15/11/2025
ನಮ್ಮ ಹಿರಿಯ ಸಹಕಾರಿಗಳು, ಮಾರ್ಗದರ್ಶಕರು, ಸಿದ್ಧಗಂಗಾ ಮಠದ ಕಾರ್ಯದರ್ಶಿಗಳು ಹಾಗೂ ಸಿದ್ಧಗಂಗಾ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್‌ನ ಅಧ್ಯಕ್ಷರಾದ ಶ್ರೀಯುತ ಟಿ.ಕೆ. ನಂಜುಂಡಪ್ಪನವರಿಗೆ ಕರ್ನಾಟಕ ರಾಜ್ಯ ಸಹಕಾರ ಇಲಾಖೆಯು ಪ್ರತಿಷ್ಠಿತ 'ಸಹಕಾರ ರತ್ನ' ಪ್ರಶಸ್ತಿಯನ್ನು ನೀಡಿ ಗೌರವಿಸಿರುವುದು, ಅವರ ಅಸಾಧಾರಣ ಕಾರ್ಯತತ್ಪರತೆ ಮತ್ತು ಕಾರ್ಯಕ್ಷಮತೆಗೆ ದೊರೆತ ಮಹೋನ್ನತ ಸಾಕ್ಷಿಯಾಗಿದೆ.
ಸಾವಿರಾರು ಸಹಕಾರಿ ಸದಸ್ಯರ ಜೀವನಕ್ಕೆ ಆಸರೆಯಾಗಿ, ಅವರಿಗೆ ಆರ್ಥಿಕವಾಗಿ ಸದೃಢರಾಗಲು ಸಹಾಯಹಸ್ತ ಚಾಚಿದ ಮತ್ತು ಸಿದ್ಧಗಂಗಾ ಶಿಕ್ಷಣ ಸಂಸ್ಥೆಯನ್ನು ಉನ್ನತೀಕರಿಸಿದ ಕೀರ್ತಿ ಶ್ರೀಯುತರಿಗೆ ಸಲ್ಲುತ್ತದೆ. ಈ ಶ್ರೇಷ್ಠ ಪ್ರಶಸ್ತಿಯು ಅವರ ದಶಕಗಳ ಸಾಧನೆಗೆ ಸಂದ ಮುಕುಟಪ್ರಾಯವಾದ ಗೌರವವಾಗಿದೆ.
ಅವರ ಈ ಮಹತ್ತರ ಸಾಧನೆಗಾಗಿ, ಶ್ರೀಯುತ ಟಿ.ಕೆ. ನಂಜುಂಡಪ್ಪನವರಿಗೆ ಅಭಿಮಾನಪೂರ್ವಕವಾಗಿ ಮತ್ತು ಹೃತ್ಪೂರ್ವಕವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.