13/04/2026
ಮಕ್ಕಳಿಗೆ ಮಾನಸಿಕವಾಗಿ ಧೈರ್ಯ ತುಂಬಲು ಬೇಸಿಗೆ ಶಿಬಿರಗಳು ಅತ್ಯಗತ್ಯ ☀️👧👦
ಮಾನಸಾಧಾರ ಟ್ರಸ್ಟ್, ನಮ್ಮ ಹಳ್ಳಿ ಥಿಯೇಟರ್ (ರಿ), ಶಿವಮೊಗ್ಗ ಮತ್ತು ಮನಸ್ಪೂರ್ತಿ ಮಕ್ಕಳ ಕಲಿಕಾ ಕೇಂದ್ರ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮನಸ್ಪೂರ್ತಿ ಬೇಸಿಗೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಡಾ. ಐಶ್ವರ್ಯ ಅವರು, ಮಕ್ಕಳಿಗೆ ಇಂದಿನ ಒತ್ತಡದ ಜೀವನದಿಂದ ಹೊರಬರಲು ಇಂತಹ ಶಿಬಿರಗಳು ಬಹಳ ಮುಖ್ಯವೆಂದು ತಿಳಿಸಿದರು 💬✨
ಈ ಶಿಬಿರಗಳು ಮಕ್ಕಳಿಗೆ ಆತ್ಮವಿಶ್ವಾಸ, ಧೈರ್ಯ ಮತ್ತು ಮಾನಸಿಕ ಶಕ್ತಿ ನೀಡುವುದರ ಜೊತೆಗೆ, ಅವರನ್ನು ಮೊಬೈಲ್ ಬಳಕೆದಿಂದ ದೂರವಿಡಲು ಸಹ ಸಹಾಯಕವಾಗುತ್ತದೆ 📵💪
ಸರ್ಕಾರಿ ಶಾಲೆಯ ಮಕ್ಕಳಿಗೆ ಈ ಶಿಬಿರಗಳು ಬಹಳ ಉಪಯುಕ್ತವೆಂದು ಹೇಳಿದರು 🎓
ಮನಸ್ಪೂರ್ತಿ ಬೇಸಿಗೆ ಶಿಬಿರ ಸಂಪೂರ್ಣ ಉಚಿತವಾಗಿದ್ದು, ಇದು 9ನೇ ವರ್ಷದ ಶಿಬಿರವಾಗಿದೆ 🎉
ಮುಖ್ಯವಾಗಿ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಹಾಗೂ ಸರ್ಕಾರಿ ಶಾಲೆಯ ಮಕ್ಕಳಿಗಾಗಿ ರೂಪಗೊಂಡಿದ್ದು, ನಾಟಕ 🎭, ಚಿತ್ರಕಲೆ 🎨, ಹಾಡು 🎶, ಕ್ರಾಫ್ಟ್ 🧵 ಮತ್ತು ಪರಿಸರ ಅರಿವು 🌿 ಇತ್ಯಾದಿ ವಿಷಯಗಳನ್ನು ಕಲಿಸಲಾಗುತ್ತಿದೆ ಎಂದು ಮಾನಸ ಟ್ರಸ್ಟ್ ನ ನಿರ್ದೇಶಕಿ ಡಾ. ರಜನೀ ಎ. ಪೈ ತಿಳಿಸಿದ್ದಾರೆ
ಕಾರ್ಯಕ್ರಮದಲ್ಲಿ ಶ್ರೀಮತಿ ಉಷಾ ಉಡುಪ, ಶ್ರೀಮತಿ ರಂಗನಾಯಕಿ (ಸಂಯೋಜಕರು), ಮತ್ತು ಶ್ರೀಮತಿ ಜ್ಯೋತಿ ಅರುಣ್ ಕುಮಾರ್ (ಸಂಚಾಲಕಿ) ಶಿಬಿರದ ಉದ್ದೇಶ ಮತ್ತು ಕಾರ್ಯಕ್ರಮಗಳ ವಿವರವನ್ನು ನೀಡಿದರು 👩🏫
ಈ ಸಂದರ್ಭದಲ್ಲಿ ಶಿಕ್ಷಕರು, ಆಪ್ತ ಸಲಹೆಗಾರರು, ಪೋಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು 🤝
AshokPai ManasaTrust ManasaHospital Shivamogga