು ಮನೋದೈಹಿಕ ಸಮಸ್ಯೆಗಳು ಉದ್ಭವವಾಗುವುದು, ಅಂತಹವರಲ್ಲೂ ಉಕ್ಕಿನಡ್ಕಾಸ್ ಗಾಸ್ಟ್ರೋನಿಲ್ ಅತ್ಯಂತ ಪ್ರಯೋಜನಕಾರಿ.
Dosage: 2 - 5 ml 2 to 3 times daily
Ideal herbal combination for Gastritis, Hyperacidity, Peptic ulcers, Dyspepsia, Spasmodic pains, Flatulence, GERD and AMA doshas. Packing : 100 ml x 6 Units