07/10/2025
ತಾಲೂಕು ಕಾನೂನು ಸೇವಾ ಸಮಿತಿ ಭದ್ರಾವತಿ, ಶಿಶು ಅಭಿವೃದ್ಧಿ ಯೋಜನೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಭದ್ರಾವತಿ, ತಾಲೂಕು ಆರೋಗ್ಯ ಇಲಾಖೆ ಭದ್ರಾವತಿ, ಭದ್ರಾವತಿ ತಾಲೂಕು ಪಂಚಾಯತಿ ಇವರ ಸಂಯುಕ್ತಾಶ್ರಯದಲ್ಲಿ ಪೋಷಣ್ ಆಭಿಯಾನ್ ಯೋಜನೆಯ ಅಂಗವಾಗಿ ಹೊಳೆಹೊನ್ನೂರಿನ ವೀರಭದ್ರೇಶ್ವರ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಪೋಷಣ್ ಮಾಸಾಚರಣೆ ಕಾರ್ಯಕ್ರಮ, ಪೌಷ್ಟಿಕ ಆಹಾರ ಪದಾರ್ಥ ಮತ್ತು ಮಾತೃವಂದನಾ ಸಪ್ತಾಹ ಕಾರ್ಯಕ್ರಮದಲ್ಲಿ ಸರ್ಜಿ ಆಸ್ಪತ್ರೆಯ ನ್ಯೂಟ್ರಿಷನಿಸ್ಟ್ ಶ್ರೇಯಸ್ ಅವರು ಮತ್ತು ಫ್ಯಾಮಿಲಿ ಫಿಸಿಷಿಯನ್ ಡಾ.ರಜನಿ ಪಾಲ್ ಅವರು ಪಾಲ್ಗೊಂಡು ಗರ್ಭ ಸಂಸ್ಕಾರ, ಗರ್ಭಾವಸ್ಥೆಯ ಸಮಯದಲ್ಲಿ ಮಾನಸಿಕ ಆರೋಗ್ಯ ಮತ್ತು ಯೋಗ ಹಾಗೂ ಪೌಷ್ಟಿಕಾಂಶಯುಕ್ತ ಆಹಾರದ ಬಗೆಗೆ ಮಾಹಿತಿ ನೀಡಿದರು.