29/08/2025
*"ಲಯನ್ಸ್ ನಯನ ನೇತ್ರ ಭಂಡಾರ"* ಮತ್ತು ಎಂ ಎಂ ಜೋಶಿ ಗಣೇಶ ನೇತ್ರಾಲಯ ದ ವತಿಯಿಂದ ರಾಷ್ಟೀಯ ನೇತ್ರದಾನ ಪಾಕ್ಷಿಕೋತ್ಸವ..
National Eye Donation Fortnight
August 25th to 8th September
ತಾನು ನಶಿಸಿ ಹೋಗುವ ಮುನ್ನ ಮತ್ತೊಂದನ್ನು ಬೆಳಗಿಸುವ ದೀಪದ ಸಂಸ್ಕಾರವನ್ನು ನಮ್ಮಲ್ಲಿ ಬೆಳಸಿಕೊಳ್ಳೋಣ.
ಆಜೀವ ಪರಿಯಂತ ಕತ್ತಲೆಯನ್ನೇ ಕಾಣುತ್ತಿರುವ ಬದುಕಿಗೆ ನಾವು ನೀವು ಕಟ್ಟಕಡೆಯದಾಗಿ ನೀಡುವ ಆಶಾಕಿರಣ ಅಂಧರಲ್ಲಿ ಪ್ರಜ್ವಲಿಸುವಂತಾಗಲಿ.
*ನೇತ್ರದಾನ ಮಾಡುವ ಧ್ಯೇಯ ನಮ್ಮದಾಗಲಿ!*
ಪ್ರತಿ ವರ್ಷದಂತೆ ಈ ವರ್ಷವೂ ಆಗಸ್ಟ್ 25 ರಿಂದ 8ನೇ ಸೆಪ್ಟೆಂಬರ್ ವರೆಗೆ ದೇಶಾದ್ಯಂತ ರಾಷ್ಟ್ರೀಯ ನೇತ್ರದಾನ ಪಾಕ್ಷಿಕವನ್ನು ಆಚರಿಸಲಾಗುತ್ತದೆ. ನೇತ್ರಾದಾನದ ಮಹತ್ವ ಹಾಗೂ ನಮ್ಮ ಮರಣದ ನಂತರ ಕಣ್ಣುಗಳನ್ನು ದಾನ ಮಾಡುವ ಪ್ರತಿಜ್ಞೆಯ ಕುರಿತು ಜಾಗೃತಿ ಮೂಡಿಸುವುದು ಇದರ ಮೂಲ ಉದ್ದೇಶ.
ಹಲವಾರು ಕಾರಣಗಳಿಂದ ಕಪ್ಪುಗುಡ್ಡೆಯ ( Corneal Blindness ) ಅಂಧತ್ವದಿಂದ ಬಳಲುತ್ತಿರುವ ರೋಗಿಗಳಿಗೆ ನೇತ್ರಾದಾನಿಯಿಂದ ಪಡೆದ ಪಾರದರ್ಶಕ ಕಪ್ಪುಗುಡ್ಡೆಯ ಕಸಿ ( Corneal Transplantation ) ಶಸ್ತ್ರಚಿಕಿತ್ಸೆಯಿಂದಲೇ ಮಾತ್ರ ಅವರು ದೃಷ್ಟಿಯ ಬೆಳಕನ್ನು ಪಡೆಯಬಹುದು.
ಇತ್ತೀಚಿನ ಅಂಕಿ ಅಂಶಗಳ ಪ್ರಕಾರ ನಮ್ಮ ದೇಶದಲ್ಲಿ ಸುಮಾರು 1.2 ಮಿಲಿಯನ್ ನಷ್ಟು ಜನ ಕಪ್ಪುಗುಡ್ಡೆಯ ಅಂಧತ್ವದಿoದ ಬಳಲುತ್ತಿದ್ದಾರೆ. ಆದರೆ ದುರದೃಷ್ಟವಶಾತ ನಮ್ಮ ದೇಶದಲ್ಲಿ ಹಲವಾರು ಕಟ್ಟುಪಾಡುಗಳಿಂದ, ಮೂಡನಂಬಿಕೆಗಳಿಂದ ನೇತ್ರದಾನ ಮಾಡುವವರ ಸಂಖ್ಯೆ ಅತಿ ವಿರಳ, ಹೀಗಾಗಿ ಹೆಚ್ಚು ಜನ ಸ್ವಪ್ರೇರಿತರಾಗಿ ನೇತ್ರದಾನ ಕಾರ್ಯಕ್ಕೆ ಕೈಜೋಡಿಸಬೇಕು.
ನಮ್ಮ ನೆರೆಹೊರೆಯವರಲ್ಲಿ ಅನೇಕಾನೇಕ ಕಾರಣಗಳಿಂದ ಮರಣ ಹೊಂದಿರುವ ಕುಟುಂಬದವರನ್ನು ನೇತ್ರದಾನಕ್ಕೆ ಮನವೊಲಿಸೋಣ.
ಇದೇ ಸದುದ್ದೇಶದಿಂದ ನಮ್ಮ ಶಿರಸಿಯ ಎಂ ಎಂ ಜೋಶಿ ಗಣೇಶ ನೇತ್ರಾಲಯದ ಅಂಗ ಸಂಸ್ಥೆಯಾದ ಲಯನ್ಸ್ ನಯನ ನೇತ್ರ ಭಂಡಾರವು ಸುಸಜ್ಜಿತವಾದ ವ್ಯವಸ್ಥೆಯೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಕಳೆದ 6-7 ವರ್ಷಗಳ ಅವಧಿಯಲ್ಲಿ 300ಕ್ಕಿಂತ ಹೆಚ್ಚು ಕಾರ್ನಿಯ ಅಂಧರಿಗೆ ಅತ್ಯಾಧುನಿಕ ಶಸ್ತ್ರಚಿಕಿತ್ಸೆಯ (Corneal Transplantation) ಮೂಲಕ ದೃಷ್ಟಿಯನ್ನು ಕಲ್ಪಿಸಲಾಗಿದೆ.
ಹಾಗೂ ಹಲವಾರು ವೇದಿಕೆಗಳ ಮೂಲಕ ನಿರಂತರವಾಗಿ ನೇತ್ರದಾನದ ಕುರಿತು ಮಾಹಿತಿಯನ್ನು ನೀಡಲಾಗುತ್ತಿದೆ. ಈ ರಾಷ್ಟ್ರೀಯ ನೇತ್ರದಾನದ ಪಾಕ್ಷಿಕೋತ್ಸವದ ನಿಮಿತ್ತ ತಮ್ಮ ನೇತ್ರ ಭಂಡಾರದ ವತಿಯಿಂದ ಹತ್ತು ಹಲವು ನೇತ್ರದಾನ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಬನ್ನಿ ದೃಷ್ಟಿಯ ಅಮೂಲ್ಯವಾದ ಕೊಡುಗೆಯನ್ನು ಆಚರಿಸೋಣ. ಇಂದೇ ನೇತ್ರದಾನ ಪ್ರತಿಜ್ಞೆಯನ್ನು ಮಾಡೋಣ.
*"ನೇತ್ರದಾನ ನಮ್ಮ ಕುಟುಂಬ ಸಂಪ್ರದಾಯವಾಗಲಿ".*
*ನೇತ್ರದಾನಕ್ಕೆ ಇರಬೇಕಾದ ಅರ್ಹತೆಗಳು.*
• ನೇತ್ರದಾನ ಮತ್ತು ಸಂಗ್ರಹಣೆ ಮರಣ ನಂತರದ ಪ್ರಕ್ರಿಯೆಯಾಗಿದೆ.
• ನೇತ್ರ ಸಂಗ್ರಹಣೆಗೆ ಬೇಕಾದ ಸಮಯ ಕೇವಲ 20 ನಿಮಿಷ ಮಾತ್ರ.
• ನೇತ್ರದಾನದ ನಂತರ ದಾನಿಯ ಮುಖ ವಿರೂಪಗೊಳ್ಳುವುದಿಲ್ಲ.
• ಒಬ್ಬರ ನೇತ್ರದಾನದಿಂದ ಇಬ್ಬರು ವ್ಯಕ್ತಿಗಳಿಗೆ ದೃಷ್ಟಿ ನೀಡಬಹುದು.
• ದಾನಿಯ ನೇತ್ರ ಸಂಗ್ರಹಣೆಗೆ ಬಂಧುಗಳ ಅನುಮತಿ ಕಡ್ಡಾಯ.
• ನೇತ್ರದಾನಕ್ಕೆ ಮೃತರ ವಯಸ್ಸು ಅಡ್ಡಿ ಬರುವುದಿಲ್ಲ, ಕೇವಲ ಎರಡುವರೆ ಗಂಟೆ ಬದುಕಿ ಅಳಿದ ಶಿಶುವಿನಿಂದ ಹಿಡಿದು, 102 ವರ್ಷ ವೃದ್ಧರ ಕಣ್ಣುಗಳನ್ನು ಸಂಗ್ರಹಿಸಿದ ದಾಖಲೆಗಳಿವೆ.
• ಕನ್ನಡಕದಾರಣೆ, ಸಕ್ಕರೆ ಕಾಯಿಲೆ, ರಕ್ತದೊತ್ತಡ, ಕಣ್ಣುಪೊರೆ ಶಸ್ತ್ರಚಿಕಿತ್ಸೆ, ಮೃತರ ನೇತ್ರದಾನಕ್ಕೆ ಅಡ್ಡಿ ಬರುವುದಿಲ್ಲ.
• ದಾನಿಯ ಪೂರ್ವ ನೊಂದಣಿ ಸಹ ಬೇಕಿಲ್ಲ.
• ರಕ್ತ ಗುಂಪಿನ ಹೊಂದಾಣಿಕೆ ಸಹ ಅನಗತ್ಯ
• ಮುಖ್ಯವಾಗಿ ಕಾರ್ನಿಯ ಭಾಗ ಆರೋಗ್ಯಕರ ಹಾಗೂ ಪಾರದರ್ಶಕವಾಗಿರಬೇಕು.
*ಮೃತರ ಕಣ್ಣು ದಾನಕ್ಕೆ ಮೊದಲು ಬಂಧುಗಳು ಅನುಸರಿಸಬೇಕಾದ ಮುಂಜಾಗ್ರತೆ ಕ್ರಮಗಳು.*
• ಮರಣ ಸಂಭವಿಸಿದ ಕೂಡಲೇ ಮೃತರ ಕಣ್ಣು ರೆಪ್ಪೆ ಮುಚ್ಚುವುದು.
• ಮರಣದ ಸಮಯ ದಾಖಲು ಮಾಡಬೇಕು ಮರಣ ನಂತರ 6 ಗಂಟೆಗಳ ಅವಧಿಯಲ್ಲಿ ಮಾತ್ರ ಕಣ್ಣುಗಳನ್ನು ಸಂಗ್ರಹಿಸಲು ಯೋಗ್ಯ.
• ಹಣೆಯ ಮೇಲೆ (ಕಣ್ಣಿನ ಮೇಲೆಲ್ಲಾ ) ಹಿಮಗಡ್ಡೆಯ ಪಟ್ಟಿ / ಅಥವಾ ಒದ್ದೆ ಬಟ್ಟೆ ಹಾಕಬೇಕು.
• ತಲೆಕೆಳಗೆ ಎತ್ತರದ ದಿಂಬು ಇಡಬೇಕು.
• ಫ್ಯಾನ್,ಎಸಿ ಆರಿಸಬೇಕು.
• ಕೂಡಲೇ ಹತ್ತಿರ ನೇತ್ರ ಭಂಡಾರಕ್ಕೆ ಸುದ್ದಿ ಮುಟ್ಟಿಸಿರಿ.
• ನಿಮ್ಮ ಸಂಬಂಧಿಗಳಿಗೆ ಮಿತ್ರರಿಗೆ ಸಹೋದ್ಯೋಗಿಗಳಿಗೆ ಹಾಗೂ ನೆರೆಹೊರೆಯವರಿಗೆ ನೇತ್ರದಾನದ ಬಗ್ಗೆ ಮನವೊಲಿಸಿರಿ...
*ನೇತ್ರದಾನ ಅಂದರ ಬಾಳಿನ ದೃಷ್ಟಿಯ ಜೀವದಾನ!!*
ಲಯನ್ಸ್ ನಯನ ನೇತ್ರಭಂಡಾರ
ಎಂ ಎಂ ಜೋಶಿ ಗಣೇಶ ನೇತ್ರಾಲಯ ಶಕ್ತಿ ನಗರ, ದೇವಿಕೆರೆ, ಶಿರಸಿ.
ಫೋ.: 08384-223644
ಮೊ.: 9482358089.
" ದೃಷ್ಟಿಯ ಸುರಕ್ಷೆ - ನಮ್ಮ ಧ್ಯೇಯ"